Bhavitha Mandava: ಚಾನೆಲ್‌ನ 2026 ಫ್ಯಾಷನ್ ಶೋ ಉದ್ಘಾಟಿಸಿದ ಭವಿತಾ ಮಂಡವ: ಮಾಡೆಲ್ ಆಗಿ ಸಾಧನೆ..
ನ್ಯೂಯಾರ್ಕ್ ನಗರದಲ್ಲಿ ಮ್ಯಾಥಿಯು ಬ್ಲೇಜಿ ಅವರ ಚಾನೆಲ್‌ನ ಮೀಟಿಯರ್ಸ್ ಡಿ'ಆರ್ಟ್ 2026 ಪ್ರದರ್ಶನ ಉದ್ಘಾಟಿಸುವ ಮೂಲಕ 'ಭವಿತ ಮಾಂಡವ' (Bhavitha Mandava) ಅವರ ಮಾಡೆಲ್ ವೃತ್ತಿಜೀವನದ ನಿರ್ಣಾಯಕ ಕ್ಷಣ ಆನಂದಿಸಿದ್ದಾರೆ. ಪೋಷಕರ ಕಂಗಳಲ್ಲಿ ಮಗಳ ಕನಸು ನನಸಾಗಿದ್ದು ಕಂಡು ಭಾವುಕರಾದರು. ಭವಿತಾ ಯುವ ಮಾಡೆಲ್ ಆಗಿದ್ದರ ಹಿಂದಿನ ಕಥೆ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಖ್ಯಾತ ಸೆಲೆಬ್ರೆಟಿಗಳು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಬಗ್ಗೆ ಅನೇಕರು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದಾರೆ.
ಮಾಡೆಲ್ ಲೋಕಕ್ಕೆ ಮತ್ತೊಂದು ಪ್ರತಿಭೆ ಅನಾವರಣಗೊಂಡಿತು. ನ್ಯೂಯಾರ್ಕ್‌ನ ಬೋವರಿ ರೈಲು ಸ್ಟೇಷನ್‌ನ ಪ್ಲಾಟ್‌ಫಾರ್ಮ್, ಮೆಟ್ಟಿಲುಗಳಿಂದ ತನ್ನ ಭವ್ಯವಾದ ರನ್‌ವೇನಲ್ಲಿ ನಡೆದು ಬರುತ್ತಿರುವುದನ್ನು ಅವರ ಪೋಷಕರು ನೋಡಿ, ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದ ಮತ್ತೊಂದು ವಿಡಿಯೋದಲ್ಲಿ ಕಾಣಿಸುತ್ತದೆ. ಅವರ ಕುಟುಂಬ ಭಾವನಾತ್ಮ ಕ್ಷಣಕ್ಕೆ ಸಾಕ್ಷಿ ಆಯಿತು. ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಮ್ಮ ಪೋಷಕರು ಚಪ್ಪಾಳೆ ತಟ್ಟ ಹೆಮ್ಮೆ ವ್ಯಕ್ತಪಡಿಸಿದ್ದು, ಭಾವುಕರಾಗಿದ್ದನ್ನು ಸೆರೆ ಹಿಡಿದ ಭವಿತ ಇನ್‌ಸ್ಟಾಗ್ರಾಮ್‌ನಲ್ಲಿ ವಿವರಣೆಯೊಂದಿಗೆ ಹಂಚಿಕೊಂಡಿದ್ದಾರೆ. ಇದಕ್ಕೆ ನಟಿಯರಾದ ಪೂಜಾ ಹೆಗ್ಡೆ, ರಿಯಾ ಕಪೂರ್ ಮತ್ತು ಅದಿತಿ ರಾವ್ ಸೇರಿ ಹಲವರು ಕಾಮೆಂಟ್ ಮಾಡಿದ್ದಾರೆ. ಹಾರ್ಟ್ ಎಮೋಜಿ ಹಾಕಿ ಮನದುಂಬಿ ಶುಭಾಷಯ ಕೋರಿದ್ದಾರೆ.
