ಬಿಹಾರದಲ್ಲಿ ತಾಳಿಗೆ ಸಿಕ್ತು ಬೆಲೆ, ಶೌಚಾಲಯ ಕಾರ್ಯ ಆರಂಭ

Posted By:
Subscribe to Oneindia Kannada

ಸಸಾರಮ್ (ಬಿಹಾರ), ಜುಲೈ 20 : ಶೌಚಾಲಯ ನಿರ್ಮಾಣಕ್ಕಾಗಿ ತನ್ನ ಮಂಗಳ ಸೂತ್ರವನ್ನು ಅಡ ಇಟ್ಟಿದ್ದ ಮಹಿಳೆಯ ಹೋರಾಟಕ್ಕೆ ಬೆಲೆ ಸಿಕ್ಕಿದೆ.

ರೋಹ್ಟಸ್ ಜಿಲ್ಲಾಡಳಿತದ ವತಿಯಿಂದ ಬುಧವಾರದಂದು ಶೌಚಾಲಯ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಅಲ್ಲದೆ, ಈ ಕ್ರಾಂತಿಕಾರಿ ಬದಲಾವಣೆಗೆ ಕಾರಣರಾದ ಫೂಲ್ ಕುಮಾರಿ ಅವರನ್ನು ಯೋಜನೆಯ ರಾಯಭಾರಿಯಾಗಿ ನೇಮಿಸಲಾಗಿದೆ.[ಶತಾಯುಷಿ ಕಟ್ಟಿದ ಶೌಚಾಲಯಕ್ಕೆ ಎಲ್ಲೆಡೆಯಿಂದ ಬಹುಪರಾಕ್]

ಬಿಹಾರದ ರೋಹ್ಟಕ್ ಜಿಲ್ಲೆಯ ಬಹ್ಖಾನ್ನ ಗ್ರಾಮದ ಫೂಲ್ ಕುಮಾರಿ ಅವರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಮಾಂಗಲ್ಯ ಸರವನ್ನು ಅಡ ಇಟ್ಟ ಘಟನೆ ದೇಶದ ಕಣ್ಣು ತೆರೆಸಿತ್ತು. [ಶೌಚಾಲಯ ಕಟ್ಟಿಸಿಕೊಳ್ಳಿ ಎಂದು ಕಾಲಿಗೆ ಬಿದ್ದ ಗ್ರಾ.ಪಂ ಅಧ್ಯಕ್ಷ]

Toilet

ಸ್ಥಳೀಯ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಫೂಲ್ ಕುಮಾರಿ ಅವರಿಗೆ ಮನೆಯಲ್ಲಿ ಶೌಚಗೃಹ ನಿರ್ಮಾಣಕ್ಕೆ ಅಗತ್ಯವಾದ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ತಾಳಿಯನ್ನು ಅಡ ಇಟ್ಟು ಹಣ ತಂದು ಶೌಚಾಲಯ ನಿರ್ಮಾಣಕ್ಕೆ ಮುಂದಾಗಿದ್ದರು.[ಶೌಚಾಲಯಕ್ಕಾಗಿ ಉಪವಾಸ ಕುಳಿತ ವಿದ್ಯಾರ್ಥಿನಿ ಮಲ್ಲಮ್ಮ!]

ಫೂಲ್ ಕುಮಾರಿ ಅವರು ಕೈಗೊಂಡ ಕ್ರಮ ಶ್ಲಾಘನೀಯ. ಅವರನ್ನು ನೈರ್ಮಲ್ಯ ಯೋಜನೆಯ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಗ್ರಾಮದಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನಿಮೇಶ್ ಕುಮಾರ್ ಪರಾಶರ್ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬುಧವಾರದಂದು ನಡೆದ ಬೇಟಿ ಬಹಾನ್ ಸಮ್ಮಾನ್ ಸಮಾರಂಭದಲ್ಲಿ ಗ್ರಾಮದ ಪುರುಷ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ, ಶೌಚಾಲಯ ಇರದ ಮನೆಯಿಂದ ಹೆಣ್ಣು ತರುವುದಿಲ್ಲ ಎಂದಿದ್ದಾರೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Recognising Phool Kumar's effort, the Rohtas district administration made her the brand ambassador of sanitation programme. Work for construction of toilet started on Wednesday at the house of a woman, who has mortgaged her 'mangalsutra' for it, at Barahkhanna village in Rohtas district.
Please Wait while comments are loading...