Inspiring Story: ಈ ಟೀ ಅಂಗಡಿಯಲ್ಲಿ ಕಳೆದ 35 ವರ್ಷಗಳಿಂದ ಕಂದಮ್ಮಗಳಿಗೆ ಸಿಗುತ್ತಿದೆ ಉಚಿತ ಹಾಲು

ಇತ್ತೀಚಿನ ದಿನಗಳಲ್ಲಿ ಜೀವನ ನಡೆಸಲು ಹಣವೇ ಮುಖ್ಯ. ಹಣ ಕೊಡದಿದ್ದರೇ ಏನೂ ಸಿಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದೇ ಇದೆ . ಆದರೆ ಬಿಹಾರದ ನಳಂದಾ ಜಿಲ್ಲೆಯ ರಾಜಗೀರ್ ಬಸ್ ನಿಲ್ದಾಣದ ಸಮೀಪವಿರುವ ಒಂದು ಸಣ್ಣ ಟೀ ಅಂಗಡಿ ಮಾತ್ರ ಮಾನವೀಯತೆಗೆ ಉದಾಹರಣೆಯಾಗಿ ನಿಂತಿದೆ. ಇಲ್ಲಿನ ಬೋರ್ಡ್ ಮೇಲೆ ಬರೆದಿರುವ ಒಂದು ಸಾಲು ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರ ಗಮನ ಸೆಳೆಯುತ್ತದೆ.

ಹೌದು, ಅದುವೇ, "ಹುಟ್ಟಿದ ಮಗುವಿನಿಂದ 18 ತಿಂಗಳ ಕಂದಮ್ಮಗಳಿಗೆ ಇಲ್ಲಿ ಉಚಿತವಾಗಿ ಹಾಲು ನೀಡಲಾಗುತ್ತದೆ". ಒಂದು ಲೋಟ ಹಾಲಿನಿಂದ ಶುರುವಾದ ಈ ಸಣ್ಣ ಕೆಲಸ ಇಂದು 35 ವರ್ಷಗಳ ಪರಂಪರೆಯಾಗಿ ಬೆಳೆದಿದೆ. ಹಣದ ಮುಖ ನೋಡದೆ, ಕೇವಲ ಬಡ ಮಕ್ಕಳ ಹಸಿವು ನೀಗಿಸುವ ಈ ಟೀ ಅಂಗಡಿಯ ಕಥೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿ.

Bihar Tea Seller s 35-Year Legacy Offering Free Milk to Babies at Rajgir Stall Lives On Today

ಈ ಒಳ್ಳೆ ಕೆಲಸ 1990ರಲ್ಲಿ ಶ್ರವಣ್ ಕುಮಾರ್ ಎಂಬುವವರಿಂದ ಆರಂಭವಾಯಿತು. ರಾಜಗೀರ್‌ನಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಶ್ರವಣ್ ಅವರಿಗೆ ಒಮ್ಮೆ ತಮ್ಮ ಅಂಗಡಿಯ ಬಳಿ ಹಸಿವಿನಿಂದ ಅಳುತ್ತಿದ್ದ ಮಗುವೊಂದು ಕಾಣಿಸಿತು. ತಕ್ಷಣವೇ ಆ ಮಗುವಿನ ತಾಯಿಗೆ ಒಂದು ಲೋಟ ಹಾಲು ನೀಡಿದರು. ಹಾಲು ಕುಡಿದ ತಕ್ಷಣ ಮಗು ಅಳು ನಿಲ್ಲಿಸಿತು. ಈ ದೃಶ್ಯ ಶ್ರವಣ್ ಅವರ ಮನಸ್ಸಿನಲ್ಲಿ ಆಳವಾಗಿ ಬೇರೂರಿತು.

ಕೇವಲ ಕನಿಕರ ತೋರುವ ಬದಲು, ಇಂತಹ ಬಡ ಮತ್ತು ನಿರ್ಗತಿಕ ಕುಟುಂಬಗಳ ಮಕ್ಕಳಿಗೆ ಉಚಿತ ಹಾಲು ನೀಡಲು ನಿರ್ಧರಿಸಿದರು. ಅಂದಿನಿಂದ ಅವರ ಅಂಗಡಿಗೆ ಬರುವ ಯಾವುದೇ 18 ತಿಂಗಳೊಳಗಿನ ಮಗುವಿಗೆ ಉಚಿತವಾಗಿ ಹಾಲು ನೀಡುವ ಅಭ್ಯಾಸ ಶುರುವಾಯಿತು.

ದೇಣಿಗೆ ನಿರಾಕರಿಸಿದ ಬಿಹಾರದ ಟೀ ಅಂಗಡಿ

ಈ ಟೀ ಅಂಗಡಿಯ ವಿಶೇಷತೆ ಏನೆಂದರೆ, ಇದು ಯಾವುದೇ ಪ್ರಚಾರಕ್ಕಾಗಿ ಅಥವಾ ಲಾಭಕ್ಕಾಗಿ ಶುರು ಮಾಡಿದ ಯೋಜನೆಯಾಗಿರಲಿಲ್ಲ. ಶ್ರವಣ್ ಕುಮಾರ್ ಅವರ ಈ ಕೆಲಸವನ್ನಾ ನೋಡಿ ಅನೇಕರು ಹಣದ ಸಹಾಯ ಮಾಡಲು ಮುಂದೆ ಬಂದರು.

