ಉತ್ತರಖಂಡ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಪ್ರತಿಷ್ಠೆಯೇ ಹೈಲೈಟ್

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 20: ಉತ್ತರಖಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ಹೋರಾಡುತ್ತಿವೆ. ಕಳೆದ ಒಂದು ವರ್ಷದ ಅಂತರದಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆದ ಹಲವು ಬೆಳವಣಿಗಳು ಇದಕ್ಕೆ ಕಾರಣ.

ಹಾಗೆ ನೋಡಿದರೆ ಉತ್ತರಖಂಡ ತುಂಬಾ ಪುಟ್ಟ ರಾಜ್ಯ. ಇಲ್ಲಿರುವುದು ಕೇವಲ 70 ವಿಧಾನಸಭಾ ಸ್ಥಾನಗಳು ಮಾತ್ರ. ಆದರೆ ಈ ರಾಜ್ಯವನ್ನು ಕೈವಶ ಮಾಡಿಕೊಳ್ಳಲು ಕಳೆದೊಂದು ವರ್ಷದಿಂದ ಬಿಜೆಪಿ ನಿರಂತರ ಪ್ರಯತ್ನ ನಡೆಸಿತ್ತು. 'ಆಪರೇಷನ್ ಕಮಲ'ದ ರೀತಿಯ ಚಟುವಟಿಕೆಗಳು ಇಲ್ಲಿಯೂ ನಡೆದಿದ್ದವು. ಕಾಂಗ್ರೆಸ್ ಸರಕಾರದ ಒಳಗೆ ಭಿನ್ನಮತ ಎಬ್ಬಿಸಿ ಬಿಜೆಪಿ ಅಧಿಕಾರಕ್ಕೇರುವ ಪ್ರಯತ್ನ ನಡೆಸಿತ್ತು.[ಪಂಚ ರಾಜ್ಯಗಳ ಚುನಾವಣೆ: ಫಲಿತಾಂಶ ನಿರ್ಧರಿಸಲಿರುವ ಅಂಶಗಳಿವು]

In Uttarakhand a battle of egos between BJP, Cong

ಬಿಜೆಪಿ ಪ್ರಯತ್ನದ ಫಲವಾಗಿ ಮಾರ್ಚ್ 2016ರಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ವಿರುದ್ದ ಸ್ವಪಕ್ಷೀಯರೇ ದಂಗೆ ಎದ್ದಿದ್ದರು. ಇದನ್ನೇ ಕಾಯುತ್ತಿದ್ದ ಕೇಂದ್ರ ಸರಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು. ಬಿಜೆಪಿ ಸರಕಾರದ ಈ ನಿರ್ಧಾರದ ವಿರುದ್ಧ ಕಾಂಗ್ರೆಸ್ ಸುಪ್ರಿಂ ಕೋರ್ಟ್ ಮೊರೆ ಹೋಯಿತು. ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಕೇಂದ್ರ ಸರಕಾರದ ನಿರ್ಧಾರ ತಪ್ಪು ಎಂದು 2016 ಮೇನಲ್ಲಿ ತೀರ್ಪು ನೀಡಿತು. ಹೀಗೆ ಮತ್ತೆ ಹರೀಶ್ ರಾವತ್ ಅಧಿಕಾರಕ್ಕೆ ಬಂದರು.

ಸುಪ್ರಿಂ ಕೋರ್ಟ್ ನೀಡಿದ ತೀರ್ಪು ಬಿಜೆಪಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಅಧಿಕಾರಕ್ಕೆ ಬರಲೇಬೇಕೆಂದು ಪಟ್ಟು ಹಿಡಿದಿದೆ. ಆದರೆ ಅಧಿಕಾರ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ಧವಿಲ್ಲ.

ಯಾರು ಗೆಲ್ಲಬಹುದು?
ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಏರಬಹುದು ಎಂಬ ಬಗ್ಗೆ ಸಮೀಕ್ಷೆಗಳೂ ಗೊಂದಲ ಮೂಡಿಸುತ್ತಿವೆ. ಕೆಲವು ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರೆ ಇನ್ನು ಕೆಲವು ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲಿದೆ ಎನ್ನುತ್ತಿವೆ.

ರಾಜಕೀಯ ಪಂಡಿತರ ಪ್ರಕಾರ ಮಾತ್ರ, ಬಿಜೆಪಿ ಕುತಂತ್ರದಿಂದ ಹರೀಶ್ ರಾವತ್ ಅನುಕಂಪದ ಮತ ಗಳಿಸಬಹುದು. ಹಾಗಾಗಿ ಗೆಲುವಿನ ಅವಕಾಶ ಕೈ ಪಕ್ಷಕ್ಕೆ ಜಾಸ್ತಿ ಎನ್ನುತ್ತಿದ್ದಾರೆ.

ಈ ಹಿಂದಿನ ಚುನಾವಣೆಗಳನ್ನು ನೋಡಿದರೆ ಎರಡೂ ಪಕ್ಷಗಳ ನಡುವೆ ಸಮಬಲದ ಹೋರಾಟವನ್ನು ನಿರೀಕ್ಷಿಸಬಹುದಾಗಿದೆ. 2012ರಲ್ಲಿ ರಾಜ್ಯದಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 31, ಕಾಂಗ್ರೆಸ್ 32 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅದೇ 2007ರಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 30 ಸ್ಥಾನಗಳನ್ನು ಗೆದ್ದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The battle in Uttarakhand would be of egos between the Congress and the BJP. This small state was in the news in 2016 after the BJP overthrow the Congress government.
Please Wait while comments are loading...