• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಹೆಸರು ಹಾಳು ಮಾಡಲೆಂದೇ ಕಾಂಗ್ರೆಸ್ ಟೂಲ್‌ಕಿಟ್ ತಯಾರಿಸಿದೆ: ಸಂಬಿತ್ ಪಾತ್ರ

|

ನವದೆಹಲಿ, ಮೇ 18: ಪ್ರಧಾನಿ ನರೇಂದ್ರ ಮೋದಿ ಹೆಸರು ಹಾಳು ಮಾಡಲೆಂದೇ ಕಾಂಗ್ರೆಸ್ ಟೂಲ್‌ಕಿಟ್ ತಯಾರಿಸಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ.

ಕೊರೊನಾ ಎರಡನೇ ಅಲೆ ನಡುವೆ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಹೆಸರು ಹಾಳು ಮಾಡಲು ಆಲೋಚಿಸಿದಂತಿದೆ.ಕಾಂಗ್ರೆಸ್ ಟೂಲ್ ಕಿಟ್ ತಯಾರಿಸಿದೆ ಇದರಲ್ಲಿ ರೂಪಾಂತರಿ ಕೊರೊನಾವನ್ನು ರೂಪಾಂತರಿ ಮೋದಿ ಎಂದು ಕರೆಯಲು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರದ ಲಸಿಕೆ ನೀತಿಗೆ ಕಾಂಗ್ರೆಸ್ ಮತ್ತೆ ವಾಗ್ದಾಳಿಕೇಂದ್ರ ಸರ್ಕಾರದ ಲಸಿಕೆ ನೀತಿಗೆ ಕಾಂಗ್ರೆಸ್ ಮತ್ತೆ ವಾಗ್ದಾಳಿ

ಈ ಟೂಲ್‌ಕಿಟ್ ಕಾಂಗ್ರೆಸ್ ಪಕ್ಷವು ಯಾವ ರೀತಿ ಕೊರೊನಾ ಅಥವಾ ಪಿಡುಗಿನ ಸಂದರ್ಭವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬುದು ಗೋಚರಿಸುತ್ತಿದೆ, ಸುಳ್ಳು ಮಾಹಿತಿ ಸಾರುವುದೇ ಅವರ ಮುಖ್ಯ ಉದ್ದೇಶವಾಗಿದೆ ಎಂದರು.

ಹಾಗೆಯೇ ಕಾಂಗ್ರೆಸ್ ಪಕ್ಷವು ತನ್ನ ಕಾರ್ಯಕರ್ತರಿಗೆ ಕುಂಭ ಮೇಳವನ್ನು ಕೊರೊನಾ ಸೂಪರ್‌ ಸ್ಪ್ರೆಡರ್ ಎಂದು ಕರೆಯಿರಿ ಅದರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ,ಆದರೆ ಈದ್ ಮಾರ್ಕೆಟ್‌ಗಳು ಹಾಗೂ ಸಂಭ್ರಮಾಚರಣೆಯನ್ನು ಯಾವ ಸಾಮಾಜಿಕ ಜಾಲತಾಣಗಳಲ್ಲೂ ಹಾಕಬೇಡಿ ಎಂದು ನಿರ್ದೇಶನ ನೀಡಿತ್ತು.

ಕೊರೊನಾದಿಂದಾಗಿ ಅಸಹಾಯಕತೆಯಲ್ಲಿರುವ ಜನರಿಗೆ ಸಹಾಯ ಮಾಡುವ ಬದಲು ಕಾಂಗ್ರೆಸ್ ತನ್ನ ಬೇಳೆಯನ್ನು ಬೇಯಿಸಿಕೊಳ್ಳುತ್ತಿದೆ ಇದೇ ಕಾಂಗ್ರೆಸ್‌ನ ನಿಜವಾದ ಮುಖ ಎಂದು ಹೇಳಿದರು.

ರಾಹುಲ್ ಗಾಂಧಿಯು ಕೂಡ ಕೊರೊನಾವನ್ನು ಬಳಕೆ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ಮಸಿ ಬಳಿಯಲು ಮುಂದಾಗಿದ್ದಾರೆ ಎಂದರು.

English summary
The Bharatiya Janata Party (BJP) has accused the Congress of resorting to tactics to destroy the reputation of Prime Minister Narendra Modi amid the raging second wave of Covid-19 and also the country's image.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X