ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಜೋಡೋ ಯಾತ್ರೆ: ಮಕ್ಕಳೊಂದಿಗೆ ರಾಹುಲ್ ಸ್ಫೂರ್ತಿಯ ಓಟ, ನೃತ್ಯ

|
Google Oneindia Kannada News

ಹೈದರಾಬಾದ್, ಅ. 30: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ತೆಲಂಗಾಣದಲ್ಲಿ ಐದನೇ ದಿನಕ್ಕೆ ಕಾಲಿಟ್ಟಿದೆ. ಬೆಳಗ್ಗೆಯೇ ಆರಂಭವಾದ ಪಾದಯಾತ್ರೆಯು ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದೆ.

ಪಾದಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಶಾಲಾ ಮಕ್ಕಳೊಂದಿಗೆ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಚಿಕ್ಕ ಮಕ್ಕಳ ರೇಸ್ ಓಡೋಣವೇ? ಎಂಬ ಸವಾಲನ್ನು ಸ್ವೀಕರಿಸಿ ಅವರ ಜೊತೆಗೆ ಓಡಿದ್ದಾರೆ. ಜೊತೆಗೆ ತಮ್ಮೊಂದಿಗೆ ಇದ್ದ ಎಲ್ಲರನ್ನೂ ಓಟದಲ್ಲಿ ಭಾಗವಹಿಸುವಂತೆ ತಿಳಿಸಿದ್ದಾರೆ.

ಬಿಜೆಪಿ ಮತ್ತು ಟಿಆರ್‌ಎಸ್ ಒಂದೇ ನಾಣ್ಯದ ಎರಡು ಮುಖಗಳು: ರಾಹುಲ್ ಗಾಂಧಿಬಿಜೆಪಿ ಮತ್ತು ಟಿಆರ್‌ಎಸ್ ಒಂದೇ ನಾಣ್ಯದ ಎರಡು ಮುಖಗಳು: ರಾಹುಲ್ ಗಾಂಧಿ

ಕಾಂಗ್ರೆಸ್‌ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ರಾಹುಲ್ ಗಾಂಧಿ ಅವರ ಎನರ್ಜಿ ಬಗ್ಗೆ ಪದೇ ಪದೇ ಉದ್ಗಾರದ ಮಾತುಗಳು ಕೇಳಿ ಬರುತ್ತಿವೆ.

ಸುಮಾರು ಒಂದು ನಿಮಿಷದ ವಿಡಿಯೋದಲ್ಲಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೆಲವು ಚಿಕ್ಕ ಮಕ್ಕಳೊಂದಿಗೆ ಮಾತನಾಡುವುದನ್ನು ಕಾಣಬಹುದು. ಬಳಿಕ ಗುಂಪಿನ ಮಧ್ಯದಿಂದ ಒಬ್ಬರು "ರೇಸ್ ಲಗಾವೋಗೇ?" ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ರಾಹುಲ್ ಓಟದಿಂದಲೇ ಉತ್ತರಿಸುತ್ತಾರೆ.

ತೆಲಂಗಾಣದಲ್ಲಿ ಐದನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ

ತೆಲಂಗಾಣದಲ್ಲಿ ಐದನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ

ರಾಹುಲ್ ಗಾಂಧಿ ಜೊತೆಗೆ ಭದ್ರತಾ ಸಿಬ್ಬಂದಿ, ತೆಲಂಗಾಣ ಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಮತ್ತು ಇತರರು ಕೂಡ ಓಟದಲ್ಲಿ ಪಾಲ್ಗೊಂಡಿದ್ದಾರೆ. ಓಟದಲ್ಲಿ ರಾಹುಲ್ ಗಾಂಧಿ ಎಲ್ಲರನ್ನು ಬಿಟ್ಟು ಓಡುತ್ತಿರುವುದನ್ನು ಕಾಣಬಹುದು. ಬಳಿಕ ರಾಹುಲ್ ಗಾಂಧಿಯನ್ನು ಮಕ್ಕಳು ಹಿಡಿಯುತ್ತಾರೆ.

ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ಕೂಡ ಗುಂಪಿನಲ್ಲಿದ್ದಾರೆ. ಭಾನುವಾರ ಬೆಳಗ್ಗೆ ತೆಲಂಗಾಣದ ಗೊಲ್ಲಪಲ್ಲಿಯಿಂದ ಭಾರತ್ ಜೋಡೋ ಯಾತ್ರೆ ಪುನರ್‌ಆರಂಭವಾಗಿದೆ. ಭಾನುವಾರ ಯಾತ್ರೆಯು 22 ಕಿಮೀ ದೂರವನ್ನು ಕ್ರಮಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ಬುಡಕಟ್ಟು ಮಹಿಳೆಯರ ಜೊತೆಗೆ ರಾಹುಲ್ ಹೆಜ್ಜೆ

ಸ್ವಲ್ಪ ಸಮಯದ ನಂತರ ರಾಹುಲ್ ಗಾಂಧಿ ಮತ್ತು ಜೈರಾಮ್ ರಮೇಶ್ ಮಹಿಳೆಯರ ನೃತ್ಯಕ್ಕೆ ಸೇರಿಕೊಂಡಿದ್ದಾರೆ. ಕೋಲಾಟವಾಡುವ ಕೋಲುಗಳ ಜೊತೆಗೆ ಗುಂಪಿನಲ್ಲಿ ವೃತ್ತದ ಮಾದರಿಯಲ್ಲಿ ನಡೆಯುವ ನೃತ್ಯಕ್ಕೆ ಹೆಜ್ಜೆಹಾಕಿದ್ದಾರೆ.

