ಬಿಹಾರದಿಂದ ಲೋಕಸಭೆಗೆ : ಎಲ್ ಜೆಪಿ ಬೇಡಿಕೆಗೆ ಅಸ್ತು ಎಂದ ಬಿಜೆಪಿ
ನವದೆಹಲಿ, ಡಿಸೆಂಬರ್ 23: ಬಿಹಾರದಲ್ಲಿ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಪ್ರಕ್ರಿಯೆ ಭಾರಿ ಕುತೂಹಲ ಕೆರಳಿಸಿತ್ತು.
ಎನ್ ಡಿಎ ಮೈತ್ರಿಕೂಟ ಇಂದು ತನ್ನ ಅಂತಿಮ ನಿರ್ಧಾರ ಪ್ರಕಟಿಸಿದೆ. ನಿರೀಕ್ಷೆಯಂತೆ 40 ಸ್ಥಾನಗಳ ಪೈಕಿ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ ಜೆಪಿಗೆ 6 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ.
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ (ಎಲ್ ಜೆಪಿ) ತನ್ನ ಸೀಟು ಹಂಚಿಕೆ ದಾಳವನ್ನು ಉರುಳಿಸಿತ್ತು. ಅಲ್ಲದೆ, ಒಂದು ರಾಜ್ಯಸಭೆ ಸ್ಥಾನಕ್ಕೂ ಬೇಡಿಕೆ ಇಟ್ಟಿತ್ತು. ಎಲ್ ಜೆಪಿಯ ಎಲ್ಲಾ ಬೇಡಿಕೆಗೆ ಬಿಜೆಪಿ ಅಸ್ತು ಎಂದಿದೆ.

ಸೀಟು ಹಂಚಿಕೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವಾನ್ ಅವರು ಹೇಳಿದಂತೆ, ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17, ಜನತಾ ದಳ (ಯುನೈಟೆಡ್) 17, ಲೋಕ ಜನಶಕ್ತಿ ಪಾರ್ಟಿ 6 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.












Click it and Unblock the Notifications