Tour Package: ಕಾಶ್ಮೀರ, ವೈಷ್ಣೋದೇವಿ ಸೇರಿ ಪ್ರಮುಖ ತಾಣಗಳಿಗೆ 13 ದಿನ ಭಾರತ್ ಗೌರವ್ ರೈಲು ಪ್ರವಾಸ, ಬುಕ್ಕಿಂಗ್ ವಿವರ

ನವದೆಹಲಿ: ಬೇಸಿಗೆ ಶುರುವಾಗಿದ್ದು, ಸಾಲು ಸಾಲು ರಜೆಗಳು ಎದುರಾಗಲಿವೆ. ಈ ಸಂಬಂಧ ಭಾರತೀಯ ರೈಲ್ವೆಯು ಶೇಕಡಾ 33ರಷ್ಟು ಸಬ್ಸಿಡಿಯಡಿ ಟೂರ್ ಪ್ಯಾಕೇಜ್ ಘೋಷಿಸಿದೆ. ಇದನ್ನು ಮ್ಯಾಜಿಕಲ್ ರೈಲು ಸವಾರಿ ಅಂತಲೂ ಬಣ್ಣಿಸಲಾಗಿದೆ. ಸೌತ್ ಸ್ಟಾರ್ ರೈಲ್ ದೇಶದ ಮೊದಲ ಖಾಸಗಿ ಭಾರತ್ ಗೌರವ್ ಪ್ರವಾಸಿ ರೈಲು ಸೇವೆಯಡಿ ಒಟ್ಟು ಸುಮಾರು 13 ದಿನಗಳ ಪ್ರವಾಸ ಪರಿಚಯಿಸಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಪ್ರವಾಸಿ ಸೇವಾ ಪೂರೈಕೆದಾರ ಮತ್ತು ಪ್ರಶಸ್ತಿ ವಿಜೇತ ಭಾರತ್ ಗೌರವ್ ರೈಲಿನಲ್ಲಿ ಪ್ರವಾಸಿಗರು ಭರ್ಜರಿ ಪ್ರವಾಸ ಮಾಡಲು ಅವಕಾಶ ಕಲ್ಪಿಸಿದೆ. ಊಟ, ವಸತಿ ಒಳಗೊಂಡ ಒಂದೊಳ್ಳೆ ಪ್ರವಾಸ ಪ್ಯಾಕೇಜ್ ಇದಾಗಿದೆ. ಪ್ರವಾಸೋದ್ಯಮ ಸಚಿವಾಲಯದ ಸಹಕಾರದಲ್ಲಿ 'ಕಾಶ್ಮೀರ ಕಣಿವೆ ಮತ್ತು ವೈಷ್ಣೋ ದೇವಿ ದರ್ಶನ' ಮಾಡಿಸಲಾಗುತ್ತದೆ. ಈ ವಿಶೇಷ ರೈಲ್ವೆ ಟೂರ್ ಪ್ಯಾಕೇಜ್ ಅಡಿ ನೀವು 13 ದಿನಗಳ ದೆಹಲಿ ಸೇರಿದಂತೆ ಕಾಶ್ಮೀರ ಕಣಿವೆ ರಾಜ್ಯದ ಸುಂದರ ಪ್ರದೇಶಗಳನ್ನು ಕಣ್ತುಂಬಿಕೊಳ್ಳಬಹುದು. ಏಪ್ರಿಲ್ 11 ರಂದು ರೈಲು ಸಂಚಾರ ಆರಂಭವಾಗಲಿದ್ದು, ಈಗಾಗಲೇ ಪ್ರಯಾಣಿಕರಿಂದ ಟೂರ್ ಪ್ಯಾಕೇಜ್ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ.

Bharat Gaurav Rail Tour Package

ಟೂರ್ ಪ್ಯಾಕೇಜ್ ಬುಕ್ಕಿಂಗ್ ಹೇಗೆ?

