ತೆಲಂಗಾಣದಲ್ಲಿ ಭಾರತ್‌ ಜೋಡೋ ಯಾತ್ರೆ ಆರಂಭ

ಹೈದರಾಬಾದ್‌, ಅಕ್ಟೋಬರ್‌ 27: ನಾಲ್ಕು ದಿನಗಳ ವಿರಾಮದ ನಂತರ ತೆಲಂಗಾಣದಲ್ಲಿ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಭಾರತ್ ಜೋಡೋ ಯಾತ್ರೆ ಆರಂಭವಾಗಿದೆ.

ತೆಲಂಗಾಣ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ್ ರೆಡ್ಡಿ, ಸಂಸದ ಉತ್ತಮ್ ಕುಮಾರ್ ರೆಡ್ಡಿ, ಸಿಎಲ್‌ಪಿ ನಾಯಕ ಭಟ್ಟಿ ವಿಕ್ರಮಾರ್ಕ ಮತ್ತು ಪಕ್ಷದ ಹಲವಾರು ಮುಖಂಡರು ರಾಹುಲ್‌ ಗಾಂಧಿಯವರೊಂದಿಗೆ ಯಾತ್ರೆ ಬೆಳಗ್ಗೆ 6.30ಕ್ಕೆ ಮಕ್ತಲ್‌ನಿಂದ ಯಾತ್ರೆ ಪ್ರಾರಂಭಿಸಿದರು. ನಾಲ್ಕು ದಿನಗಳ ಅಂತರದ ನಂತರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಗುರುವಾರ ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮಕ್ತಲ್‌ನಿಂದ ಪುನರಾರಂಭಗೊಂಡಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಇದು ಎರಡನೇ ದಿನದ ಯಾತ್ರೆ. ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 23ರಂದು ಬೆಳಿಗ್ಗೆ ರಾಯಚೂರಿನಿಂದ ಕರ್ನಾಟಕದಿಂದ ನಿರ್ಗಮಿಸಿದ ನಂತರ ಗುಡೆಬೆಳ್ಳೂರು ಮೂಲಕ ರಾಜ್ಯವನ್ನು ಪ್ರವೇಶಿಸಿತ್ತು. ಚಿಕ್ಕದೊಂದು ಮೆರವಣಿಗೆಯ ನಂತರ ಇದು ಅಕ್ಟೋಬರ್ 26 ರವರೆಗೆ ವಿರಾಮ ತೆಗೆದುಕೊಂಡಿತ್ತು. ಮಕ್ತಾಲ್‌ನಿಂದ 16 ದಿನಗಳ ಕಾಲ ತೆಲಂಗಾಣ ರಾಜ್ಯದಲ್ಲಿ ಯಾತ್ರೆ ಮುಂದುವರೆಯಲಿದ್ದು, 19 ವಿಧಾನಸಭಾ ಮತ್ತು 7 ಸಂಸದೀಯ ಕ್ಷೇತ್ರಗಳಲ್ಲಿ 375 ಕಿ.ಮೀ ದೂರದಲ್ಲಿ ಸಂಚರಿಸಲಿದ್ದು, ನವೆಂಬರ್ 7ರಂದು ಮಹಾರಾಷ್ಟ್ರ ಪ್ರವೇಶಿಸಲಿದೆ.

Bharat Jodo Yatra begins in Telangana

ಈ ಯಾತ್ರೆಯು ನವೆಂಬರ್ 4 ರಂದು ಒಂದು ದಿನದ ವಿರಾಮವನ್ನು ತೆಗೆದುಕೊಳ್ಳುತ್ತದೆ. ವಯನಾಡ್ ಸಂಸದ ರಾಹುಲ್‌ ಗಾಂಧಿ ಹಲವು ಬುದ್ಧಿಜೀವಿಗಳು, ವಿವಿಧ ಸಮುದಾಯಗಳ ಮುಖಂಡರು, ಕ್ರೀಡೆ, ವ್ಯಾಪಾರ ಮತ್ತು ಮನರಂಜನಾ ಕ್ಷೇತ್ರಗಳ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದಾರೆ. ಅವರು ತೆಲಂಗಾಣದಾದ್ಯಂತ ಪ್ರಾರ್ಥನಾ ಮಂದಿರಗಳು, ಮಸೀದಿಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ ಮತ್ತು ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

ಈ ಮಧ್ಯೆ ತೆಲಂಗಾಣದ ರಾಜ್ಯ ಸಚಿವರು ಮತ್ತು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಾಯಕರು ಬುಧವಾರ ರಾತ್ರಿ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿ, ಟಿಆರ್‌ಎಸ್ ಶಾಸಕರನ್ನು ಖರೀದಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ವಿಜಯವಾಡ ಹೆದ್ದಾರಿಯ ಹೈದರಾಬಾದ್ ಬಳಿಯ ಚೌಟುಪ್ಪಲ್‌ನಲ್ಲಿ ಟಿಆರ್‌ಎಸ್ ಮುಖಂಡರು ಧರಣಿ ನಡೆಸಿದರು. ಪ್ರತಿಭಟನೆಯಲ್ಲಿ ಸಚಿವರಾದ ಗಂಗೂಲ ಕಮಲಾಕರ್ ಮತ್ತು ಇಂದ್ರಕರನ್ ರೆಡ್ಡಿ ಭಾಗವಹಿಸಿದ್ದರು.

Bharat Jodo Yatra begins in Telangana

ಪ್ರತಿಭಟನಾಕಾರರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಸರಿ ಪಕ್ಷವು ತನ್ನ ಶಾಸಕರನ್ನು ಹಣ ಮತ್ತು ಹುದ್ದೆಯ ಆಫರ್‌ಗಳ ಮೂಲಕ ಆಮಿಷವೊಡ್ಡುವ ಮೂಲಕ ಟಿಆರ್‌ಎಸ್ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+