ಇಲ್ಲಿ ಜಿ ಪರಮೇಶ್ವರ್, ಅಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿ: 'ಕೈ' ಕೊಟ್ಟ ಅದೃಷ್ಟ!

Posted By:
Subscribe to Oneindia Kannada
   ಒಂದೇ ಹಡಗಿನಲ್ಲಿ ತೇಲುತ್ತಿರುವ ಬಿಜೆಪಿ ಸಿಎಂ ಅಭ್ಯರ್ಥಿ ಹಾಗು ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್

   2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿಯ ಆಡಳಿತ ವಿರೋಧಿ ಅಲೆ, ಆಂತರಿಕ ಕಚ್ಚಾಟ, ಭ್ರಷ್ಟಾಚಾರ ಪ್ರಕರಣಗಳಿಂದ ರೋಸಿ ಹೋಗಿದ್ದ ಮತದಾರ, ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದ.

   ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ ಪರಮೇಶ್ವರ್ ಮತ್ತು ಪಕ್ಷದ ಇತರ ಮುಖಂಡರು, ಪಕ್ಷವನ್ನು ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಖುದ್ದು ಪರಮೇಶ್ವರ್, ಕೊರಟಗೆರೆ ಕ್ಷೇತ್ರದಲ್ಲಿ ಸೋಲುವ ಮೂಲಕ ಅವರ ಸಿಎಂ ಕನಸು ಭಗ್ನವಾಗಿತ್ತು.

   'ಸಿದ್ದರಾಮಯ್ಯ, ಪರಮೇಶ್ವರ ನಡುವೆ ಭಿನ್ನಾಭಿಪ್ರಾಯವಿಲ್ಲ'

   ಒಂದು ವೇಳೆ ಅಂದು ಪರಮೇಶ್ವರ್ ಸೋಲದೇ ಇರುತ್ತಿದ್ದರೆ, ಇಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲವೇನೋ? ಈಗ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಅಸೆಂಬ್ಲಿ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ.

   ಹಿಮಾಚಲ ಪ್ರದೇಶ : ಬಿಜೆಪಿ ಗೆದ್ದರೂ ಸಿಎಂ ಅಭ್ಯರ್ಥಿಗೆ ಸೋಲು!

   ಇಲ್ಲಿ ಪರಮೇಶ್ವರ್ ಅವರಿಗಾದ ಗತಿ, ಹಿಮಾಚಲ ಪ್ರದೇಶದಲ್ಲಿ ಪಕ್ಷದ ಸಿಎಂ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಅವರಿಗಾಗಿದೆ. ಧುಮಾಲ್ ಪಕ್ಷದ ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದ್ದರೂ, ಅವರು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಎದುರು ಸೋಲು ಅನುಭವಿಸಿದ್ದಾರೆ.

   ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿ ಆಗಬೇಕೆಂದೇನಿಲ್ಲ -ಪರಮೇಶ್ವರ್

   ಸುಜನಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೀಂದರ್ ರಾಣಾ ವಿರುದ್ದ ಧುಮಾಲ್ ಢುಮ್ಕಿ ಹೊಡೆದಿದ್ದಾರೆ. ಹೀಗಾಗಿ, ಬಿಜೆಪಿ ಈಗ ಬೇರೆ ವಿಧಿಯಿಲ್ಲದೇ, ಸಿಎಂಗೆ ಹೊಸ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದೆ. ಪ್ರಭಲ ಠಾಕೂರ್ ಸಮುದಾಯದ ಧುಮಾಲ್ ಜಾಗಕ್ಕೆ ಪಕ್ಷ ಯಾರನ್ನು ಆಯ್ಕೆ ಮಾಡುತ್ತೆ, ಇಲ್ಲಿದೆ ಕೆಲವೊಂದು ಆಯ್ಕೆ.

   ಕೊರಟಗೆರೆ ಕ್ಷೇತ್ರದಲ್ಲಿ ಸೋತ ಜಿ ಪರಮೇಶ್ವರ್

   ಕೊರಟಗೆರೆ ಕ್ಷೇತ್ರದಲ್ಲಿ ಸೋತ ಜಿ ಪರಮೇಶ್ವರ್

   2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ ಪರಮೇಶ್ವರ್, ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಲಾಲ್ ವಿರುದ್ದ 18,155 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಸಿಎಂ ಅಭ್ಯರ್ಥಿ ಎಂದೇ ಹೇಳಲಾಗುತ್ತಿದ್ದ ಪರಮೇಶ್ವರ್ ಅವರ ಅದೃಷ್ಟ ಸರಿಯಾಗಿ ಕೈಕೊಟ್ಟಿತ್ತು. ಈ ಘಟನೆಯನ್ನು ಪರಮೇಶ್ವರ್ ಅದೆಷ್ಟೋ ಬಾರಿ ಮೆಲುಕು ಹಾಕಿಕೊಂಡಿದ್ದಿದೆ.

