ಸೋನಾಕ್ಷಿ, ಇಶಾ ಕೊಪ್ಪಿಕರ್ ಮೇಲೆ ಬಿತ್ತು ಎಫ್ ಐಆರ್
ಉದಯಪುರ(ರಾಜಸ್ಥಾನ), ಏ.16: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ, ನಟಿ ಕಮ್ ರೂಪದರ್ಶಿ ಇಶಾ ಕೊಪ್ಪಿಕರ್ ಹಾಗೂ ಇನ್ನೂ ಮೂವರ ವಿರುದ್ಧ ಸ್ಥಳೀಯ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಕಿರುತೆರೆ ನಟಿ, ಬಿಗ್ ಬಾಸ್ 5ರ ಸ್ಪರ್ಧಿ ಪೂಜಾ ಮಿಶ್ರಾಗೆ ಕಿರುಕುಳ ಕೊಟ್ಟ ಆರೋಪವನ್ನು ಹೊರೆಸಲಾಗಿದೆ.
ಕಿರುತೆರೆ ನಟಿ ಪೂಜಾ ಮಿಶ್ರಾ ಅವರು ಕೊಟ್ಟಿರುವ ದೂರಿನ ಅನ್ವಯ ನಟಿ ಸೋನಾಕ್ಷಿ ಸಿನ್ಹಾ ಹಾಗೂ ಅವರ ತಾಯಿ ಪೂನಂ ಸಿನ್ಹಾ, ಮಾಡೆಲ್ ಇಶಾ ಕೊಪ್ಪಿಕರ್ ಹಾಗೂ ಅವರ ಪತಿ ಮತ್ತು ಮತ್ತೊಂದು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಲಾಗಿದೆ. ತನಿಖೆ ಮುಂದುವರೆದಿದೆ ಎಂದು ರಾಜಸ್ಥಾನ ಪೊಲೀಸರು ಹೇಳಿದ್ದಾರೆ.

ಉದಯಪುರ್ ನ ಹೋಟೆಲ್ ವೊಂದರಲ್ಲಿ ನೆಲೆಸಿದ್ದಾಗ ಆರೋಪಿರೆಲ್ಲರೂ ಸೇರಿ ನನ್ನ ವಿರುದ್ಧ ಪಿತೂರಿ ಮಾಡಿ ನನಗೆ ಕಿರುಕುಳ ನೀಡಿದ್ದಾರೆ. ನನ್ನ ಅನುಮತಿ ಇಲ್ಲದೆ ನನ್ನ ರೂಮಿಗೆ ಅನಾಮಿಕರು ಬಂದು ಹೋಗಿ ಮಾಡಿದ್ದಾರೆ. ನನ್ನ ವಸ್ತುಗಳು ಕಳುವಾಗಿದೆ ಎಂದು ದೂರಿನಲ್ಲಿ ಪೂಜಾ ಆರೋಪಿಸಿದ್ದಾರೆ.
ನನ್ನ ರೂಮಿನಲ್ಲಿದ್ದ ಬೆಲೆಬಾಳುವ ಪರ್ಸ್ ಹಾಗೂ ಸಿಗರೇಟ್ ಗಳನ್ನು ಯಾರೋ ಕದ್ದು ಹೋಗುವುದನ್ನು ನಾನು ಕಂಡೆ. ಏ.11ರಿಂದ ಏ.14ರ ತನಕ ನಾನು ಇಲ್ಲಿನ ಹೋಟೆಲ್ ವೊಂದರಲ್ಲಿ ತಂಗಿದ್ದೆ. ಅನಾಮಿಕ ವ್ಯಕ್ತಿಯೊಬ್ಬ ಅನುಮತಿ ಇಲ್ಲದೆ ರೂಮಿಗೆ ನುಗ್ಗಿ ನನ್ನನ್ನು ಮುಟ್ಟಲು ಯತ್ನಿಸಿದ ಎಂದು ಪೂಜಾ ವಿವರಣೆ ನೀಡಿದ್ದಾರೆ.
ಉದಯ್ ಪುರ್ ನ ಅಂಬಾ ಮಠ ಪೊಲೀಸರು ಐಪಿಸಿ ಸೆಕ್ಷನ್ 379 ಹಾಗೂ 354 ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ಪಿಟಿಐ)












Click it and Unblock the Notifications