Jalebi-Rahul Gandhi: ಗೆಲ್ಲುತ್ತಿದ್ದಂತೆ 'ರಾಗಾ'ಗೆ ಜಿಲೇಬಿ ಬಾಕ್ಸ್ ಕಳುಹಿಸಿದ ಹರಿಯಾಣ ಬಿಜೆಪಿ, ಸಖತ್ ಟ್ರೋಲ್
ನವದೆಹಲಿ, ಅಕ್ಟೋಬರ್ 09: ಹರಿಯಾಣ ವಿಧಾನಸಭಾ ಚುನಾವಣೆ 2024 ಯಲ್ಲಿ ತ್ರಾಸದಾಯಕ ಗೆಲುವು ಪಡೆದು ಬಿಜೆಪಿಯು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗಾಗಿ ದೆಹಲಿಯ ಕಾಂಗ್ರೆಸ್ ಕಚೇರಿಗೆ 01 ಕೆ.ಜಿ. ಸಿಹಿ ಖಾದ್ಯ ಜಿಲೇಬಿಯನ್ನು ಕಳುಹಿಸಲಾಗಿದೆ. ಸದ್ಯ ಈ ಕುರಿತು ಬಿಜೆಪಿ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ ಜಿಲೇಬಿ ಮತ್ತು ರಾಹುಲ್ ಗಾಂಧಿ ಬಗ್ಗೆ ಸಖತ್ ಟ್ರೋಲ್ ಆಗುತ್ತಿದೆ.
ಹೌದು, ಹರಿಯಾಣದಲ್ಲಿ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ಪ್ರಕಟಗೊಂಡ ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ಸಿಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಕೆಲವು ಸವಾಲುಗಳ ಮಧ್ಯೆ ಬಿಜೆಪಿ ಗೆದ್ದು ಬೀಗಿತು. ಇದು ಕಾಂಗ್ರೆಸ್ಸಿಗರನ್ನು ಕೆರಳಿಸಿದೆ ಎನ್ನವಷ್ಟರಲ್ಲಿ ರಾಹುಲ್ ಗಾಂಧಿಯವರು ಭರ್ಜರಿ ಟ್ರೋಲ್ ಆಗುತ್ತಿದ್ದಾರೆ.

ರಾಜ್ಯದಲ್ಲಿ ಗೆದ್ದ ಖಷಿಯನ್ನು ಸಂಭ್ರಮಿಸಿದ ಬಿಜೆಪಿಯು ದೆಹಲಿ ಕಾಂಗ್ರೆಸ್ ಕಚೇರಿಗೆ ರಾಹಲ್ ಗಾಂಧಿಗಾಗಿ ಸಹಿ ಜಿಲೇಬಿಯನ್ನು ರವಾನೆ ಮಾಡಿದೆ. ಈ ಮೂಲಕ ಸೋಲಿನ ಕುರಿತು ಅಪಹಾಸ್ಯ ಮಾಡಿದೆ. ಇದರ ಬೆನ್ನಲ್ಲೆ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಜಿಲೇಬಿ ಫಾರ್ ಕಾಂಗ್ರೆಸ್, ಜಿಲೇಬಿ ಫಾರ್ ರಾಹುಲ್ ಗಾಂಧಿ ಎಂದು ಫೋಟೋಗಳನ್ನೆಲ್ಲ ಹಾಕಿ ಮಿಮ್ಸ್ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿ ಜಿಲೇಬಿ ವಿಚಾರದಲ್ಲಿ ಟ್ರೋಲ್ ಆಗಿದ್ದೇಕೆ?
ಸದರಿ ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಅಬ್ಬರದ ಪ್ರಚಾರ ಮಾಡಿದ್ದ ರಾಹುಲ್ ಗಾಂದಿಯವರು ಗೋಹಾನದಲ್ಲಿ ತಯಾರಿಸಲ್ಪಟ್ಟ ಸಿಹಿ ಜಿಲೇಬಿ ತಿಂದು ನಿರುದ್ಯೋಗದ ಬಗ್ಗೆ ಮಾತನಾಡಿದ್ದರು. ಇದೊಂದು ಸಿಹಿ ಘಳಿಗೆ ನಾನು ಇಂತಹ ಅದ್ಭುತ ಜಿಲ್ಲೆ ತಿಂದಿರಲೇ ಇಲ್ಲ.