ಭಾರತ್ ಗೌರವ್ ರೈಲು ಸಾಮಾನ್ಯ ರೈಲುಗಳಿಗಿಂತ ಭಿನ್ನವಾಗಿದೆ. ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿದೆ. ಪ್ಯಾಕೇಜ್ ಬುಕ್ ಮಾಡಲು ಆಸಕ್ತರು IRCTC ವೆಬ್‌ಸೈಟ್‌ನಲ್ಲಿ ಬುಕಿಂಗ್‌ಗೆ ಲಭ್ಯವಿಲ್ಲ ಎಂಬುದನ್ನು ಗಮನಿಸಬೇಕು. ಟೂರ್ ಟೈಮ್ಸ್ (www.tourtimes.in) ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು. ಇಲ್ಲವೇ 93550 21516 ಸಂಖ್ಯೆಗೆ ಸಂಪರ್ಕಿಸುವ ಮುಖೇನ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಟೂರ್ ಪ್ಯಾಕೇಜ್ ದರ ಮತ್ತು ಬೋರ್ಡಿಂಗ್ ಪಾಯಿಂಟ್

ಕರ್ನಾಟಕದ ಬೆಂಗಳೂರಿನಿಂದ ಆಗಮಿಸುವರಿಗೂ ರೈಲು ಬೋರ್ಡಿಂಗ್ ವ್ಯವಸ್ಥೆ ಮಾಡಲಾಗಿದೆ. 13 ದಿನಗಳಲ್ಲಿ ಕಾಶ್ಮೀರ ಕಣಿವೆಯ ಪ್ರಯಾಣವು ಆಗ್ರಾ - ಶ್ರೀನಗರ - ಸೋನ್‌ಮಾರ್ಗ್ - ಗುಲ್ಮಾರ್ಗ್ - ಅಮೃತಸರ - ದೆಹಲಿಯ ಪ್ರಮುಖ ಆಕರ್ಷಣೆ ಸ್ಥಳಗಳು, ಮಥುರಾ - ಹರಿದ್ವಾರ - ಋಷಿಕೇಶ - ವೈಷ್ಣೋದೇವಿ ಯಾತ್ರಾ ಸ್ಥಳಗಳನ್ನು ವೀಕ್ಷಿಸಬಹುದು.

ಟೂರ್ ಪ್ಯಾಕೇಜ್ ಬುಕ್ ಮಾಡುವ ಪ್ರತಿಯೊಬ್ಬರಿಗೆ ಸ್ಲೀಪರ್ ಕ್ಲಾಸ್‌ಗೆ 42,400 ರೂಪಾಯಿ, ಥರ್ಡ್ ಎಸಿ ವರ್ಗಕ್ಕೆ ತಲಾ 54,000 ರೂಪಾಯಿ, ಸೆಕೆಂಡ್ ಎಸಿ ಸೀಟು ಬುಕ್ಕಿಂಗ್‌ಗೆ 61,000 ರೂಪಾಯಿ ಮತ್ತು ಫಸ್ಟ್ ಎಸಿ ಸೀಟುಗೆ 68,200 ರೂಪಾಯಿಯಿಂದ ಆರಂಭಿಕ ದರ ನಿಗದಿ ಮಾಡಲಾಗಿದೆ.

Bharat Gaurav Rail Tour Package

ರಜಾ ವಿಶೇಷ ರೈಲು ವೈಷ್ಣೋದೇವಿ ಯಾತ್ರಾ ಸ್ಥಳ, ಆಗ್ರಾ, ಮಥುರಾ, ಹರಿದ್ವಾರ, ಋಷಿಕೇಶ, ಕುರುಕ್ಷೇತ್ರ, ವೈಷ್ಣೋದೇವಿ, ಅಮೃತಸರ, ದೆಹಲಿಯನ್ನು 13 ದಿನಗಳಲ್ಲಿ ಕವರ್ ಮಾಡಲಿದೆ. ಈ ಟೂರ್ ಪ್ಯಾಕೇಜ್‌ ಬುಕ್ ಮಾಡಲು ಒಬ್ಬರಿಗೆ ಸ್ಲೀಪರ್ ಕ್ಲಾಸ್‌ಗೆ ಪ್ಯಾಕೇಜ್ 36,800 ರೂಪಾಯಿ, ಮೂರನೇ ಎಸಿಗೆ 48,700 ರೂಪಾಯಿ, ಎರಡನೇ ಎಸಿಗೆ 54,300 ರೂಪಾಯಿ ಮತ್ತು ಮೊದಲ ಎಸಿಗೆ 65,700 ರೂ. ಆರಂಭಿಕ ಬೆಲೆ ನಿಗದಿ ಮಾಡಲಾಗಿದೆ.