ಬತುಕಮ್ಮ ನೃತ್ಯಕ್ಕೆ ಮಹಿಳೆಯರ ಜೊತೆಗೆ ಸೇರಿಕೊಂಡ ಕಾಂಗ್ರೆಸ್ ನಾಯಕರು ಅವರನ್ನು ಅನುಸರಿಸಿದ್ದಾರೆ. ನಿನ್ನೆಯಷ್ಟೇ ರಾಹುಲ್ ಗಾಂಧಿ ರಾಜ್ಯದಲ್ಲಿ ಬುಡಕಟ್ಟು ನೃತ್ಯ ಪ್ರದರ್ಶನಕ್ಕೆ ಹೆಜ್ಜೆ ಹಾಕಿದ್ದರು.

ನೃತ್ಯದ ವಿಡಿಯೋ ಹಂಚಿಕೊಂಡಿರುವ ಕಾಂಗ್ರೆಸ್, "ಇದೇ ಸಂಸ್ಕೃತಿ...ಇದು ಭಾರತ!. ಪ್ರಕೃತಿ ಮತ್ತು ಮನುಷ್ಯನ ಪ್ರೀತಿಗೆ ಸಮರ್ಪಿಸಲಾಗಿದೆ. ಬತುಕಮ್ಮ ನೃತ್ಯದ ಬಣ್ಣಗಳಲ್ಲಿ ಯಾತ್ರೆ ರಂಗೇರಿತು" ಎಂದಿದೆ.

ತೆಲಂಗಾಣದಲ್ಲಿ ಯಾತ್ರೆ ಯಶಸ್ಸಿಗೆ 10 ವಿಶೇಷ ಸಮಿತಿ

ತೆಲಂಗಾಣದಲ್ಲಿ ಯಾತ್ರೆ ಯಶಸ್ಸಿಗೆ 10 ವಿಶೇಷ ಸಮಿತಿ

ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿದೆ. ಕಳೆದ ವಾರ ಯಾತ್ರೆಯ ತೆಲಂಗಾಣದಲ್ಲಿ ಆರಂಭವಾಗಿದೆ. ಇದಕ್ಕೂ ಮುನ್ನ ಹಂತವನ್ನು ರಾಹುಲ್ ಗಾಂಧಿಯವರು ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಪಾದಯಾತ್ರೆ ಮುಗಿಸಿದೆ.

ತೆಲಂಗಾಣದಲ್ಲಿ ಯಾತ್ರೆಯನ್ನು ಯಶಸ್ವಿಯಾಗಿಸಲು ತೆಲಂಗಾಣ ರಾಜ್ಯ ಕಾಂಗ್ರೆಸ್ 10 ವಿಶೇಷ ಸಮಿತಿಗಳನ್ನು ರಚಿಸಿದೆ.

ಯಾತ್ರೆ ಶೀಘ್ರದಲ್ಲೇ ಮಹಾರಾಷ್ಟ್ರವನ್ನು ಪ್ರವೇಶಿಸಲಿದ್ದು, ಅದನ್ನು ಮಾಜಿ ಕೇಂದ್ರ ಸಚಿವ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಸ್ವಾಗತಿಸಲಿದ್ದಾರೆ.

ನ. 7 ಕ್ಕೆ ಮಹಾರಾಷ್ಟ್ರವನ್ನು ಪ್ರವೇಶಿಸುವ ಭಾರತ್ ಜೋಡೋ

ನ. 7 ಕ್ಕೆ ಮಹಾರಾಷ್ಟ್ರವನ್ನು ಪ್ರವೇಶಿಸುವ ಭಾರತ್ ಜೋಡೋ

ಶನಿವಾರ ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆ 20 ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸಿದೆ. 19 ವಿಧಾನಸಭೆ ಮತ್ತು 7 ಸಂಸದೀಯ ಕ್ಷೇತ್ರಗಳನ್ನು ಒಳಗೊಂಡಿರುವ ರಾಜ್ಯದಲ್ಲಿ ಒಟ್ಟು 375 ಕಿಮೀ ದೂರವನ್ನು ಯಾತ್ರೆ ಕ್ರಮಿಸಲಿದೆ.

ಭಾರತ್ ಜೋಡೋ ಯಾತ್ರೆಯು ನವೆಂಬರ್ 7 ರಂದು ಮಹಾರಾಷ್ಟ್ರವನ್ನು ಪ್ರವೇಶಿಸಲಿದೆ. ನವೆಂಬರ್ 4 ರಂದು ಒಂದು ದಿನದ ವಿರಾಮವನ್ನು ತೆಗೆದುಕೊಳ್ಳುತ್ತದೆ.

ರಾಹುಲ್ ಗಾಂಧಿ ದಕ್ಷಿಣ ರಾಜ್ಯದಲ್ಲಿ ಪಕ್ಷದ ಪ್ರಚಾರದ ಸಂದರ್ಭದಲ್ಲಿ ಬುದ್ಧಿಜೀವಿಗಳು, ಕ್ರೀಡೆ, ವ್ಯಾಪಾರ ಮತ್ತು ಮನರಂಜನಾ ಕ್ಷೇತ್ರಗಳ ವ್ಯಕ್ತಿಗಳು ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿಯಾಗಲಿದ್ದಾರೆ.

2024 ರ ರಾಷ್ಟ್ರೀಯ ಚುನಾವಣೆಗಳು ಮತ್ತು ಹಲವಾರು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟು ಜನಸಾಮಾನ್ಯರೊಂದಿಗೆ ತನ್ನ ಬಾಂಧವ್ಯವನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.

English summary
Bharat Jodo Yatra: Rahul Gandhi's running with young boys in Telangana and group dance with women. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X