ಬಿಹಾರದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ: ಕೇಸರಿ ಪಕ್ಷದಿಂದ ಹೊರಹೋದ ಪ್ರಬಲ ನಾಯಕ
ಪಟ್ನಾ, ಡಿಸೆಂಬರ್ 30: ಬಿಹಾರದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ. ಬಿಹಾರದ ಬಿಜೆಪಿಯು ತನ್ನ ಉಪಾಧ್ಯಕ್ಷರಲ್ಲಿ ಒಬ್ಬರಾದ ರಾಜೀವ್ ರಂಜನ್ ಅವರನ್ನು ಅಶಿಸ್ತಿನ ಕಾರಣಕ್ಕಾಗಿ ವಜಾಗೊಳಿಸಿದೆ ಎಂದು ಶುಕ್ರವಾರ ಹೇಳಿದೆ.
ನಾನೇ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ರಾಜೀವ್ ರಂಜನ್ ಹೇಳಿಕೊಂಡಿದ್ದಾರೆ.
ರಂಜನ್ ಅವರು ಪ್ರಾಥಮಿಕ ಸದಸ್ಯತ್ವಕ್ಕೆ 'ರಾಜೀನಾಮೆ ನೀಡಿದ್ದೇನೆ' ಎಂದು ಹೇಳಿಕೊಂಡ ಸ್ವಲ್ಪ ಸಮಯದ ನಂತರ, ಡಿಸೆಂಬರ್ 29 ರಂದು ರಾಜ್ಯ ಘಟಕದ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಅವರು ಹೊರಡಿಸಿದ ಪತ್ರವನ್ನು ಪಕ್ಷವು ಹಂಚಿಕೊಂಡಿದೆ.
ಜೈಸ್ವಾಲ್ ಬರೆದ ಪತ್ರದಲ್ಲಿ, 'ಮೌಖಿಕವಾಗಿ ನೀಡಿದ ಎಚ್ಚರಿಕೆಗಳನ್ನು ರಂಜನ್ ನಿರ್ಲಕ್ಷಿಸಿದ್ದಾರೆ. ಪಕ್ಷದ ಶಿಸ್ತಿಗೆ ವಿರುದ್ಧವಾದ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಾರೆ' ಎಂದು ತಿಳಿಸಿದ್ದಾರೆ.

'ನಿಮ್ಮ ಮಾತುಗಳು ರಾಜ್ಯ ಉಪಾಧ್ಯಕ್ಷರಾಗಲು ಯೋಗ್ಯವಾಗಿಲ್ಲ. ನಿಮ್ಮ ಹೇಳಿಕೆಗಳು ಪಕ್ಷದ ಪ್ರತಿಷ್ಠೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಮೂಲಕ ನಿಮ್ಮನ್ನು ನಿಮ್ಮ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿದೆ' ಎಂದು ಜೈಸ್ವಾಲ್ ಪತ್ರದಲ್ಲಿ ಹೇಳಿದ್ದಾರೆ.
ಬಿಹಾರದ ಬಿಜೆಪಿಯು ದಲಿತರು ಮತ್ತು ಒಬಿಸಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ರಂಜನ್ ಹೇಳಿಕೆಗಳನ್ನು ನೀಡಿದ್ದರು.
'ಸಬ್ಕಾ ಸಾಥ್ ಸಬ್ಕಾ ವಿಕಾಸ್' ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಪಕ್ಷ ಚ್ಯುತಿ ತಂದಿದೆ. ಬಿಹಾರದಲ್ಲಿ ಬಿಜೆಪಿಯ ಅಜೆಂಡಾ ಪಾಟ್ನಾ ಕೇಂದ್ರಿತವಾಗಿದೆ. ನನ್ನ ಹುಟ್ಟೂರಾದ ನಳಂದದಂತಹ ಪ್ರಮುಖ ಜಿಲ್ಲೆಗಳು ಆದ್ಯತೆಯ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ' ಎಂದು ರಂಜನ್ ಆರೋಪಿಸಿದ್ದಾರೆ.
ರಂಜನ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಈ ಹಿಂದೆ ಜೆಡಿಯುನಲ್ಲಿದ್ದರು. 2015 ರಲ್ಲಿ ಬಿಜೆಪಿಗೆ ಸೇರುವವರೆಗೂ ಸತತ ಎರಡು ಅವಧಿಗೆ ಇಸ್ಲಾಂಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಇತ್ತೀಚೆಗೆ, ಸರನ್ ಜಿಲ್ಲೆಯಲ್ಲಿ ನಡೆದ ಹೂಚ್ ದುರಂತದ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಬಿಜೆಪಿ ತೀವ್ರವಾಗಿ ಒತ್ತಾಯಿಸಿದ್ದ ಬಿಜೆಪಿಯ ನಡೆಗೆ ಅಸಮ್ಮತಿ ವ್ಯಕ್ತಪಡಿಸಿದ್ದರು.
ಜನವರಿ 3 ರಂದು ಅಧಿಕಾರ ಕಳೆದುಕೊಂಡ ನಂತರ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಮೊದಲ ಬಿಹಾರ ಪ್ರವಾಸಕ್ಕೆ ಮುನ್ನ ನಡೆದ ಈ ಬೆಳವಣಿಗೆಯು ರಾಜ್ಯ ಬಿಜೆಪಿಗೆ ದೊಡ್ಡ ಮುಜುಗರವನ್ನುಂಟು ಮಾಡಿದೆ. ಇದರಿಂದ ಬಿಜೆಪಿಗೆ ಮತ್ತೊಂದು ಹಿನ್ನೆಡೆಯಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.












Click it and Unblock the Notifications