ಬೆಂಗಳೂರು ವಿಪಕ್ಷಗಳ ಸಭೆ: ಸಣ್ಣ ವಿಷಯಗಳಿಗೆ ನಿತೀಶ್ ಕುಮಾರ್ ಅಸಮಾಧಾನಗೊಳ್ಳಲು ಸಾಧ್ಯವಿಲ್ಲ- ಜೆಡಿಯು ಸ್ಪಷ್ಟನೆ
ಪಾಟ್ನಾ, ಜುಲೈ. 19: ಬೆಂಗಳೂರಿನಲ್ಲಿ ನಡೆದ ಚರ್ಚೆಗಳ ಬಗ್ಗೆ ಅಸಮಾಧಾನಗೊಂಡಿದ್ದರಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿರೋಧ ಪಕ್ಷದ ನಾಯಕರ ಜಂಟಿ ಪತ್ರಿಕಾಗೋಷ್ಠಿಯನ್ನು ಬಿಟ್ಟು ಪಾಟ್ನಾಕ್ಕೆ ಮರಳಿದ್ದಾರೆ ಎಂಬ ಊಹಾಪೋಹಗಳಿಗೆ ಸಂಯುಕ್ತ ಜನತಾ ದಳ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ಅಧ್ಯಕ್ಷ ರಾಜೀವ್ ರಂಜನ್ ಅಕಾ ಲಲನ್ ಸಿಂಗ್ ಬಿಜೆಪಿಗೆ ಬುಧವಾರ ತಿರುಗೇಟು ನೀಡಿದ್ದಾರೆ.
ನಿತೀಶ್ ಕುಮಾರ್ ಕುರಿತ ವದಂತಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಹರಡುತ್ತಿದೆ ಎಂದು ಲಲನ್ ಸಿಂಗ್ ಆರೋಪಿಸಿದ್ದಾರೆ. "ನರೇಂದ್ರ ಮೋದಿಯವರ ದಿನಗಳು ಎಣಿಸಲ್ಪಟ್ಟಿವೆ ಎಂಬುದು ಸತ್ಯ. ಅವರು ಈಗ ಭಾರತಕ್ಕಾಗಿ ಮತ ಕೇಳಬೇಕು ಮತ್ತು ಕ್ಷೇತ್ರವನ್ನು ಬಿಡಬೇಕು. ಮುಂಬೈನಲ್ಲಿ ಸಂಚಾಲಕರ ಹೆಸರನ್ನೂ ಪ್ರಕಟಿಸಲಾಗುವುದು. ಬೆಂಗಳೂರಿನಲ್ಲಿ ಸಂಚಾಲಕನ ಕುರಿತು ಯಾವುದೇ ಮಾತುಕತೆ ನಡೆದಿಲ್ಲ" ಎಂದು ಲಲನ್ ಸಿಂಗ್ ಹೇಳಿದ್ದಾರೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಸುತ್ತಲಿನ ವದಂತಿಗೆ ಮೊದಲ ಬಾರಿ ಜೆಡಿಯು ಔಪಚಾರಿಕ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದ ಬೃಹತ್ ಸಭೆಯಲ್ಲಿ 26 ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವ ವಿರೋಧ ಪಕ್ಷದ ನಾಯಕರು ಚುನಾವಣಾ ಪೂರ್ವ ಸಮ್ಮಿಶ್ರವನ್ನು ರಚಿಸಿದ್ದಾರೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ಎದುರಿಸಲು ತಮ್ಮ ತಂಡವನ್ನು ಭಾರತ (INDIA) ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ ಎಂದು ಕರೆಯಲಾಗುವುದು ಎಂದು ಘೋಷಿಸಿದ್ದಾರೆ.
ವರದಿಗಳ ಪ್ರಕಾರ, ಭಾರತವು ಗುಂಪಿಗೆ ಉತ್ತಮ ಹೆಸರು ಎಂದು ನಿತೀಶ್ ಕುಮಾರ್ ಅವರಿಗೆ ಮನವರಿಕೆಯಾಗಿಲ್ಲ ಹೀಗಾಗಿ ಸಭೆಯಲ್ಲಿ ಕೆಲವು ಪರ್ಯಾಯಗಳನ್ನು ಸೂಚಿಸಿದ್ದಾರೆ. ಕೊನೆಗೆ ಬಹುಮತದ ಅಭಿಪ್ರಾಯದೊಂದಿಗೆ ಸಮ್ಮತ್ತಿಸಿದ್ದಾರೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸದೆ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಯಾದವ್ ಮತ್ತು ಅವರ ಮಗ ತೇಜಸ್ವಿ ಯಾದವ್ ಅವರೊಂದಿಗೆ ಪಾಟ್ನಾಗೆ ಮರಳಿದ್ದಾರೆ. ಮಂಗಳವಾರ ಸಂಜೆ ಅವರು ಪಾಟ್ನಾ ತಲುಪಿದಾಗ, ಮುಖ್ಯಮಂತ್ರಿ ಮತ್ತು ಅವರ ಉಪಮುಖ್ಯಮಂತ್ರಿ ಕೂಡ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ ಎಂಬ ವದಂತಿಗಳಿವೆ.
