ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನಗೆ ಪ್ರಧಾನಿ ಆಗುವ ಆಸೆಯಿಲ್ಲ ಎಂದ ನಿತೀಶ್ ಕುಮಾರ್!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 05: ಭಾರತದ ಪ್ರಧಾನಮಂತ್ರಿ ಹುದ್ದೆಗೆ ಏರಬೇಕು ಎಂಬ ಯಾವುದೇ ಮಹತ್ವಾಕಾಂಕ್ಷೆಯನ್ನು ತಾವು ಹೊಂದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.

Bihar CM Nitish Kumar has no ambition for the Prime Minister Post

ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಪ್ರಬಲ ಪ್ರತಿಪಕ್ಷವನ್ನು ರಚಿಸುವ ಉದ್ದೇಶದಿಂದ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ನಂತರದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಅವರು ಮಾತನಾಡಿದೆ. ಈ ವೇಳೆ ಪ್ರತಿಪಕ್ಷ ಕಾರ್ಯಾಚರಣೆ(Mission Opposition) ಬಗ್ಗೆ ಅವರು ಉಲ್ಲೇಖಿಸಿದರು."ಭಾರತದಲ್ಲಿ ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಲು ಒಂದು ಏಕೀಕೃತ ಪ್ರಯತ್ನವಿದೆ. ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ವಿರೋಧವನ್ನು ಒಂದುಗೂಡಿಸುವುದು ನನ್ನ ಪ್ರಯತ್ನವಾಗಿದೆ. ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ನನ್ನನ್ನು ತೊಡಗಿಸಿಕೊಳ್ಳುವ ಉದ್ದೇಶ ನನಗಿಲ್ಲ" ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಬಿಜೆಪಿ ಜೊತೆಗೆ ಮುನಿಸಿಕೊಂಡ ನಿತೀಶ್:
ಬಿಹಾರದಲ್ಲಿ ಬಿಜೆಪಿ ಜೊತೆಗೆ ಸೇರಿಕೊಂಡೇ ಈ ಮೊದಲು ಸರ್ಕಾರವನ್ನು ರಚಿಸಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಸರಿ ಪಡೆಯೊಂದಿಗಿನ ಸ್ನೇಹಕ್ಕೆ ಗುಡ್ ಬೈ ಹೇಳಿದರು. ನಂತರದಲ್ಲಿ ಲಾಲೂ ಪ್ರಸಾದ್ ಯಾದವ್ ಪುತ್ರ ಹಾಗೂ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಜೊತೆಗೆ ಮೈತ್ರಿ ಮಾಡಿಕೊಂಡು ನೂತನ ಸರ್ಕಾರವನ್ನು ರಚಿಸಿದರು. ಇದರ ಮಧ್ಯೆ ಬಿಜೆಪಿಗೆ ಸೆಡ್ಡು ಹೊಡೆದ ನಿತೀಶ್ ಕುಮಾರ್ ಅವರೇ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಎನ್ನುವ ಊಹಾಪೋಹಗಳು ಹರಿದಾಡುವುದಕ್ಕೆ ಶುರುವಾಯಿತು.

ಲ್ಲ ಊಹಾಪೋಹಗಳ ಮಧ್ಯೆ ನಿತೀಶ್ ಕುಮಾರ್ ಸ್ಪಷ್ಟನೆ:
ನರೇಂದ್ರ ಮೋದಿಗೆ ತಿರುಗೇಟು ನೀಡುವ ನಿಟ್ಟಿನಲ್ಲಿ ಪ್ರಬಲ ನಾಯಕರೊಬ್ಬರನ್ನು ಪ್ರತಿಪಕ್ಷಗಳು ಹುಡುಕಾಡುತ್ತಿವೆ. ಈ ಹಂತದಲ್ಲಿ ಬಿಜೆಪಿ ದೋಸ್ತಿಯಿಂದ ಹೊರ ಬಂದಿರುವ ನಿತೀಶ್ ಕುಮಾರ್ ಆ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿ ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗುತ್ತಿದೆ. ಹೀಗಾಗಿಯೇ ನಿತೀಶ್ ಕುಮಾರ್ ಮುಂಬರುವ ಲೋಕಸಭಾ ಚುನಾವಣೆಯ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಅದಾಗ್ಯೂ, ಈ ಎಲ್ಲಾ ಸುದ್ದಿಗಳನ್ನು ಸ್ವತಃ ನಿತೀಶ್ ಕುಮಾರ್ ತಳ್ಳಿ ಹಾಕಿದ್ದಾರೆ. ತಾವು ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ಅಭಿಲಾಷೆ ಅಥವಾ ಮಹತ್ವಾಕಾಂಕ್ಷೆಯನ್ನು ಹೊಂದಿಲ್ಲ ಎಂಬು ತಿಳಿಸಿದ್ದಾರೆ.

English summary
Bihar CM Nitish Kumar has no ambition for the Prime Minister Post; This Statement came out after rahul gandhi meeting
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X