ಭಾರತ್ ಬಂದ್ ಗಲಾಟೆಯಲ್ಲಿ ಪ್ರಾಣ ಕಳೆದುಕೊಂಡ ಮಗು
Recommended Video

ಪಾಟ್ನಾ, ಸೆಪ್ಟೆಂಬರ್ 10: ಭಾರತ್ ಬಂದ್ ಪ್ರತಿಭಟನೆಯ ನಡುವಲ್ಲಿ ಸಿಲುಕಿಕೊಂಡ ಅಂಬುಲೆನ್ಸ್ ವೊಂದು ಆಸ್ಪತ್ರೆಗೆ ತೆರಳಲು ವಿಳಂಬವಾದ ಕಾರಣ, ಅದರಲ್ಲಿದ್ದ ಎರಡು ವರ್ಷ ವಯಸ್ಸಿನ ಮಗು ಅಸುನೀಗಿದ ಘಟನೆ ಬಿಹಾರದ ಜೆಹಾನಾಬಾದ್ ನಲ್ಲಿ ನಡೆದಿದೆ.
ತೈಲ ಬೆಲೆ ಏರಿಕೆ ಖಂಡಿಸಿ ಮಾತ್ರವಲ್ಲದೆ, ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಪತನ ಕಾಣುತ್ತಿರುವುದು ಮತ್ತು ರಫೆಲ್ ಡೀಲ್ ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚಿಸಲು ಒತ್ತಾಯಿಸಿ ಬಂದ್ ಆಚರಿಸಲಾಗುತ್ತಿದೆ. ಬಂದ್ ಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳೇ ಕರೆ ನೀಡಿರುವುದರಿಂದ ಪುಟ್ಟ ಮಗುವಿನ ಸಾವಿಗೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸೇ ಹೊಣೆ ಎಂದು ಬಿಜೆಪಿ ದೂರಿದೆ.
'ಆದರೆ ಮಗುವನ್ನು ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ತಡವಾಗಿತ್ತು. ಆದ್ದರಿಂದ ಈ ಅವಘಡ ಸಂಭವಿಸಿದೆ. ನಾವ್ಯಾರೂ ಅಂಬೆಲೆನ್ಸ್ ನ ಹಾದಿಗೆ ಅಡ್ಡಬಂದಿಲ್ಲ' ಎಂದು ಪ್ರತಿಭಟನಕಾರರು ಸಮಜಾಯಿಷಿ ನೀಡಿದ್ದಾರೆ.

'ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಆದರೆ ಅದಕ್ಕಾಗಿ ಒಂದು ಮಗು ಪ್ರಾಣ ಕಳೆದುಕೊಂಡರೆ ಅದಕ್ಕೆ ಹೊಣೆ ಯಾರು? ಇಂಥ ಪ್ರತಿಭಟನೆಗಳು ಬೇಕೆ' ಎಂದು ಬಿಜೆಪಿ ಪ್ರಶ್ನಿಸಿದೆ.












Click it and Unblock the Notifications