ಕರ್ನಾಟಕ ಮಾತ್ರವಲ್ಲದೇ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜನರಿಗೂ ವಿಶೇಷ ರೈಲು ಸೇವೆ ಲಭ್ಯವಿದೆ. ಜೋಲಾರ್‌ಪೇಟೆ, ಬಂಗಾರಪೇಟೆ, ವೈಟ್‌ಫೀಲ್ಡ್, ಯಲಹಂಕ, ಪೆನುಕೊಂಡ, ಧರ್ಮವರಂ, ಅನಂತಪುರದಲ್ಲಿ ನಿಲುಗಡೆ ನೀಡುತ್ತದೆ. ಅಲ್ಲಿ ಆಯಾ ರಾಜ್ಯಗಳ ಪ್ರವಾಸಿಗರು ಹತ್ತಬಹುದು.

ವ್ಯವಸ್ಥಿತ ಭಾರತ್ ಗೌರವ್ ರೈಲು

ಈ ವಿಶೇಷ ಪ್ರವಾಸಿ ರೈಲು ಅನೇಕ ವ್ಯವಸ್ಥಿತ ಸೌಲಭ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಆನ್‌ಬೋರ್ಡ್‌ ಪ್ರಕಟಣೆ ಪಿಎ ವ್ಯವಸ್ಥೆಗಳು, ಮೀಸಲಾದ ಕೋಚ್ ಭದ್ರತೆ ಮತ್ತು ಪ್ರವಾಸಿ ವ್ಯವಸ್ಥಾಪಕರು, ಪ್ರಯಾಣ ವಿಮೆ, ಹೋಟೆಲ್‌ ವ್ಯವಸ್ಥೆ, ಅನಿಯಮಿತ ಊಟ ಮತ್ತು ಆನ್‌ಬೋರ್ಡ್ ಮತ್ತು ಆಫ್‌ಬೋರ್ಡ್ ಸೇರಿ ಹಲವು ಪ್ರಮುಖಾಂಶಗಳು ಒಳಗೊಂಡಿವೆ.

ಲಗೇಜ್ ಚಿಂತೆ ಬಿಡಿ: ಇನ್ನೂ ಪ್ರವಾಸಿಗರು ಟೂರ್ ಮಾಡುವಾಗ ರಾತ್ರಿ ರಾತ್ರಿ ವಾಸ್ತವ್ಯ ಹೇಗೆ, ಲಗೇಜ್ ಕ್ಯಾರಿ ಮಾಡುವ ತಾಪತ್ರಯಗಳು ಎದುರಾಗುತ್ತವೆ. ಆದರೆ ಈ ಟೂರ್‌ ಪ್ಯಾಕೇಜ್ ನಿಮಗೆ ಅಂತಹ ತೊಂದರೆ ತಪ್ಪಲಿದೆ. ತೊಂದರೆ ಮುಕ್ತ ಪ್ರಯಾಣ ಇದಾಗಿದೆ. ಪ್ರವಾಸಿಗರಿಗೆ ಎಲ್‌ಟಿಸಿ, ಎಲ್‌ಎಫಸಿ ಸೌಲಭ್ಯ ಸಹ ಪಡೆಯಲು ಅವಕಾಶ ನೀಡಲಾಗಿದೆ. ಒಟ್ಟು 24,980 ಯಾತ್ರಿಕರು ಮತ್ತು ಪ್ರವಾಸಿಗರಿಗೆ ಪ್ರವಾಸಿಗರಿಗೆ ಸೇವೆ ನೀಡುವ ಉದ್ದೇಶ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+