ಕಾಂಗ್ರೆಸ್ ಕುರಿತು ಆಧಾರರಹಿತ ಜಾಹೀರಾತು: ಬಿಜೆಪಿಗೆ ಚುನಾವಣಾ ಆಯೋಗದ ನೋಟೀಸ್
ನವದೆಹಲಿ, ಮೇ.10: ಕಾಂಗ್ರೆಸ್ ಅನ್ನು "ವಿಶ್ವದ ಅತ್ಯಂತ ಭ್ರಷ್ಟ ಪಕ್ಷ" ಎಂದು ಕರ್ನಾಟಕ ಬಿಜೆಪಿ ಪತ್ರಿಕೆಗೆ ಜಾಹೀರಾತು ನೀಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ "ಪರಿಶೀಲಿಸಬಹುದಾದ ಮತ್ತು ಪತ್ತೆಹಚ್ಚಬಹುದಾದ" ಸತ್ಯಗಳನ್ನು ಒದಗಿಸುವಂತೆ ಚುನಾವಣಾ ಆಯೋಗವು ಕರ್ನಾಟಕ ಬಿಜೆಪಿಗೆ ನೋಟಿಸ್ ನೀಡಿದೆ.
ಈ ಹಿಂದೆ, ಬಿಜೆಪಿಯ ದೂರಿನ ಮೇರೆಗೆ, ಚುನಾವಣಾ ಸಮಿತಿಯು ತನ್ನ "ಭ್ರಷ್ಟಾಚಾರ ದರ ಕಾರ್ಡ್" ಜಾಹೀರಾತಿನ ಬಗ್ಗೆ ಕಾಂಗ್ರೆಸ್‌ಗೆ ಇದೇ ರೀತಿಯ ಸೂಚನೆಯನ್ನು ನೀಡಿತ್ತು. ಈಗ ಕಾಂಗ್ರೆಸ್ ತಂಡ ಚುನಾವಣಾ ಸಮಿತಿಯನ್ನು ಸಂಪರ್ಕಿಸಿ ಬಿಜೆಪಿಯ ಜಾಹೀರಾತಿನ ಬಗ್ಗೆ ದೂರು ನಿಡಿದ ನಂತರ ಚುನಾವಣಾ ಆಯೋಗ (EC) ಕರ್ನಾಟಕ ಬಿಜೆಪಿಗೆ ಅದರ ಜಾಹೀರಾತಿನ ಕುರಿತು ನೋಟಿಸ್ ನೀಡಿದೆ.

ಆಯೋಗವು ತನ್ನ ನೋಟಿಸ್‌ನಲ್ಲಿ, "ಎದುರಾಳಿ ಪಕ್ಷಗಳ ನೀತಿ ಮತ್ತು ಆಡಳಿತದ ಟೀಕೆಯು ಸಂವಿಧಾನದಲ್ಲಿ ಖಾತ್ರಿಪಡಿಸಲಾದ ಹಕ್ಕು ಮತ್ತು ಭಾರತದ ಚುನಾವಣಾ ಪ್ರಕ್ರಿಯೆಯ ಅಡಿಯಲ್ಲಿ ವಿವಿಧ ರಾಜಕೀಯ ನಾಯಕರಿಗೆ ನಿಡಿರುವ ಹಕ್ಕು. ಆದರೆ, ಈ ಹಕ್ಕನ್ನು ಚಲಾಯಿಸುವಾಗ ವಿವಿಧ ರಾಜಕೀಯ ಪಕ್ಷಗಳು ಸಾರ್ವಜನಿಕ ಪ್ರಚಾರದ ಸಂದರ್ಭದಲ್ಲಿ ಉತ್ತಮ ಗುಣಮಟ್ಟವನ್ನು ಎತ್ತಿಹಿಡಿಯಬೇಕು. ಜೊತೆಗೆ ಮಾದರಿ ಸಂಹಿತೆಯ ವಿವಿಧ ನಿಬಂಧನೆಗಳು ಮತ್ತು ಸಂಬಂಧಿತ ಕಾನೂನುಗಳಿಗೆ ಬದ್ಧವಾಗಿರಬೇಕು" ಎಂದು ಹೇಳಿದೆ.
ಮೇ 9 ರಂದು ರಾತ್ರಿ 8 ಗಂಟೆಯೊಳಗೆ ಬಿಜೆಪಿ ನೀಡಿದ ಜಾಹೀರಾತಿನಲ್ಲಿನ ಹಕ್ಕುಗಳ ಬಗ್ಗೆ "ಪರಿಶೀಲಿಸಬಹುದಾದ ಮತ್ತು ಪತ್ತೆಹಚ್ಚಬಹುದಾದ ಸತ್ಯಗಳನ್ನು" ವಿವರಣೆಯೊಂದಿಗೆ ತಿಳಿಸಬೇಕು" ಎಂದು ಚುನಾವಣಾ ಆಯೋಗವು ರಾಜ್ಯ ಬಿಜೆಪಿಗೆ ನಿರ್ದೇಶಿಸಿದೆ. ಜೊತೆಗೆ ಈ ಸಾಕ್ಷಿಗಳನ್ನು "ಸಾರ್ವಜನಿಕ ಡೊಮೇನ್" ನಲ್ಲಿ ಹಾಕಲು ನಿರ್ದೇಶಿಸಿದೆ.

ಯಾವುದೇ ಪುರಾವೆಗಳನ್ನು ಒದಗಿಸದಿದ್ದರೆ, ಎಂಸಿಸಿ (ಮಾದರಿ ನೀತಿ ಸಂಹಿತೆ) ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯಡಿ ಸಂಬಂಧಿತ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.












Click it and Unblock the Notifications