ಶ್ವೇತಭವನದ ಹೇಳಿಕೆಯು ಭಾರತದ ಬಗ್ಗೆ ಮಾತನಾಡಿದ್ದ 'ರಾಗಾ'ಗೆ ಕಪಾಳಮೋಕ್ಷ: ಬಿಜೆಪಿ ವಾಗ್ದಾಳಿ

ಬೆಂಗಳೂರು, ಜೂನ್ 07: ಅಮೆರಿಕಾ ಭೇಟಿ ವೇಳೆ ಭಾರತದ ಪ್ರಜಾಪ್ರಭುತ್ವ ಕುರಿತು ಮಾತನಾಡಿದ್ದ ರಾಹುಲ್ ಗಾಂಧಿಗೆ ಅಮೆರಿಕದ ಶ್ವೇತಭವನ ಭಾರತದ ಕುರಿತು ಬಿಡುಗಡೆ ಮಾಡಿದೆ. ಇದು ರಾಹುಲ್ ಗಾಂಧಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

'ರಾಗಾ' ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಜಾಫರ್ ಮಾತನಾಡಿದ್ದು, ರಾಹುಲ್ ಗಾಂಧಿಯವರು ಅಮೆರಿಕಾ ಭೇಟಿಯ ವೇಳೆ ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ನಾಚಿಕೆಯಿಲ್ಲದೇ ಟೀಕಿಸಿದ್ದಾರೆ. ಇತ್ತ ಶ್ವೇತಭವನವು ಭಾರತದ ಪ್ರಜಾಪ್ರಭುತ್ವವನ್ನು ಚೈತನ್ಯಯುತ ಎಂದು ಶ್ಲಾಘಿಸಿದೆ ಎಂದು ತಿರುಗೇಟು ನೀಡಿದರು.

BJP Leaders Slams On Congress Rahul Gandhi After Released Statement Of US Shweta Bhavan

ರಾಹುಲ್ ಗಾಂಧಿ ವಿದೇಶಿ ನೆಲದಲ್ಲಿ ಭಾರತವನ್ನು ದೂಷಿಸುವ ಕೆಲಸ ಮುಂದುವರೆಸಿದ್ದಾರೆ. ರಾಹುಲ್ ಗಾಂಧಿಯಂತಹ ಜನರು ವಿನಾಕಾರಣ ಭಾರತವನ್ನು ಯಾವಾಗಲೂ ಖಂಡಿಸುತ್ತಿರುವುದು ದುರದೃಷ್ಟಕರ ಸಂಗತಿ ಎಂದರು.

ಯುಎಸ್-ಭಾರತ ದೇಶಗಳ ಮಧ್ಯೆ ಆರ್ಥಿಕ ಸಹಕಾರ ಹೆಚ್ಚುತ್ತಿದೆ. ಭಾರತವು ಇಂಡೋ-ಪೆಸಿಫಿಕ್ ಮಹಾಸಾಗರದ ಭದ್ರತೆಗಾಗಿ ರಚಿಸಲಾದ ಕ್ವಾಡ್‌ನ ಪ್ರಮುಖ ಮಿತ್ರರಾಷ್ಟ್ರವಾಗಿದೆ. ಭಾರತವು ದ್ವಿಪಕ್ಷೀಯ ಸಂಬಂಧಗಳಲ್ಲಿ ಮಾತ್ರವಲ್ಲದೆ ಬಹುಪಕ್ಷೀಯ ಸಂಬಂಧಗಳ ದೃಷ್ಟಿಯಿಂದಲೂ ಅಮೆರಿಕಕ್ಕೆ ಪ್ರಮುಖ ಮಿತ್ರ ಎಂದು ಅನೇಕ ಬಗೆಯ ಕಾರಣ ಸಹ ಇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಂಬರುವ ಭೇಟಿಯಲ್ಲಿ ಉಭಯ ದೇಶಗಳ ನಡುವೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.

ಭಾರತ ಬಗ್ಗೆ ಶ್ವೇತಭವನ ಹೇಳಿದ್ದೇನು?

