ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್ಸಿ ಪರೀಕ್ಷೆ ಬರೆಯಲು ಹೊರಟ ತರುಣಿ ಮೇಲೆ ಸಾಮೂಹಿಕ ಅತ್ಯಾಚಾರ

By Sachhidananda Acharya
|
Google Oneindia Kannada News

ಭೋಪಾಲ್, ನವೆಂಬರ್ 3: ಸುಮಾರು ಮೂರು ಗಂಟೆಗಳ ಕಾಲ ಭೋಪಾಲಿನ ಸೇತುವೆ ಅಡಿಯಲ್ಲಿ ಈಕೆಯ ಮೇಲೆ ನಾಲ್ಕು ಜನ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಕಟ್ಟಿ ಹಾಕಿ ಒಬ್ಬರಾದ ಮೇಲೊಬ್ಬರು ಬಂದು ಮೇಲೆರಗಿದ್ದರು.

ಅತ್ಯಾಚಾರವಾದ ನಂತರ ಆಕೆ ದೂರು ಸಲ್ಲಿಸಲು ಹೋದರೆ ಮೂರು ಠಾಣೆ ಸಿಬ್ಬಂದಿಗಳು ಆಕೆಯನ್ನು ವಾಪಸ್ ಕಳುಹಿಸಿದರು. ಆಕೆಯ ಪೋಷಕರು ಪೊಲೀಸ್ ಇಲಾಖೆಯಲ್ಲೇ ಇದ್ದರೂ 'ಈಕೆ ಸಿನಿಮಾ ಕಥೆ ಹೇಳುತ್ತಿದ್ದಾಳೆ' ಎಂಬುದು ಪೊಲೀಸರ ದೂರು ದಾಖಲಿಸಿಕೊಂಡಿಲ್ಲ.

Bhopal gang-rape: 3 policemen suspended for calling it 'filmy story', CM directs fast-track trial

ಆದರೆ ಅದೇನಾಯ್ತೋ ಏನೋ ಆಕೆ ಮರುದಿನ ಹಾಡ ಹಗಲೇ ಇಬ್ಬರು ಅತ್ಯಾಚಾರಿಗಳನ್ನು ಪತ್ತೆ ಹಚ್ಚಿ ಎಳೆದು ತಂದಳು. ಆಗ ಪೊಲೀಸರು ಬಾಯಿ ಮುಚ್ಚಿಕೊಂಡು ಕೇಸು ದಾಖಲಿಸಿದರು.

ಸಹೋದರನ ಕಣ್ಣೆದುರಲ್ಲೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಸಹೋದರನ ಕಣ್ಣೆದುರಲ್ಲೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

ಹೀಗೆ ಸಾಮೂಹಿಕ ಅತ್ಯಾಚಾರದ ಪ್ರಕರಣ ಹೊರ ಬೀಳುತ್ತಿದ್ದ ಭೋಪಾಲ್ ನಗರವೇ ಒಮ್ಮೆ ಜುಮ್ಮೆಂದಿತು. ಕಾರಣ ಆಕೆಯನ್ನು ನಗರದ ಜನದಟ್ಟಣೆಯ ರಸ್ತೆಯಲ್ಲೇ ರೇಪ್ ಮಾಡಲಾಗಿತ್ತು. ಸುತ್ತ ಮುತ್ತ ರೈಲು ಹಳಿ, ಮೀಸಲು ಪೊಲೀಸ್ ಪಡೆ ಪೋಸ್ಟ್, ರೈಲ್ವೇ ನಿಲ್ದಾಣಗಳಿದ್ದಾಗಿಯೂ ವಾಹನದಲ್ಲಿ ಆಕೆಯ ಬಟ್ಟೆ ಬಿಚ್ಚಿ, ಕಟ್ಟಿ ಹಾಕಿ ರೇಪ್ ಮಾಡಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ.

ಯುಪಿಎಸ್ಸಿ ತರಬೇತಿ

ಯುವತಿ ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಈ ಕಾರಣಕ್ಕೆ ಭೋಪಾಲ್ ನಲ್ಲಿ ತರಬೇತಿ ಮುಗಿಸಿ ಪ್ರತಿದಿನ ಒಂದು ಗಂಟೆ ಪ್ರಯಾಣದ ದೂರವಿರುವ ಊರಿಗೆ ಪ್ರಯಾಣಿಸುತ್ತಿದ್ದಳು.

ಒಡಿಶಾ: ಪ್ರಾರ್ಥನೆಗೆ ತೆರಳುತ್ತಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರಒಡಿಶಾ: ಪ್ರಾರ್ಥನೆಗೆ ತೆರಳುತ್ತಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಹಾಗೆ ಮಂಗಳವಾರ ಆಕೆ ಕೋಚಿಂಗ್ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆ ಹಬೀಬ್ ಗಂಜ್ ರೈಲ್ವೇ ನಿಲ್ದಾಣದತ್ತ ತೆರಳುತ್ತಿದ್ದಾಗ ಆಕೆಯನ್ನು ಆರೋಪಿಯೊಬ್ಬ ಹಿಡಿದು ಎಳೆದಿದ್ದಾನೆ. ಆಕೆ ಆತನಿಗೊಂದು ಒದ್ದು ತಪ್ಪಿಸಿಕೊಂಡಿದ್ದಳು. ಆದರೆ ತನ್ನ ಸ್ನೇಹಿತನನ್ನು ಕರೆದು ಆತನ ಜತೆ ಆಕೆಯನ್ನು ಕರೆದೊಯ್ಯಲು ಹೊರಟಿದ್ದಾನೆ. ಆಗ ಆಕೆ ಕಲ್ಲಿನಿಂದ ಇಬ್ಬರ ಮೇಲೂ ದಾಳಿ ನಡೆಸಿದ್ದಾಳೆ.