   ಠಾಕೂರ್ ಸಮುದಾಯದ ಪ್ರಭಲ ನಾಯಕ ಪ್ರೇಮ್ ಕುಮಾರ್ ಧುಮಾಲ್

   ಠಾಕೂರ್ ಸಮುದಾಯದ ಪ್ರಭಲ ನಾಯಕ ಪ್ರೇಮ್ ಕುಮಾರ್ ಧುಮಾಲ್

   ಇದೇ ರೀತಿಯ ಅನಿರೀಕ್ಷಿತ ಘಟನೆಯನ್ನು ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ಎದುರಿಸಿದೆ. ಠಾಕೂರ್ ಸಮುದಾಯದ ಪ್ರಭಲ ನಾಯಕ ಪ್ರೇಮ್ ಕುಮಾರ್ ಧುಮಾಲ್ ಅಸೆಂಬ್ಲಿ ಚುನಾವಣೆಯಲ್ಲಿ ಸೋಲು ಅನುಭವಿಸುವ ಮೂಲಕ, ಕರ್ನಾಟಕದಲ್ಲಿ ಜಿ ಪರಮೇಶ್ವರ್ ಅವರು ಎದುರಿಸಿದ ಹಿನ್ನಡೆಯನ್ನು ಧುಮಾಲ್ ಕೂಡಾ ಎದುರಿಸುವಂತಾಗಿದೆ.

   ಬಿಜೆಪಿ ವರಿಷ್ಠರ ಮೊದಲ ಆಯ್ಕೆ ಜೆ ಪಿ ನಡ್ಡಾ

   ಬಿಜೆಪಿ ವರಿಷ್ಠರ ಮೊದಲ ಆಯ್ಕೆ ಜೆ ಪಿ ನಡ್ಡಾ

   ಧುಮಾಲ್ ಸೋಲಿನಿಂದ ಬಿಜೆಪಿ ಈಗ ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಪಕ್ಷದ ಮೂಲಗಳ ಪ್ರಕಾರ ಬಿಜೆಪಿ ವರಿಷ್ಠರ ಮೊದಲ ಆಯ್ಕೆ ಕಣಿವೆ ರಾಜ್ಯದ ಸಂಪೂರ್ಣ ಮಾಹಿತಿಯಿರುವ ಜೆ ಪಿ ನಡ್ಡಾ (ಜಗತ್ ಪ್ರಕಾಶ್ ನಡ್ಡಾ). ಮೂರು ಬಾರಿ ಶಾಸಕರಾಗಿದ್ದ ನಡ್ಡಾ, ಹಾಲೀ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು.

   ಧುಮಾಲ್ ಅವರ ಪುತ್ರ ಅನುರಾಗ್ ಠಾಕೂರ್

   ಧುಮಾಲ್ ಅವರ ಪುತ್ರ ಅನುರಾಗ್ ಠಾಕೂರ್

   ನಡ್ಡಾ ನಂತರದ ಆಯ್ಕೆ, ಪ್ರೇಮ್ ಕುಮಾರ್ ಧುಮಾಲ್ ಅವರ ಪುತ್ರ ಅನುರಾಗ್ ಠಾಕೂರ್. ಬಿಜೆಪಿ ಯುವ ಮೋರ್ಚಾದ ಆಧ್ಯಕ್ಷರಾಗಿದ್ದ ಅನುರಾಗ್, ಬಿಸಿಸಿಐ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಠಾಕೂರ್ ಸಮುದಾಯ ಹಿಮಾಚಲ ಪ್ರದೇಶದಲ್ಲಿ ಪ್ರಬಲವಾಗಿರುವುದರಿಂದ, ಅನುರಾಗ್ ಆಯ್ಕೆಯಾದರೂ ಆಶ್ಚರ್ಯ ಪಡಬೇಕಾಗಿಲ್ಲ.

   ಜೈರಾಂ ಠಾಕೂರ್ ಅವರ ಹೆಸರೂ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ

   ಜೈರಾಂ ಠಾಕೂರ್ ಅವರ ಹೆಸರೂ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ

   ಜೈರಾಂ ಠಾಕೂರ್ ಅವರ ಹೆಸರೂ ಸಿಎಂ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿದೆ. ಸೇರಜ್ ಕ್ಷೇತ್ರದಿಂದ ಆಯ್ಕೆಯಾಗಿರುವ ಜೈರಾಂ, ಐದು ಬಾರಿ ಶಾಸಕರಾಗಿ ಕೆಲಸ ನಿರ್ವಹಿಸಿದ ಅನುಭವವನ್ನು ಹೊಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಜೈರಾಂ, ಆರ್ ಎಸ್ ಎಸ್ ಹಿನ್ನಲೆ ಉಳ್ಳವರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   BJP's CM candidate in Himachal Pradesh Prem Kumar Dhumal loses in the assembly election. KPCC President G Parameshwar faced situation during Karnataka Assembly election in 2013. List of probable candidates for CM in Himachal Pradesh.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