ಇದು ನನ್ನ ಮಾಡೆಲ್ ವೃತ್ತಿಜೀವನದ ಅತ್ಯಂತ ಮಹತ್ವದ ಕ್ಷಣ. ಹೈದರಾಬಾದ್‌ನಿಂದ ನೇರ ಹೌಟ್ ಕೌಚರ್ ಜಗತ್ತಿಗೆ ಬಂದಿದ್ದನ್ನು ನೆನಪಿಸಿಕೊಂಡರು. ಫ್ಯಾಷನ್ ಕ್ರಿಯೇಟರ್ ಡೈಲನ್ ಕೆಲ್ಲಿ ಅವರ "ವಾಕ್ ವಿತ್ ಅಸ್" ವೀಡಿಯೊದಲ್ಲಿ ಭಾಗವಹಿಸಿದ್ದೆ. ಮಾಡೆಲ್ ಆಗುವ ಅವಕಾಶ ಸಿಕ್ಕದ್ದನ್ನು ವಿವರಿಸಿದ ಅವರು, ಅಟ್ಲಾಂಟಿಕ್ ಅವೆನ್ಯೂನಲ್ಲಿ ಓಡಾಡುತ್ತಿದ್ದಾಗ ಒಬ್ಬ ಸ್ಕೌಟ್ ತಡೆದು ಮಾಡೆಲ್ ಆಗುವ ಆಸಕ್ತಿ ಇದೆಯೆ ಎಂದು ಕೇಳಿದ್ದರು. ಆಗ ನಾನು ಅವರ ಮಾತನ್ನು ನಿರಾಕರಿಸಿದ್ದೆ. ಮತ್ತೊಂದೆಡೆ ನಾನು ಪಡೆದಿದ್ದ ವಿದ್ಯಾರ್ಥಿ ಸಾಲ ತೀರಿಸಲು ಈ ವೃತ್ತಿ ನನಗೆ ಸಹಾಯವಾಗುತ್ತದೆ ಎಂದು ಭಾವಿಸಿದೆ. ಆಗ ಒಮ್ಮೆ ಪ್ರಯತ್ನಿಸೋಣ ಎಂಬ ಆಲೋಚನೆ ನನಗೆ ಬಂತು. ಅಲ್ಲಿಂದ ಫ್ಯಾಷನ್ ಜಗತ್ತಿನೆಡೆಗೆ ಒಲವು ಹೆಚ್ಚತೊಡಗಿತು ಎಂದು ಪೋಸ್ಟ್ ಮಾಡಿದ್ದಾರೆ.
ಪದವಿ ಬಳಿಕ ನನ್ನ ಮುಂದಿನ ಆಯ್ಕೆ ಬಗ್ಗೆ ಕೊಂಚ ಗೊಂದಲವಿತ್ತು. ಟೆಕ್ ಕ್ಷೇತ್ರದಲ್ಲಿ ಮುಂದುವರಿಯಬೇಕಾ? ಅಥವಾ ಮಾಡೆಲಿಂಗ್‌ನಲ್ಲಿ ಕ್ಷೇತ್ರದಲ್ಲಿ ಸಕ್ರಿಯವಾಗಬೇಕಾ? ಎಂಬ ಆಯ್ಕೆ ನನ್ನ ಮುಂದಿತ್ತು. ಈ ವೇಳೆ ಅಪ್ಪ, ಅಮ್ಮ ಬೆಂಬಲದೊಂದಿಗೆ ನಾನು ಉತ್ತಮ ಮಾರ್ಗ ಆಯ್ಕೆ ಮಾಡಿಕೊಂಡೆ ಎಂದು ಭವಿತ ಹೇಳಿದರು.
ವಿಶೇಷ ಒಪ್ಪಂದದಂತೆ ಚಾನೆಲ್‌ನ ಮೀಟಿಯರ್ಸ್ ಡಿ'ಆರ್ಟ್ 2026 ಪ್ರದರ್ಶನ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದೆ. ವಿನ್ಯಾಸಕಾರ ಮ್ಯಾಥ್ಯೂ ಬ್ಲೇಜಿ ನೀಡಿದ ಸಲಹೆಯಂತೆ ನಾನು ನಡೆಯುವಾಗ ಹೆಚ್ಚು ಖುಷಿಪಟ್ಟುಕೊಂಡು, ಆತ್ಮವಿಶ್ವಾದಿಂದ ನಡೆದೆ. ಇದು ನನ್ನು ಮತ್ತಷ್ಟು ಭರವಸೆ ನೀಡಿತು ಎಂದಿದ್ದಾರೆ.
ಭಾರತೀಯ ಮಾಡೆಲ್ ಆಗಿರುವುದು ನನಗೆ ಐತಿಹಾಸಿಕ ಸಾಧನೆ. ಈ ಅವಕಾಶ ಸಾಧ್ಯವಾಗಲು ಕಾರಣರಾದ ಕಾಸ್ಟಿಂಗ್ ನಿರ್ದೇಶಕಿ ಅನಿತಾ ಬಿಟ್ಟನ್‌ರಿಗೆ ಅವರಿಗೆ ಭವಿತ ಧನ್ಯವಾದ ತಿಳಿಸಿದರು. ಅನೇಕ ಯುವಕರು ಮತ್ತು ಅಭಿಮಾನಿಗಳು ಭವಿತಾ ಅವರಿಗೆ ಶುಭಾಷಯ ಕೋರಿದ್ದು, ಇದು ನಮ್ಮಂಥವರೆಗೆ ಪ್ರೇರಣೆ ಎಂದು ತಿಳಿಸಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications