ಜೆಡಿಯು ಮುಂದೆ ಮಂಡಿ ಊರಿದ ಬಿಜೆಪಿ: 50:50 ಸೀಟು ಹಂಚಿಕೆ
ಪಾಟ್ನಾ, ಅಕ್ಟೋಬರ್ 26: ಲೋಕಸಭೆ ಚುನಾವಣೆ 2019 ಕ್ಕೆ ಬಿಹಾರದಲ್ಲಿ ಜಿಡಿಯು ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿದ್ದು. ಇಂದು ಸೀಟು ಹಂಚಿಕೆ ಸಹ ಪೂರ್ಣಗೊಂಡಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ಬಿಜೆಪಿಯು 50:50 ಅನುಪಾತದಲ್ಲಿ ಸೀಟುಗಳನ್ನು ಹಂಚಿಕೊಳ್ಳಲಿದೆ. ಎರಡೂ ಪಕ್ಷಗಳು ಸಮ ಸೀಟುಗಳಲ್ಲಿ ಪರಸ್ಪರ ಸ್ಪರ್ಧೆ ಮಾಡಲಿವೆ.
ಬಿಹಾರದಲ್ಲಿ 40 ಲೋಕಸಭೆ ಕ್ಷೇತ್ರಗಳಿದ್ದು. ನಿತೇಶ್ ನಾಯಕತ್ವದ ಜೆಡಿಯು 20 ಸೀಟುಗಳಲ್ಲಿ ಸ್ಪರ್ಧಿಸಿದರೆ ಬಿಜೆಪಿ ಉಳಿಕೆ 20 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಆರ್‌ಜೆಡಿ ಮತ್ತು ಕಾಂಗ್ರೆಸ್‌ಗೆ ಹಿನ್ನಡೆ ಮಾಡಲೆಂದು ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಅಮಿತ್ ಶಾ ಮತ್ತು ನಿತೀಶ್ ಕುಮಾರ್ ಇಂದು ಹೇಳಿದ್ದಾರೆ.
ಬಿಜೆಪಿಯ ಇತರೆ ಮಿತ್ರ ಪಕ್ಷಗಳಿಗೂ ಗೌರವಾನ್ವಿತ ಸಂಖ್ಯೆಯ ಸೀಟುಗಳನ್ನು ನೀಡಲಾಗುವುದು. ಮಿತ್ರ ಪಕ್ಷಗಳಿಗೆ ಸೀಟು ನೀಡಿದ್ದಾಗ್ಯೂ ಬಿಜೆಪಿ ಮತ್ತು ಜೆಡಿಯು ಸಮಪ್ರಮಾಣದ ಸೀಟುಗಳಲ್ಲಿ ಸ್ಪರ್ಧೆ ಮಾಡಲಿದೆ ಎಂದು ಅವರು ಹೇಳಿದರು.

2014ರಲ್ಲಿ ಯಾವುದು ಎಷ್ಟು ಗೆದ್ದಿತ್ತು
ಕಳೆದ 2014ರ ಚುನಾವಣೆಯಲ್ಲಿ ಈ ಎರಡು ಪಕ್ಷಗಳು ಮೈತ್ರಿ ಮುರಿದುಕೊಂಡಿದ್ದವು ಆಗ ಜೆಡಿಯು ಪಕ್ಷವು ಕೇವಲ ಎರಡು ಲೋಕಸಭೆ ಸೀಟುಗಳನ್ನು ಗೆದ್ದಿದ್ದರೆ ಬಿಜೆಪಿಯು 28 ಸೀಟುಗಳಲ್ಲಿ ಗೆದ್ದಿತ್ತು. ಅದಾಗ್ಯೂ ಸಹ ಜೆಡಿಯು ಪಕ್ಷವು ಹೆಚ್ಚಿನ ಸೀಟುಗಳಿಗಾಗಿ ಬೇಡಿಕೆ ಇಟ್ಟಿತ್ತು.

ಮೈತ್ರಿ ಸರ್ಕಾರ ರಚಿಸಿರುವ ಜೆಡಿಯು, ಬಿಜೆಪಿ
ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ನಿತೇಶ್ ಕುಮಾರ್ ಮೊದಲಿಗೆ ಆರ್‌ಜೆಡಿ ಜೊತೆ ಸರ್ಕಾರ ರಚಿಸಿದ್ದರು ಆದರೆ ಆ ನಂತರ ಆ ಮೈತ್ರಿ ಮುರಿದುಕೊಂಡು ಬಿಜೆಪಿ ಜೊತೆ ಕೈಜೋಡಿಸಿದರು. ಹಾಗಾಗಿ ಬಿಜೆಪಿಯು ಜೆಡಿಯುಗೆ ಹೆಚ್ಚಿನ ಸೀಟು ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.

ಜೆಡಿಯು ಮುಂದೆ ಮಂಡಿ ಊರಿದ ಬಿಜೆಪಿ
ನಾವು ಯಾವುದೇ ಕಾರಣಕ್ಕೂ ಕಡಿಮೆ ಸೀಟಿಗೆ ಸ್ಪರ್ಧಿಸುವುದಿಲ್ಲ ಎಂದು ನಿತೀಶ್ ಕುಮಾರ್ ಈ ಮೊದಲೇ ಹೇಳಿದ್ದರು. ಸೀಟು ಹಂಚಿಕೆಯಲ್ಲಿ ತಾರತಮ್ಯ ಆದರೆ ಬಿಹಾರದಲ್ಲಿನ ಮೈತ್ರಿ ಸರ್ಕಾರ ಉರುಳುವ ಅಪಾಯವೂ ಇತ್ತು ಹಾಗಾಗಿ ರಾಷ್ಟ್ರೀಯ ಪಕ್ಷ ಬಿಜೆಪಿ ಜೆಡಿಯು ಮುಂದೆ ಮಂಡಿ ಊರಿದೆ.

ಕಾಂಗ್ರೆಸ್-ಆರ್‌ಜೆಡಿ ಮೈತ್ರಿ
ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೆ. ಇತ್ತ ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಸಹ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಮಾತುಕತೆಗಳು ನಡೆಯುತ್ತಿವೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications