ಭಾರತದ ಬಿರಿಯಾನಿ ಜಪಾನ್ ಶೆಫ್ ಬದುಕು ಬದಲಿಸಿತು; 15 ವರ್ಷಗಳ ಬಳಿಕ ಜಪಾನ್ ಶೆಫ್‌ಗೆ ಮೈಕೆಲಿನ್ ಗೌರವ

ಕೊಯಮತ್ತೂರು: ಜೀವನದಲ್ಲಿ ಕೆಲವೊಂದು ಕ್ಷಣಗಳು ನಮ್ಮ ಭವಿಷ್ಯದ ದಾರಿಯನ್ನೇ ಬದಲಾಯಿಸುತ್ತವೆ. ಜಪಾನ್‌ನ ಟಕಮಾಸ ಒಜಾವಾ ಅವರ ಜೀವನದಲ್ಲೂ ಅಂತಹ ಒಂದು ವಿಶೇಷ ಕ್ಷಣ ಕೊಯಮತ್ತೂರಿನಲ್ಲಿ ನಡೆದಿತ್ತು.

2009ರಲ್ಲಿ ಪ್ರವಾಸಿಯಾಗಿ ಭಾರತಕ್ಕೆ ಬಂದಿದ್ದ ಟಕಮಾಸ ಒಜಾವಾ ತಮಿಳುನಾಡಿನ ಪ್ರವಾಸದ ವೇಳೆ ಕೊಯಮತ್ತೂರಿನ ಒಂದು ರೆಸ್ಟೋರೆಂಟ್‌ಗೆ ಭೇಟಿ ನೀಡಿದರು. ಅಲ್ಲಿ ಅವರು ಮೊದಲ ಬಾರಿಗೆ ಬಿರಿಯಾನಿಯ ರುಚಿ ನೋಡಿದ್ದಾರೆ. ಆ ಅಪರೂಪದ ರುಚಿ ಅವರಿಗೆ ಎಷ್ಟು ಇಷ್ಟವಾಯಿತೆಂದರೆ, ಮತ್ತೊಂದು ಪ್ಲೇಟ್ ಬಿರಿಯಾನಿ ಆರ್ಡರ್ ಮಾಡಿದರು. ಬಿರಿಯಾನಿಯ ರುಚಿಗೆ ಮಾರುಹೋದ ಅವರು ಅಲ್ಲಿಗೇ ನಿಲ್ಲದೆ ಮತ್ತೊಂದು ರೆಸ್ಟೋರೆಂಟ್‌ಗೆ ತೆರಳಿ ಮತ್ತೆ ಬಿರಿಯಾನಿ ಸವಿದರು. ಆ ದಿನದ ಅಂತ್ಯದ ವೇಳೆಗೆ ಅವರು ಕನಿಷ್ಠ ನಾಲ್ಕು ಪ್ಲೇಟ್ ಬಿರಿಯಾನಿಯನ್ನು ತಿಂದಿದ್ದರು.

Biryani A Plate of Biryani in Coimbatore Changed His Life Japanese Chef Won Michelin Honour for It

ಇಂದು ವರ್ಷಗಳು ಕಳೆದರೂ ಟಕಮಾಸ ಒಜಾವಾಗೆ ಆ ಕೊಯಮತ್ತೂರಿನ ರೆಸ್ಟೋರೆಂಟ್‌ನ ಹೆಸರು ನೆನಪಿಲ್ಲ. ಆದರೆ ಅಲ್ಲಿ ಸವಿದ ಬಿರಿಯಾನಿಯ ರುಚಿ ಮಾತ್ರ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಆ ಒಂದು ಪ್ಲೇಟ್ ಬಿರಿಯಾನಿಯೇ ಅವರ ಜೀವನದ ಪಯಣಕ್ಕೆ ಹೊಸ ತಿರುವು ನೀಡಿತು. ಕೊಯಮತ್ತೂರಿನ ಆ ರುಚಿಯ ಅನುಭವವೇ ಮುಂದೆ ಅವರನ್ನು ಅಡುಗೆ ಕ್ಷೇತ್ರದಲ್ಲಿ ಹೊಸ ಸಾಧನೆಗಳತ್ತ ಕರೆದೊಯ್ದಿತು.