ವಿಪಕ್ಷಗಳನ್ನು ಒಂದು ಮಾಡುವಲ್ಲಿ ನಿತೀಶ್ ಕುಮಾರ್ ಅವರ ಪ್ರಮುಖ ಪಾತ್ರ ವಹಿಸಿದ್ದಾರೆ. ವಿರೋಧ ಪಕ್ಷದ ಸಭೆಗಾಗಿ ಬೆಂಗಳೂರಿಗೆ ಪ್ರಯಾಣಿಸಿದ್ದ ಲಲನ್ ಸಿಂಗ್, "ವಿರೋಧಗಳನ್ನು ಒಗ್ಗೂಡಿಸುವ ಕಸರತ್ತನ್ನು ಪ್ರಾರಂಭಿಸಿದ ವ್ಯಕ್ತಿ ಸಣ್ಣ ವಿಷಯಗಳಿಗೆ ಅಸಮಾಧಾನಗೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ ಈ ಹಿಂದೆ ನಿತೀಶ್ ಕುಮಾರ್ ಅವರು ಪತ್ರಿಕಾಗೋಷ್ಠಿಗೆ ಗೈರುಹಾಜರಾಗಿರುವ ಬಗ್ಗೆ ಹೆಚ್ಚು ಒತ್ತು ಕೊಡುವ ಅಗತ್ಯವಿಲ್ಲ ಎಂದು ಒತ್ತಿಹೇಳಿದ್ದರು.

"ಎಲ್ಲರೂ ಅವರವರ ಅನುಕೂಲಕ್ಕೆ ತಕ್ಕಂತೆ ಹೋಗಿ ಬಿಡುತ್ತಾರೆ. ಪಾಟ್ನಾದಲ್ಲಿ ನಡೆದ ಮೊದಲ ವಿಪಕ್ಷ ಸಭೆಯ ನಂತರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಪತ್ರಿಕಾಗೋಷ್ಠಿಗೆ ಮುಂಚಿತವಾಗಿ ಹೊರಟುಹೋದರು. ಇದು ಒಗ್ಗೂಡಿಸುವ ಸಭೆಯಾಗಿದ್ದು, ಸಣ್ಣ ಭಿನ್ನಾಭಿಪ್ರಾಯಗಳು ಪರವಾಗಿಲ್ಲ. ಎಲ್ಲಾ ಪಕ್ಷಗಳನ್ನು ಒಗ್ಗೂಡಿಸುವ ಸಂಪೂರ್ಣ ಕಸರತ್ತು ನಿತೀಶ್ ಕುಮಾರ್ ಅವರ ಮೆದುಳಿನ ಕೂಸು" ಎಂದು ಹೇಳಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಕುಮಾರ್ ಮೋದಿ, ವಿರೋಧ ಪಕ್ಷಗಳ ಜಂಟಿ ಸಮಾವೇಶದಲ್ಲಿ ಇಬ್ಬರು ಬಿಹಾರ ನಾಯಕರು ಗೈರುಹಾಜರಾಗಿದ್ದು, ಬೆಂಗಳೂರು ಸಭೆಯು ಮತ್ತೊಮ್ಮೆ ಫೋಟೋ ಶೂಟ್ ಆಗಿರುವುದನ್ನು ಸೂಚಿಸುತ್ತದೆ ಎಂದು ಆರೋಪಿಸಿದ್ದಾರೆ.
" ಸಭೆಯಲ್ಲಿ ನಿತೀಶ್ ಜೀ ಅವರಿಗೆ ಏನೂ ಸಿಗಲಿಲ್ಲ. ಒಮ್ಮೆ ಅವರ ಪಕ್ಷವು ಅವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿತ್ತು. ನಂತರ ಅವರು ಕನಿಷ್ಠ ಸಂಚಾಲಕರಾಗುತ್ತಾರೆ ಎಂಬ ಭರವಸೆ ಇತ್ತು. ಆದರೆ ಕಾಂಗ್ರೆಸ್ ಸಂಪೂರ್ಣವಾಗಿ ತನ್ನ ಕೈಯಲ್ಲಿ ಹಿಡಿತ ಸಾಧಿಸುವುದನ್ನು ಅವರು ಕಂಡುಕೊಂಡಿದ್ದಾರೆ. ಪಾಟ್ನಾದಲ್ಲಿ ನಡೆದ ಮೊದಲ ಸಭೆಯ ವೇಳೆ, ಜಂಟಿ ಪತ್ರಿಕಾಗೋಷ್ಠಿಗೂ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೊರಟು ಹೋಗಿದ್ದು, ಈಗ ನಿತೀಶ್ ಮತ್ತು ಲಾಲು" ಎಂದು ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಪ್ರೇಮ್ ಚಂದ್ರ ಮಿಶ್ರಾ ಚೌಧರಿ ಅವರ ಆರೋಪವನ್ನು ತಳ್ಳಿಹಾಕಿದ್ದಾರೆ. ಇದು ತನ್ನ ವಿರೋಧಿಗಳನ್ನು ದೂಷಿಸಲು ಮತ್ತು ವಿಪಕ್ಷಗಳಲ್ಲಿ ಬಿರುಕುಗಳನ್ನು ಸೃಷ್ಟಿಸಲು ಬಿಜೆಪಿಯ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.











Click it and Unblock the Notifications