'ಭಾರತ್' ನಾಮಕರಣದ ವಿಚಾರ: ಕೇಂದ್ರದ ವಿರುದ್ಧ ಕಿಡಿ ಕಾರಿದ ಶಶಿ ತರೂರ್

ನವದೆಹಲಿ ಸೆಪ್ಟೆಂಬರ್ 7: ಇಂಡಿಯಾ-ಭಾರತ್ ನಾಮಕರಣದ ವಿವಾದದ ಬಗ್ಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದರು. ವಿರೋಧ ಪಕ್ಷವು ತನ್ನನ್ನು "ಉತ್ತಮ, ಸಾಮರಸ್ಯ ಮತ್ತು ನಾಳೆಯ ಜವಾಬ್ದಾರಿಯುತ ಪ್ರಗತಿಗಾಗಿ (ಭಾರತ್)" ಎಂದು ಕರೆದುಕೊಳ್ಳಬಹುದು. ಆದರೆ ಇದು ಬಹುಶಃ ಆಡಳಿತ ಪಕ್ಷದ "ಹೆಸರು ಬದಲಾಯಿಸುವ ದಡ್ಡ ಆಟ" ಎಂದು ಕರೆದಿದ್ದಾರೆ.

ಅಧ್ಯಕ್ಷ ದ್ರೌಪದಿ ಮುರ್ಮು ಅವರು ಕಳುಹಿಸಿದ G20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬರೆಯುವ ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಮುದ್ರಿಸಿದ್ದು ರಾಜಕೀಯ ಸದ್ದು ಗದ್ದಲಕ್ಕೆ ಕಾರಣವಾಗಿದೆ.

Bharat naming issue: Shashi Tharoor gave a tong to BJP

ಹೀಗಾಗಿ ಮೋದಿ ಸರ್ಕಾರದ ವಿರುದ್ಧ ಆರೋಪ ಪ್ರತ್ಯಾರೋಪಗಳು ಕೇಳಿಬಂದಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಹಲವು ರಾಜ್ಯಗಳ ವಿಪಕ್ಷಗಳು ಒಂದಾಗಿ 'I.N.D.I.A' ಎಂಬ ಮೈತ್ರಿಕೂಟವನ್ನು ರಚನೆ ಮಾಡಿವೆ. ಹೀಗಾಗಿ 'ಇಂಡಿಯಾ' ಎಂಬ ಪದ ಬಳಕೆಯಿಂದ ಬದಲಾಯಿಸಲು ಕೇಂದ್ರ ಸರ್ಕಾರ ಹೊರಟಿದೆ. ಸೆಪ್ಟೆಂಬರ್ 18 ರಿಂದ ಸೆಪ್ಟೆಂಬರ್ 22 ರವರೆಗೆ ನಿಗದಿಪಡಿಸಲಾದ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ 'ಇಂಡಿಯಾ' ಹೆಸರನ್ನು ಬದಲಾಯಿಸುವ ಸಾಧ್ಯತೆಗಳು ಇದೆ ಎನ್ನಲಾಗುತ್ತಿದೆ.

ಆದರೆ ಅದಕ್ಕೂ ಮುನ್ನ ಕೇಂದ್ರ ಸರ್ಕಾರ G20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ 'ಪ್ರೆಸಿಡೆಂಟ್ ಆಫ್ ಇಂಡಿಯಾ' ಬರೆಯುವ ಬದಲಿಗೆ 'ಪ್ರೆಸಿಡೆಂಟ್ ಆಫ್ ಭಾರತ್' ಎಂದು ಮುದ್ರಿಸಿದೆ. ಇದು ಪರಸ್ಪರ ವಾಗ್ವಾದವನ್ನುಂಟು ಮಾಡಿದೆ. ರಾಜಕೀಯ ದ್ವೇಷದಿಂದ ದೇಶದ ಹೆಸರನ್ನೇ ಬದಲಾಯಿಸಲು ಸಿದ್ಧತೆಗಳು ಆಗುತ್ತಿವೆ ಎಂದು ಆರೋಪಿಸಲಾಗಿದೆ. ಇದು ವಿಪಕ್ಷಗಳ ಕೆಂಗಣ್ಣಿಗೂ ಗುರಿಯಾಗಿದೆ.

ಭಾರತವನ್ನು ಕೈಬಿಡಲು ಮತ್ತು ಕೇವಲ ಭಾರತವನ್ನು ದೇಶದ ಹೆಸರಾಗಿ ಇರಿಸಲು ಯೋಜಿಸುತ್ತಿದೆ ಎಂದು ವಿಪಕ್ಷಗಳು ದೂರಿವೆ.

ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತರೂರ್ ಅವರು, "ನಾವು ಖಂಡಿತವಾಗಿಯೂ ನಮ್ಮನ್ನು ನಾವು ಉತ್ತಮ, ಸಾಮರಸ್ಯ ಮತ್ತು ನಾಳೆಯ ಜವಾಬ್ದಾರಿಯುತ ಪ್ರಗತಿಗಾಗಿ (ಭಾರತ್) ಕರೆದುಕೊಳ್ಳಬಹುದು. ಆಡಳಿತ ಪಕ್ಷ ದೇಶದ ಹೆಸರನ್ನು ಬದಲಾಯಿಸುವ ದುರಾಸೆಯ ಆಟ ಇದು" ಎಂದಿದ್ದಾರೆ.

ಮಂಗಳವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು X ನಲ್ಲಿ, "ಮೋದಿ ಅವರು ಇತಿಹಾಸವನ್ನು ತಿರುಚಲು ಮತ್ತು ಭಾರತವನ್ನು ವಿಭಜಿಸಲು ಮುಂದುವರಿಯಬಹುದು. ಭಾರತ ರಾಜ್ಯಗಳ ಒಕ್ಕೂಟವಾಗಿದೆ. ಇದನ್ನು ಒಡೆಯುವ ಪ್ರಯತ್ನ ಬೇಡ. ವಿಪಕ್ಷಗಳ ಮೈತ್ರಕೂಟದ ಪ್ರಕಾರ ಸೌಹಾರ್ದತೆ, ಸಮನ್ವಯತೆ ಮತ್ತು ವಿಶ್ವಾಸವನ್ನು ತರುವುದು ಭಾರತ' ಎಂದಿದ್ದಾರೆ.

ಭಾರತವನ್ನು 'ಭಾರತ್' ಎಂದು ಕರೆಯಲು ಯಾವುದೇ ಸಾಂವಿಧಾನಿಕ ಆಕ್ಷೇಪಣೆಯಿಲ್ಲದಿದ್ದರೂ, ಭಾರತದ ಹೆಸರನ್ನು ಬದಲಾಯಿಸುವಷ್ಟು ಮೂರ್ಖತನ ತೋರುವುದಿಲ್ಲ ಎಂದು ನಾನು ಆಶಿಸುತ್ಥೇನೆ ಎಂದು ತರೂರ್ ಮಂಗಳವಾರ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+