2009ರಲ್ಲಿ ಭಾರತ ಪ್ರವಾಸಕ್ಕೆ ಬಂದಿದ್ದ ಜಪಾನ್‌ನ ಯುವ ಪ್ರವಾಸಿ ಟಕಮಾಸಾ ಓಸಾವಾ ಅವರ ಜೀವನವನ್ನು ಕೊಯಮತ್ತೂರಿನಲ್ಲಿ ಸವಿದ ಒಂದು ಪ್ಲೇಟ್ ಬಿರಿಯಾನಿ ಸಂಪೂರ್ಣವಾಗಿ ಬದಲಿಸಿತು. ಆ ಒಂದು ಬಿರಿಯಾನಿಯೇ ಅವರ ಜೀವನದ ದಿಕ್ಕನ್ನು ಬದಲಿಸಿತು. ಬಿರಿಯಾನಿಯ ಮೇಲಿನ ಆಸಕ್ತಿಯಿಂದ ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿ ಸಂಚರಿಸಿ ಅದರ ತಯಾರಿಕೆಯ ಕಲೆ ಕಲಿತ ಓಸಾವಾ, 15 ವರ್ಷಗಳ ಬಳಿಕ ಜಪಾನ್‌ನಲ್ಲಿ ತಮ್ಮದೇ ಆದ ಬಿರಿಯಾನಿ ರೆಸ್ಟೋರೆಂಟ್ ಆರಂಭಿಸಿದರು.

ಇಂದು ಟೋಕಿಯೊದಲ್ಲಿ ಬಿರಿಯಾನಿಯನ್ನೇ ವಿಶೇಷವಾಗಿ ಬಡಿಸುವ ಅವರ ರೆಸ್ಟೋರೆಂಟ್‌ಗೆ 2026ರಲ್ಲಿ ಪ್ರತಿಷ್ಠಿತ ಮೈಕೆಲಿನ್ ಗೌರವ ಲಭಿಸಿದೆ. ಕೊಯಮತ್ತೂರಿನಲ್ಲಿ ಆಕಸ್ಮಿಕವಾಗಿ ಸವಿದ ಒಂದು ಪ್ಲೇಟ್ ಬಿರಿಯಾನಿಯೇ ಜಪಾನ್‌ನ ಪ್ರವಾಸಿಯನ್ನು ವಿಶ್ವಮಟ್ಟದ ಬಾಣಸಿಗನನ್ನಾಗಿ ರೂಪಿಸಿದ ಪ್ರೇರಣೆಯಾಯಿತು.

ಆ ದಿನ ನಡೆದ ಆಕಸ್ಮಿಕ ಅನುಭವವೇ ಅವರ ಜೀವನದ ದಿಕ್ಕನ್ನೇ ಬದಲಿಸಿತು. ಸುಮಾರು 15 ವರ್ಷಗಳ ನಂತರ, ಇಂದು ಓಸಾವಾ ಟೋಕಿಯೊ ನಗರದ ಕಾಂಡಾ ಪ್ರದೇಶದಲ್ಲಿರುವ ಕೇವಲ 10 ಆಸನಗಳ 'ಬಿರಿಯಾನಿ ಓಸಾವಾ' ಎಂಬ ರೆಸ್ಟೋರೆಂಟ್‌ನ ಮುಖ್ಯ ಶೆಫ್ ಆಗಿದ್ದಾರೆ. ಇಲ್ಲಿ ಕೇವಲ ಒಂದೇ ಖಾದ್ಯ ಬಿರಿಯಾನಿ ಬಡಿಸಲಾಗುತ್ತದೆ. ಈ ವಿಶಿಷ್ಟ ಪರಿಕಲ್ಪನೆಗೆ 2026ರಲ್ಲಿ ಮಿಷೆಲಿನ್ ಬಿಬ್ ಗೌರ್ಮಾಂಡ್ (Michelin Bib Gourmand) ಗೌರವವೂ ಲಭಿಸಿದೆ.

ಬಿರಿಯಾನಿಯ ಮೇಲಿನ ತಮ್ಮ ಅಪಾರ ಪ್ರೀತಿಯನ್ನು ಅವರು "Biryani or Die" (ಬಿರಿಯಾನಿ ಇಲ್ಲವೇ ಮರಣ) ಎಂಬ ಧ್ಯೇಯವಾಕ್ಯದ ಮೂಲಕ ವ್ಯಕ್ತಪಡಿಸುತ್ತಾರೆ. ಇತ್ತೀಚೆಗೆ 36 ವರ್ಷದ ಓಸಾವಾ ಎರಡು ದಿನಗಳ ವಿಶೇಷ ಆಹಾರ ಉತ್ಸವಕ್ಕಾಗಿ ಮುಂಬೈಗೆ ಆಗಮಿಸಿ, ಮಶ್ರೂಮ್, ಚಿಕನ್ ಮತ್ತು ಮಟನ್ ಸೇರಿದಂತೆ ಮೂರು ಬಗೆಯ ಬಿರಿಯಾನಿಗಳನ್ನು ಭಾರತೀಯ ಆಹಾರಪ್ರಿಯರಿಗೆ ಪರಿಚಯಿಸಿದರು.

ಕೊಯಮತ್ತೂರಿನಲ್ಲಿ ಬಿರಿಯಾನಿಯ ರುಚಿ ಕಂಡುಕೊಂಡ ಬಳಿಕ, ಓಸಾವಾ ಹಲವು ವರ್ಷಗಳ ಕಾಲ ದಕ್ಷಿಣ ಏಷ್ಯಾದ ವಿವಿಧ ಭಾಗಗಳಲ್ಲಿ ಸಂಚರಿಸಿ ಬಿರಿಯಾನಿ ತಯಾರಿಕೆಯ ಸೂಕ್ಷ್ಮತೆಗಳನ್ನು ಕಲಿತರು. ಹೈದರಾಬಾದ್, ಚೆನ್ನೈ, ಕೊಚ್ಚಿ, ಲಖನೌ, ಕೊಲ್ಕತ್ತಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಅಡುಗೆಮನೆಗಳಲ್ಲಿ ಕೆಲಸ ಮಾಡಿ ವಿವಿಧ ಶೈಲಿಯ ಬಿರಿಯಾನಿಗಳನ್ನು ಅಧ್ಯಯನ ಮಾಡಿದರು.

"ದಕ್ಷಿಣ ಏಷ್ಯಾದ ಹಲವೆಡೆ ಬಿರಿಯಾನಿ ಮಾಡುವ ವಿಧಾನವನ್ನು ಕಲಿತೆ. ನಂತರ ನಾನು ಕಲಿತ ಅತ್ಯುತ್ತಮ ಅಂಶಗಳನ್ನು ಒಟ್ಟುಗೂಡಿಸಿ ನನ್ನದೇ ಆದ ವಿಶೇಷ ಬಿರಿಯಾನಿ ರೆಸಿಪಿಯನ್ನು ರೂಪಿಸಿದೆ," ಎಂದು ಓಸಾವಾ ಹೇಳಿದ್ದಾರೆ. ಅವರ ಬಿರಿಯಾನಿಯ ಮೂಲ ಶೈಲಿ ಹೈದರಾಬಾದಿ ಬಿರಿಯಾನಿ. ಅದಕ್ಕೆ ಕೊಲ್ಕತ್ತಾ ಶೈಲಿಯ ಮಸಾಲೆ, ಪಾಕಿಸ್ತಾನಿ ಶೈಲಿಯ ಗ್ರೇವಿ ಹಾಗೂ ಬಲೂಚಿಸ್ತಾನದ ಮಾಂಸವನ್ನು ಮೃದುವಾಗಿಸುವ ತಂತ್ರಗಳನ್ನು ಸೇರಿಸಿ ವಿಶಿಷ್ಟ ರುಚಿಯನ್ನು ಸೃಷ್ಟಿಸಿದ್ದಾರೆ. ಆದರೆ, ಅವರು ಕಲಿತ ಎಲ್ಲ ಬಿರಿಯಾನಿ ಶೈಲಿಗಳಲ್ಲೂ ತಮಿಳುನಾಡಿನ ಬಿರಿಯಾನಿಯೇ ತಮ್ಮ ನೆಚ್ಚಿನದು ಎಂದು ಹೇಳುತ್ತಾರೆ.

"ತಮಿಳುನಾಡಿನ ಬಿರಿಯಾನಿಯಲ್ಲಿ ಪ್ರತಿಯೊಂದು ಅಕ್ಕಿ ಕಾಳಿನಲ್ಲೂ ರುಚಿ ಮತ್ತು ಉಮಾಮಿ ತುಂಬಿರುತ್ತದೆ," ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿರಿಯಾನಿಯ ಮೇಲಿನ ಅವರ ಈ ಅಚಲ ಸಮರ್ಪಣೆ ಇಂದು ಅವರನ್ನು ವಿಶ್ವದ ಹೆಸರಾಂತ ಬಿರಿಯಾನಿ ಪರಿಣಿತರ ಸಾಲಿನಲ್ಲಿ ನಿಲ್ಲಿಸಿದೆ. ಆದರೆ ಓಸಾವಾ ಅವರ ಜೀವನಯಾನ ಆರಂಭವಾದದ್ದು ಕೊಯಮತ್ತೂರಿನ ಹೆಸರೇ ನೆನಪಿಲ್ಲದ ಒಂದು ಸಣ್ಣ ರೆಸ್ಟೋರೆಂಟ್‌ನಲ್ಲಿ, ಆಕಸ್ಮಿಕವಾಗಿ ಆರ್ಡರ್ ಮಾಡಿದ ಒಂದು ಪ್ಲೇಟ್ ಬಿರಿಯಾನಿಯಿಂದ ಎಂಬುದು ವಿಶೇಷವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+