ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಜಪೇಯಿ, ಮಾಳವೀಯರಿಗೆ 'ಭಾರತರತ್ನ' ಘೋಷಣೆ

By Mahesh
|
Google Oneindia Kannada News

ನವದೆಹಲಿ, ಡಿ.24: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಶಿಕ್ಷಣ ತಜ್ಞ ಮದನ್ ಮೋಹನ್ ಮಾಳವೀಯ ಅವರಿಗೆ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಕಚೇರಿಯಿಂದ ಅಧಿಕೃತವಾಗಿ ಈ ಬಗ್ಗೆ ಟ್ವೀಟ್ ಮಾಡಲಾಗಿದೆ.

ವಾಜಪೇಯಿ ಅವರ 90ನೇ ಹುಟ್ಟು ಹಬ್ಬ(ಡಿ.25ರಂದು)ಕ್ಕೆ ನರೇಂದ್ರ ಮೋದಿ ಅವರು ಭಾರಿ ಉಡುಗೊರೆಯನ್ನು ಈ ಮೂಲಕ ನೀಡಿದ್ದಾರೆ. ವಾಜಪೇಯಿ ಅವರ ಹುಟ್ಟುಹಬ್ಬ ದಿನವನ್ನು 'ಉತ್ತಮ ಆಡಳಿತ ದಿನ' ಎಂದು ಮೋದಿ ಘೋಷಿಸಿದ್ದಾರೆ. [ಅಟಲ್ ಬಿಹಾರಿ ವಾಜಪೇಯಿ ಪರಿಚಯ]

ಸಜ್ಜನ ರಾಜಕಾರಣಿ, ಅಜಾತಶತ್ರು ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿ ನೀಡಬೇಕು ಎಂಬುದು ಮೋದಿ ಅವರ ಬಹು ದಿನಗಳ ಕನಸಾಗಿದೆ. [ಸಿಎನ್ ಆರ್ ರಾವ್, ಸಚಿನ್ ಈಗ 'ಭಾರತ ರತ್ನ' ]

Atal Bihari Vajpayee

ನವದೆಹಲಿಯಲ್ಲಿ ಬುಧವಾರ ನಡೆದ ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. 1996ರಲ್ಲಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರ 13 ದಿನಗಳ ಅಧಿಕಾರ ನಡೆಸಿತ್ತು. ವಾಜಪೇಯಿ ಅವರು ದೇಶದ 11ನೇ ಪ್ರಧಾನಿಯಾದರು. ನಂತರ 1998 ರಿಂದ 2004ರ ತನಕ ವಾಜಪೇಯಿ ಅವರು ಪೂರ್ಣ ಅಧಿಕಾರ ಅವಧಿ ಕಂಡ ಕಾಂಗ್ರೆಸ್ಸೇತರ ಪ್ರಥಮ ಪ್ರಧಾನಿ ಎನಿಸಿದರು. ['ಸಚಿನ್ ಗೆ ಭಾರತ ರತ್ನ ದೊಡ್ಡ ಜೋಕು']

ದೇಶದ ಅತ್ಯುನ್ನತ ಪ್ರಶಸ್ತಿ ಘೋಷಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಜನವರಿ 26ರ ಗಣರಾಜ್ಯೋತ್ಸವ ದಿನದಂದು ಪ್ರಶಸ್ತಿ ಪ್ರದಾನ ಮಾಡುವ ಸಾಧ್ಯತೆಯಿದೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲೂ ವಾಜಪೇಯಿಗೆ ಭಾರತ ರತ್ನ ನೀಡಬೇಕೆಂದು ಬಿಜೆಪಿ ಆಗ್ರಹಿಸಿತ್ತು. [ಮದನ್ ಮೋಹನ್ ಮಾಳವೀಯ ಜೀವನ ಅವಲೋಕನ]

ಎನ್ ಡಿಎ ಅಧಿಕಾರ ಅವಧಿಯಲ್ಲಿ ಗಾಯಕಿ ಲತಾ ಮಂಗೇಷ್ಕರ್, ಉಸ್ತಾದ್ ಬಿಸ್ಮಿಲ್ಲಾ ಖಾನ್, ಅಮಾರ್ತ್ಯ ಸೇನ್, ಪಂಡಿತ್ ರವಿಶಂಕರ್, ಗೋಪಿನಾಥ್ ಬೊರ್ಡೊಲಾಯಿ, ಜಯಪ್ರಕಾಶ್ ನಾರಾಯಣ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಿತ್ತು.

ಯುಪಿಎ 2 ಸರ್ಕಾರ ತನ್ನ ಅವಧಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವಿಜ್ಞಾನಿ, ಕನ್ನಡಿಗ ಪ್ರೊ.ಸಿ.ಎನ್ ಆರ್ ರಾವ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The Narendra Modi led government announced Bharat Ratna for veteran BJP leader and former Prime Minister Atal Bihari Vajpayee, and educationist Madan Mohan Malaviya President Pranab Mukherjee announced this on twitter today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X