ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ : 99ಕ್ಕೆ ಬಿಜೆಪಿ ಸುಸ್ತು, 80ಕ್ಕೆ ಕಾಂಗ್ರೆಸ್ ಮಸ್ತು

By Prasad
|
Google Oneindia Kannada News

ನವದೆಹಲಿ, ಡಿಸೆಂಬರ್ 18 : ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೊತೆಯಾಟ ಸೆಂಚುರಿ ಗಡಿಯನ್ನು ಕೂಡ ಮುಟ್ಟದೆ 99ಗೆ ಸುಸ್ತಾಗಿ ಬಳಲಿದ್ದಾರೆ. ಆದರೆ, ರಾಹಲು ಗಾಂಧಿಯವರು ಏಕಾಂಗಿಯಾಗಿ ಅಜೇಯ 80 ಬಾರಿಸಿದ್ದು, ಹುಮ್ಮಸ್ಸಿನಿಂದ ಬೀಗುತ್ತಿದ್ದಾರೆ.

ಗುಜರಾತ್ -ಹಿಮಾಚಲ: ಯಾರು ಗೆದ್ದರು? ಯಾರು ಬಿದ್ದರು?ಗುಜರಾತ್ -ಹಿಮಾಚಲ: ಯಾರು ಗೆದ್ದರು? ಯಾರು ಬಿದ್ದರು?

ಇದು ಪರಿಸ್ಥಿತಿಯ ವ್ಯಂಗ್ಯವಾದರೂ ಸತ್ಯ ಸಂಗತಿ. ಕಳೆದ ಚುನಾವಣೆಗೆ ಹೋಲಿಸಿದರೆ, 99 ಸ್ಥಾನಗಳನ್ನು ಗುಜರಾತ್ ನಲ್ಲಿ ಗಳಿಸಿ, ಭಾರತೀಯ ಜನತಾ ಪಕ್ಷ ಶೇ.16ರಷ್ಟು ಸೀಟುಗಳನ್ನು ಕಳೆದುಕೊಂಡು ಬೀಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಶೇ.31ರಷ್ಟು ಹೆಚ್ಚಿನ ಸ್ಥಾನ ಗಳಿಸಿದ್ದರೂ ಮುಖ ಎತ್ತಿಕೊಂಡು ತಿರುಗಾಡುತ್ತಿಲ್ಲ.

BJP falters just before century in Gujarat

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ 2012ರಲ್ಲಿ 115 ಸ್ಥಾನಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ಕೇವಲ 61 ಸೀಟುಗಳನ್ನು ಗಳಿಸಿತ್ತು. ನರೇಂದ್ರ ಮೋದಿಯವರು ಪ್ರಧಾನಿಯಾಗಿ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟನಂತರ ಗುಜರಾತಿನಲ್ಲಿ ಭಾರೀ ಬದಲಾವಣೆಗಳಾಗಿವೆ, ಬಿಜೆಪಿ ತನ್ನ ನೆಲೆಯನ್ನು ಸಾಕಷ್ಟು ಕಳೆದುಕೊಂಡಿದೆ.

ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ 2012ರಲ್ಲಿ ಬಿಜೆಪಿ ಶೇ. 47ರಷ್ಟು ಮತ ಗಳಿಸಿತ್ತು, 2017ರಲ್ಲಿ ಮತಗಳಿಕೆ ಶೇ.49.1ರಷ್ಟಿದೆ (14,673,450). ಅದೇ ಕಾಂಗ್ರೆಸ್ 2012ರಲ್ಲಿ ಶೇ.42ರಷ್ಟು ಮತಗಳನ್ನು ಗಳಿಸಿದ್ದರೆ, 2017ರಲ್ಲಿ ಶೇ.41.4ರಷ್ಟು (12,386,184).

ಸೋತು ಗೆದ್ದ ಕಾಂಗ್ರೆಸ್, ಗುಜರಾತ್ ನಲ್ಲಿ ಹೆಚ್ಚಿದ 'ಕೈ' ಮತಗಳಿಕೆಸೋತು ಗೆದ್ದ ಕಾಂಗ್ರೆಸ್, ಗುಜರಾತ್ ನಲ್ಲಿ ಹೆಚ್ಚಿದ 'ಕೈ' ಮತಗಳಿಕೆ

ಅಚ್ಚರಿಯ ಸಂಗತಿಯೆಂದರೆ, ಗ್ರಾಮೀಣ ಗುಜರಾತಿನಲ್ಲಿ ಭಾರೀ ಸಂಖ್ಯೆಯಲ್ಲಿ ಮತದಾರರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಬಿಜೆಪಿ ನಗರ ಪ್ರದೇಶದಲ್ಲಿ ಹೆಚ್ಚಿನ ಮತಗಳ ಪಾಲನ್ನು ಪಡೆದಿದೆ. ಇದರ ಅರ್ಥ, ಗ್ರಾಮೀಣ ಭಾಗದಲ್ಲಿ ಜನರನ್ನು ಆಕರ್ಷಿಸುವಲ್ಲಿ ಮೋದಿ ಮತ್ತು ಅವರ ನೀತಿಗಳು ವಿಫಲವಾಗಿವೆ.

2012ರಲ್ಲಿ ಮತ್ತು 2017ರಲ್ಲಿ ನಡೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎಷ್ಟೆಷ್ಟು ಮತಗಳನ್ನು ಪಡೆದಿದ್ದವು ಮತ್ತು ಮತಗಳಿಕೆ ಶೇಕಡಾವಾರು ಎಷ್ಟೆಷ್ಟಿತ್ತು ಎಂದು ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ, ಎಐಸಿಸಿ ಸಂಶೋಧನಾ ವಿಭಾಗದ ಚೇರ್ಮನ್ ಆಗಿರುವ ರಾಜೀವ್ ಗೌಡ ಅವರು ಇಂಟ್ರೆಸ್ಟಿಂಗ್ ಅಂಕಿಸಂಖ್ಯೆಯನ್ನು ಟ್ವೀಟ್ ಮಾಡಿದ್ದಾರೆ.

English summary
Gujarat Assembly Elections 2017 : Though BJP has retained the power in Gujarat by securing 99 seats, Congress has gained a lot by securing 80 constituencies. BJP has lost 16% seats, on the other hand Congress has gained 31% seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X