ಈ ಗೋಹಾನ ಜಿಲೆಬಿಯು ಪ್ರಪಂಚದಾದ್ಯಂತ ಎಲ್ಲರಿಗೂ ತಲುಪಬೇಕು. ಅದಕ್ಕಾಗಿ ಹರಿಯಾಣದಲ್ಲಿ ಕಾಂಗ್ರೆಸ್ ಗೆದ್ದ ಮೇಲೆ ಜಿಲೇಬಿ ಫಾಕ್ಟರಿಗಳನ್ನು ತೆರೆದು, ನಿರುದ್ಯೋಗ ದೂರ ಮಾಡಲಾಗುವುದು ಎಂದು ಹೇಳುವು ಮೂಲಕ ಬಿಜೆಪಿಗೆ ಮಾತಿನಲ್ಲೇ ಟಕ್ಕರ್ ನೀಡಿದ್ದರು. ಏಕೆಂದರೆ ರಾಜ್ಯದಲ್ಲಿ ಒಂದು ದಶಕ ಆಡಳಿತ ನೀಡದ ಬಿಜೆಪಿಯು ಉದ್ಯೋಗ ಸೃಷ್ಟಿಸಿಲ್ಲ ಎಂಬ ಆರೋಪ ಹೊತ್ತಿತ್ತು.
ಅಲ್ಲದೇ ಜಿಲೇಬಿಯನ್ನು ಪ್ರಿಯಾಂಕ ಗಾಂಧಿಗೂ ಕಳುಹಿಸಿಕೊಡುತ್ತೇನೆ ಎಂದು ವೇದಿಕೆ ಮೇಲೆ ರಾಹುಲ್ ಗಾಂಧಿಯವರು ಬಹಿರಂಗವಾಗಿ ಮಾತನಾಡಿದ್ದರು. ಇದೀಗ ಹರಿಯಾಣದಲ್ಲಿ ಕಾಂಗ್ರೆಸ್ ಸೋತಿದೆ. ಬಿಜೆಪಿ ಗೆದ್ದು ಬೀಗಿದ್ದು, ಸಂಭ್ರಮಾಚರಣೆ ವೇಳೆ ಕಾಂಗ್ರೆಸ್‌ಗೆ ಒಂದು ಕೆ.ಜಿ. ಜಿಲೇಬಿ ರವಾನಿಸಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ರಾಹುಲ್ ಭಾಷಣ, ಜಿಲೇಬಿ ಪೊಟ್ಟಣ ಇಟ್ಟು ಟ್ರೋಲ್ ಮಾಡಲಾಗುತ್ತಿದೆ.
ಗರಿ ಗರಿ ಜಿಲೇಬಿ ಸಂಕ್ಷಿಪ್ತ ಇತಿಹಾಸ
ರಾಜ್ಯದ ಗೋಹಾನದಲ್ಲಿ 1958 ರಲ್ಲಿ ಮಾಟು ರಾಮ್ ಎಂಬ ಸ್ಥಳೀಯ ಉದ್ಯಮಿಯೊಬ್ಬರು ಈ ಜಿಲೇಬಿಯನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ. ರಾಜ್ಯದಲ್ಲಿ ಗೋಹನಾದಲ್ಲಿಯೇ ಮೊದಲು ಜಿಲೇಬಿ ತಯಾರಿಸಲಾಗಿದೆ ಎಂಬ ಐತಿಹ್ಯವಿದೆ. ಈ ಸಿಹಿಯನ್ನು ಶುದ್ಧ ದೇಸಿ ತುಪ್ಪದಿಂದ ತಯಾರಿಸಲಾಗುತ್ತದೆ. ಇಲ್ಲಿನ ಜಿಲೇಬಿ ಗರಿಗರಿಯಾಗಿ ಮಾತ್ರವಲ್ಲದೇ, ಮೃಧುವಾಗಿಯು ಇರುತ್ತದೆ.












Click it and Unblock the Notifications