ಆದರೆ ಪ್ರತಿ ದಾಳಿ ನಡೆಸಿದ ಅವರೂ ಆಕೆಯನ್ನು ಕಲ್ಲಿನಿಂದ ಗುದ್ದಿ ಕಟ್ಟಿ ಹಾಕಿ ನಂತರ ಅತ್ಯಾಚಾರವೆಸಗಿದ್ದಾರೆ. ಆಗ ಒಬ್ಬಾತ ನೋಡಲು ಇದ್ದು ಇನ್ನೊಬ್ಬಾತ ಸಿಗರೇಟ್ ಗುಟ್ಕಾ ತರಲು ಹೋಗಿದ್ದ. ಆಗ ಆಕೆ ಅಲ್ಲಿದ್ದವನ ಬಳಿ ಬಟ್ಟೆಗಾಗಿ ಬೇಡಿಕೊಂಡಿದ್ದಾಳೆ.

Bhopal gang-rape: 3 policemen suspended for calling it 'filmy story', CM directs fast-track trial

ಆತ ಹೋಗಿ ಆತನ ಹೆಂಡತಿಯ ಬಟ್ಟೆ ತೆಗೆದುಕೊಂಡು ಬಂದ. ಆದರೆ ಜತೆಗಿಬ್ಬರು ಬಂದಿದ್ದರು. ಅವರೂ ಆಕೆಯ ಮೇಲೆ ಎರಗಿದರು.

ಹೀಗೆ 7 ಗಂಟೆಯಿಂದ 10 ಗಂಟೆ ತನಕ ಒಬ್ಬರಾದ ಮೇಲೊಬ್ಬರು ಎರಗುವುದು ನಡೆದೇ ಇತ್ತು. ಕೊನೆಗೆ ಹತ್ತು ಗಂಟೆ ನಂತರ ಆಕೆಗೆ ಬಟ್ಟೆ ಧರಿಸಲು ಅವಕಾಶ ನೀಡಿ ಬಿಟ್ಟು ಬಿಟ್ಟರು. ಕಿವಿಯೋಲೆ, ಕೈಗಡಿಯಾರ, ಫೋನನ್ನು ಆಕೆ ಅತ್ಯಾಚಾರಿಗಳಿಗೆ ನೀಡಿ ಹಜರೀಬಾಗ್ ನಿಲ್ದಾಣ ತಲುಪಿ ಮನೆಯವರಿಗೆ ಸುದ್ದಿ ಮುಟ್ಟಿಸಿದಳು.

ಮರುದಿನ ಪೋಷಕರ ಜತೆ ಆಕೆ ದೂರು ದಾಖಲಿಸಲು ಬಂದರೆ ಯಾರೂ ದೂರು ಸ್ವೀಕರಿಸಲು ಸಿದ್ಧವಿರಲಿಲ್ಲ. ಕೊನೆಗೂ ಆಕೆ ಸಾರ್ವಜನಿಕವಾಗಿ ಇಬ್ಬರನ್ನು ಹಿಡಿದ ನಂತರ ದೂರು ದಾಖಲಿಸಲಾಯಿತು.

ಮೂವರ ಪೊಲೀಸರ ಅಮಾನತು

ಇದೀಗ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು ದೂರು ದಾಖಲಿಸದ ಎಂಪಿ ನಗರ್ ಪೊಲೀಸ್ ಠಾಣೆ ಎಸ್ಐ ಆರ್.ಎನ್ ತೇಕಮ್ ರನ್ನು ವಜಾ ಮಾಡಲಾಗಿದೆ. ಜತೆಗೆ ಇನ್ನಿಬ್ಬರನ್ನೂ ವಜಾ ಮಾಡಲಾಗಿದೆ. ಪ್ರಕರಣದ ವಿಚಾರಣೆಯನ್ನು ತ್ವರಿತಗತಿ ನ್ಯಾಯಾಲಯದಲ್ಲಿ ಮಾಡುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೂಚಿಸಿದ್ದಾರೆ.

ಜತೆಗೆ ಪ್ರಕರಣದ ವರದಿ ಕೇಳಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯ ಪ್ರದೇಶ ಡಿಜಿಪಿಗೆ ಪತ್ರ ಬರೆದಿದೆ.

ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಲ್ಲದೆ, ಪ್ರಕರಣ ದಾಖಲಿಸದ ಪೊಲೀಸರ ವಿರುದ್ಧವೂ ಕ್ರಮ ಜರುಗಿಸುವಂತೆ ಆಯೋಗ ಡಿಜಿಪಿಗೆ ಸೂಚನೆ ನೀಡಿದೆ.

ಓರ್ವ ನಾಪತ್ತೆ, ಮೂವರು ಅರೆಸ್ಟ್

ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಓರ್ವ ಆರೋಪಿ ಇನ್ನೂ ತಲೆ ಮರೆಸಿಕೊಂಡಿದ್ದಾನೆ. ಈತನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಭೋಪಾಲ್ ಪೊಲೀಸರು ಹೇಳಿದ್ದಾರೆ.

English summary
The Madhya Pradesh government on Friday suspended three police officers for their negligence and alleged misbehavior with a rape victim during filing of the complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X