ಆದರೆ, ಶ್ರವಣ್ ಅವರು ಯಾವುದೇ ದೇಣಿಗೆಯನ್ನ ಸ್ವೀಕರಿಸಲಿಲ್ಲ. ಹಸಿವಿನಿಂದಿರುವ ಮಗುವಿಗೆ ಹಾಲು ನೀಡುವುದಕ್ಕೆ ಬೇರೆಯವರಿಂದ ಹಣ ಪಡೆಯುವ ಅಗತ್ಯವಿಲ್ಲ ಎಂದು ಅವರು ನಂಬಿದ್ದರು. ಬಿಹಾರದ ಈ ಟೀ ಅಂಗಡಿ ಕೇವಲ ತಮ್ಮ ಟೀ ವ್ಯಾಪಾರದ ಸ್ವಂತ ಗಳಿಕೆಯಿಂದಲೇ ಈ ಉಚಿತ ಸೇವೆಯನ್ನ ಮುಂದುವರಿಸಿಕೊಂಡು ಬಂದಿದೆ.

ಅಣ್ಣನ ಭರವಸೆಯನ್ನು ಉಳಿಸಿದ ರಂಜಿತ್ ಕುಮಾರ್

ದುರದೃಷ್ಟವಶಾತ್, ಶ್ರವಣ್ ಕುಮಾರ್ ಅವರು 2000ನೇ ಇಸವಿಯಲ್ಲಿ ನಿಧನರಾದರು. ಆದರೆ ಅವರು ಹುಟ್ಟುಹಾಕಿದ್ದ ಈ ಮಾನವೀಯ ಕೆಲಸ ಮಾತ್ರ ನಿಲ್ಲಲಿಲ್ಲ. ಶ್ರವಣ್ ಅವರ ಕಿರಿಯ ಸಹೋದರ ಟುನ್ನಾ ಬಾಬಾ ಎಂದೇ ಚಿರಪರಿಚಿತರಾಗಿರುವ ರಂಜಿತ್ ಕುಮಾರ್ ಅವರೇ ಟೀ ಅಂಗಡಿಯ ಜವಾಬ್ದಾರಿಯನ್ನ ವಹಿಸಿಕೊಂಡರು.

ತಮ್ಮ ಅಣ್ಣನ ಹಾದಿಯಲ್ಲಿಯೇ ಸಾಗಿದ ಅವರು, ರಂಜಿತ್ ಕುಮಾರ್ ಸೇವೆ ಎಂಬಂತೆ ಈ ವಿತರಣೆಯನ್ನ ನಿರಂತರವಾಗಿ ಮುಂದುವರಿಸಿದರು. ಕಳೆದ ಮೂರೂವರೆ ದಶಕಗಳಿಂದ ಈ ಕುಟುಂಬವು ಬೇರೆ ಯಾರದ್ದೂ ಆರ್ಥಿಕ ನೆರವಿಲ್ಲದೆ ಸ್ವಂತ ಖರ್ಚಿನಲ್ಲೇ ಈ ಸೇವೆಯನ್ನ ನಡೆಸಿಕೊಂಡು ಬರುತ್ತಿದೆ.

ರಾಜಗೀರ್ ಬಸ್ ನಿಲ್ದಾಣ ಬಳಿ ಪ್ರತಿದಿನ ಹಾಲಿನ ವಿತರಣೆ

ಪ್ರಸ್ತುತ ರಂಜಿತ್ ಅವರು ಪ್ರತಿದಿನ 3 ರಿಂದ 4 ಲೀಟರ್ ಹಾಲನ್ನ ಕಂದಮ್ಮಗಳಿಗಾಗಿ ಉಚಿತವಾಗಿ ನೀಡುತ್ತಾರೆ. ರಾಜಗೀರ್ ಬಸ್ ನಿಲ್ದಾಣ ಬಳಿ ನಡೆಯುವ ಮಲ್ಮಾಸ್ ಮೇಳದಂತಹ ಜನಸಂದಣಿಯ ಸಮಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವುದರಿಂದ ಈ ಹಾಲಿನ ಬೇಡಿಕೆ 10 ರಿಂದ 15 ಲೀಟರ್‌ಗೆ ಏರುತ್ತದೆ.

"ನಾವು ಸತ್ತಾಗ ನಮ್ಮ ಜೊತೆ ಏನನ್ನು ತೆಗೆದುಕೊಂಡು ಹೋಗುತ್ತೇವೆ? ನಮ್ಮ ಟೀ ಅಂಗಡಿಯ ಆದಾಯದ ಒಂದು ಭಾಗವನ್ನು ಈ ರೀತಿ ಹಾಲಿಗೆ ಖರ್ಚು ಮಾಡುವುದರಿಂದ ಸಿಗುವ ಜನರ ಆಶೀರ್ವಾದವೇ ನಮಗೆ ನೆಮ್ಮದಿ" ಎನ್ನುವುದು ರಂಜಿತ್ ಅವರ ನಂಬಿಕೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+