ಈ ತಿಂಗಳ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು, ಅದಕ್ಕು ಮುನ್ನವಾಗಿ ಶ್ವೇತಭವನ ಭಾರತದ ಕುರಿತು ಪ್ರಶಂಸನೀಯ ಹೇಳಿಕೆ ನೀಡಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಜಾನ್ ಕಿರ್ಬಿ ಅವರು, ಭಾರತವು ಅನೇಕ ಹಂತಗಳಲ್ಲಿ ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಬಲವಾದ ಪಾಲುದಾರ ಎಂದು ಶ್ಲಾಘಿಸಿದ್ದಾರೆ.

BJP Leaders Slams On Congress Rahul Gandhi After Released Statement Of US Shweta Bhavan

ಭಾರತದೊಂದಿಗೆ ರಕ್ಷಣಾ ಸಹಕಾರವನ್ನು ನಾವು ಭಾರತದೊಂದಿಗೆ ಮುಂದುವರಿಸಲಿದ್ದೇವೆ. ಎರಡು ದೇಶಗಳ ನಡುವೆ ಬಲವಾದ ಆರ್ಥಿಕ ವ್ಯಾಪಾರವಿದೆ. ಭಾರತವು ಒಂದು ಪೆಸಿಫಿಕ್ ಕ್ವಾಡ್‌ನ ಸದಸ್ಯ ಮತ್ತು ಇಂಡೋ-ಪೆಸಿಫಿಕ್ ಭದ್ರತೆಗೆ ಸಂಬಂಧಿಸಿದಂತೆ ಪ್ರಮುಖ ಸ್ನೇಹಿತ ಮತ್ತು ಪಾಲುದಾರ ಎಂದು ಕಿರ್ಬಿ ಹೇಳಿದ್ದಾರೆ.

ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಸಂವಾದದದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು, ಅಮೆರಿಕಾ ಮತ್ತು ಭಾರತವು ಸಿನರ್ಜಿಯನ್ನು ಹೊಂದಿವೆ, ಅವು ಒಟ್ಟಿಗೆ ಸೇರಿದರೆ ಅತ್ಯಂತ ಶಕ್ತಿಯುತವಾಗಬಹುದು. ನಾವು ಚೀನಾವನ್ನು ಪ್ರಬಲವಾಗಿ ಎದುರಿಸುತ್ತಿದ್ದೇವೆ. ಭಾರತದ ಪ್ರಜಾಪ್ರಭುತ್ವವಲ್ಲದ ಪರಿಸ್ಥಿತಿಯಲ್ಲಿ ನಾವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ರಾಗಾ ವಿರುದ್ಧ ಜೆಪಿ ನಡ್ಡಾ ಗುಡುಗು

ವಿದೇಶಿ ನೆಲದಲ್ಲಿ ಭಾರತ ಕುರಿತು ಮಾತನಾಡಿರುವ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿಯ ಇತರ ನಾಯಕರು ಖಂಡಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷರು ಯಾವುದೇ ಪ್ರೀತಿಯ ಅಂಗಡಿ ನಡೆಸುತ್ತಿಲ್ಲ, ಬದಲಾಗಿ "ದ್ವೇಷದ ಮೆಗಾ ಶಾಪಿಂಗ್ ಮಾಲ್" ಅನ್ನು ತೆರೆದಿದ್ದಾರೆ ಎಂದು ಮಾರ್ಮಿಕವಾಗಿ ಗುಡುಗಿದರು.

ನರೇಂದ್ರ ಮೋದಿ ಸರ್ಕಾರದ ಒಂಬತ್ತು ವರ್ಷಗಳ ಕಾಲ ದೇಶವನ್ನು ಪರಿವರ್ತಿಸಿದೆ ಮತ್ತು ಅದರ ಪ್ರಗತಿಯನ್ನು ಇಂದು ಇಡಿ ಜಗತ್ತು ಭಾರತವನ್ನು ಗುರುತಿಸುತ್ತಿದೆ ಎಂದು ನಡ್ಡಾ ಹೇಳಿದರು. ಭಾರತ ಹೊಸ ದಾಖಲೆಗಳನ್ನು ನಿರ್ಮಿಸಿದಾಗಲೆಲ್ಲಾ ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ ಭಾರತದ ಹೆಮ್ಮೆಯನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಹೀಗೆ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+