ಬಿಹಾರ: ಆಶ್ರಮದಲ್ಲಿ 34 ಬಾಲಕಿಯರ ಮೇಲೆ ಅತ್ಯಾಚಾರ

ಪಟ್ನಾ, ಜುಲೈ 28: ಬಿಹಾರದ ಮುಜಫ್ಫರ್ ಪುರ ಜಿಲ್ಲೆಯಲ್ಲಿನ ಹೆಣ್ಣುಮಕ್ಕಳ ಸರ್ಕಾರಿ ಸೇವಾಶ್ರಮದಲ್ಲಿ ಒಟ್ಟು 34 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಜಫ್ಫರ್ ಪುರ ನಿರ್ವಸಿತರ ಕೇಂದ್ರದಲ್ಲಿ 29 ಬಾಲಕಿಯರ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆದಿದೆ ಎಂದು ವರದಿಗಳು ತಿಳಿಸಿದ್ದವು. ಆದರೆ, ಇಲ್ಲಿ ಅತ್ಯಾಚಾರಕ್ಕೆ ಒಳಗಾದವರ ಸಂಖ್ಯೆ 34 ಎಂದು ಮುಜಫ್ಫರ್ ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರಪ್ರೀತ್ ಕೌರ್ ತಿಳಿಸಿದ್ದಾರೆ.

ಈ ಘಟನೆ ದೇಶದಲ್ಲೆಡೆ ತಲ್ಲಣ ಮೂಡಿಸಿದೆ. ಆಶ್ರಮದಲ್ಲಿನ 42 ಬಾಲಕಿಯರನ್ನು ಕಳೆದ ವಾರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಹೆಚ್ಚಿನವರ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.

bihar muzaffarpur girls shelter 34 minors raped not 29

ವಿರೋಧ ಪಕ್ಷಗಳ ತೀವ್ರ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.

ಹೆಣ್ಣುಮಕ್ಕಳ ಪುನರ್ವಸತಿ ಕೇಂದ್ರದಲ್ಲಿದ್ದ ಬಾಲಕಿಯರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿರುವುದು ವರದಿಯಾಗಿತ್ತು.

ಅಲ್ಲದೆ, ಬಾಲಕಿಯೊಬ್ಬಳನ್ನು ಹತ್ಯೆ ಮಾಡಿ ಕೇಂದ್ರದ ಆವರಣದಲ್ಲಿ ಹೂತುಹಾಕಿದ್ದು ಬೆಳಕಿಗೆ ಬಂದಿತ್ತು. ಪ್ರಕರಣ ಸಂಬಂಧ ಹತ್ತು ಮಂದಿ ವಿರುದ್ಧ ದೋಷಾರೋಪ ನಿಗದಿಪಡಿಸಿದ್ದು, ಅವರನ್ನು ಬಂಧಿಸಲಾಗಿದೆ.

ಬಾಲಕಿಯರಿಗೆ ರಕ್ಷಣೆ ಒದಗಿಸುವಲ್ಲಿ ವಿಫಲರಾದ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿರುವ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಬಿಹಾರವು ರಾಕ್ಷಸ್ ರಾಜ್ ಆಗಿದೆ. ರಾವಣ ತಾಯಿ ಸೀತೆಯನ್ನು ಅಪಹರಿಸಿದ್ದು ಇಲ್ಲಿಂದಲೇ. ಇದು ಬಲಾತ್ಕಾರಗಳ ರಾಜ್ಯ. ಹೇಡಿ ದುರ್ಯೋದನ ದ್ರೌಪದಿಯ ವಸ್ತ್ರಾಪಹರಣ ಮಾಡಿದ.

ಬಿಹಾರದಲ್ಲಿ ರಾವಣ-ದುರ್ಯೋದನರ ಜೋಡಿ ಸಹೋದರಿಯರು ಮತ್ತು ತಾಯಂದಿರು ಹೊರಕ್ಕೆ ಬರುವುದು ಕಷ್ಟವಾಗುವಂತೆ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+