Viral: ಉಚಿತ ಲಿಫ್ಟ್ ಕೊಟ್ಟ ಮುಂಬೈ ಆಟೋ ಚಾಲಕ: ವೈರಲ್ ಆಯ್ತು ಬೆಂಗಳೂರು ಮ್ಯಾನೇಜರ್ ಅನುಭವ
ಬೆಂಗಳೂರುದಿಂದ ಮುಂಬೈಗೆ ಸ್ಥಳಾಂತರವಾದ ನಂತರ ಎದುರಾದ ಅಚ್ಚರಿಯ ಸಂಗತಿಗೆಯ ಬಗ್ಗೆ ಟ್ಯಾಲೆಂಟ್ ಅಕ್ವಿಜಿಷನ್ ಮ್ಯಾನೇಜರ್ ಮಯಾಂಕ್ ಕುಮಾರ್ ಅವರು ಹಂಚಿಕೊಂಡಿರುವ ಲಿಂಕ್ಡ್ಇನ್ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ನಗರ ಬದಲಾವಣೆ ಎಂದರೆ ಟ್ರಾಫಿಕ್, ಹವಾಮಾನ, ಮನೆ ಬಾಡಿಗೆ ಅಥವಾ ದಿನನಿತ್ಯದ ಪ್ರಯಾಣವೇ ದೊಡ್ಡ ಬದಲಾವಣೆ ಎಂದು ಭಾವಿಸಲಾಗುತ್ತದೆ. ಆದರೆ ಮಯಾಂಕ್ ಕುಮಾರ್ಗೆ ಅಚ್ಚರಿ ತಂದದ್ದು ಆಟೋ ರಿಕ್ಷಾ ಚಾಲಕರ ನಡೆ, ನುಡಿಗಳೇ ಇವರಿಗೆ ಹೊಸ ಅನುಭವ ತಂದಿದೆ.
ಬೆಂಗಳೂರು vs ಮುಂಬೈ ಆಟೋ ಅನುಭವ
ಕುಮಾರ್ ಅವರ ಪ್ರಕಾರ, ಮುಂಬೈನಲ್ಲಿ ಆಟೋ ಪಡೆಯುವುದು ಸಂಪೂರ್ಣ ವಿಭಿನ್ನ ಅನುಭವವಾಗಿದ್ದು, ಇದು ಬೆಂಗಳೂರಿನ ಅನುಭವಕ್ಕಿಂತ ಬಹಳ ವಿಭಿನ್ನವಾಗಿದೆ. "ಬೆಂಗಳೂರುದಲ್ಲಿ ಆಟೋ ಬುಕ್ ಮಾಡುವುದು ಕೆಲವೊಮ್ಮೆ ಫೈನಲ್ ಇಂಟರ್ವ್ಯೂವ್ ಪಾಸ್ ಮಾಡುವಂತಾಗುತ್ತಿತ್ತು. ಆದರೆ ಮುಂಬೈನಲ್ಲಿ ಪರಿಸ್ಥಿತಿ ಸಂಪೂರ್ಣ ಬೇರೆ," ಎಂದು ಅವರು ಹೇಳಿದ್ದಾರೆ. ಇದಕ್ಕೆ ಹೋಲಿಕೆ ಮಾಡಿದರೆ ಮುಂಬೈ ಸಂಪೂರ್ಣ ವಿಭಿನ್ನ ಅನುಭವ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಮುಂಬೈನಲ್ಲಿ ಅಚ್ಚರಿ ತಂದ ಆಟೋ ಚಾಲಕ
ಮಯಾಂಕ್ ಅವರು ತಮ್ಮ ಅನುಭವವನ್ನು ವಿವರಿಸುತ್ತಾ, ಮುಂಬೈನಲ್ಲಿ ಹೋಟೆಲ್ನಿಂದ ಮುಖ್ಯ ರಸ್ತೆಗೆ ಹೋಗಲು ಸ್ವಲ್ಪ ಕಷ್ಟಕರವಾದ ದಾರಿ ಇತ್ತು. ಆ ಸಮಯದಲ್ಲಿ ಒಂದು ಆಟೋ ಚಾಲಕನನ್ನು ಲಿಫ್ಟ್ ಕೆಳಿದ್ದಾರೆ, ಆದರೆ ಚಾಲಕ ಮೊದಲು ಲಿಫ್ಟ್ ಕೊಡಲು ನಿರಾಕರಿಸಿದರೂ, ನಂತರ ಆ ಚಾಲಕ "ನಾನು ನಿಮ್ಮನ್ನು ಮುಖ್ಯ ರಸ್ತೆಗೆ ಬಿಡುತ್ತೇನೆ, ಅಲ್ಲಿಂದ ಮತ್ತೊಂದು ಆಟೋ ಸಿಗುತ್ತದೆ" ಎಂದು ಉಚಿತವಾಗಿ ಕರೆದುಕೊಂಡು ಹೋಗಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಂದು ಆಟೋ ಸಿಗುವಂತೆ ಸಹಾಯ ಕೂಡ ಮಾಡಿದ್ದಾನೆ ಎಂದು ಹೇಳಿದ್ದಾರೆ.
Video: ಆಟೋದಲ್ಲೇ ಜ್ಯುವೆಲ್ಲರಿ ಶಾಪ್! ಬೆಂಗಳೂರು ಚಾಲಕನ ಐಡಿಯಾಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ
'ನೋ ನೆಗೋಶಿಯೇಷನ್' ಅನುಭವ
ಮುಂದಿನ ಆಟೋ ಪ್ರಯಾಣದಲ್ಲಿ ಮೀಟರ್ ಆನ್ ಆಗಿದ್ದು, ಯಾವುದೇ ಚರ್ಚೆ ಅಥವಾ ವಾದವಿಲ್ಲದೆ ಪ್ರಯಾಣ ಪೂರ್ಣಗೊಂಡಿದೆ ಎಂದು ಮಯಾಂಕ್ ಕುಮಾರ್ ಹೇಳಿದ್ದಾರೆ. ಕೂತುಹಲ ಏನೆಂದರೆ ಆ ಪ್ರಯಾಣದ ದರ ಓಲಾ/ಉಬರ್ ಅಂದಾಜಿಗಿಂತಲೂ ಕಡಿಮೆ ಮೊತ್ತ ಆಗಿತ್ತು ಎಂದು ಅವರು ತಿಳಿಸಿದ್ದಾರೆ.

ಕೆಲಸದ ಜೀವನಕ್ಕೆ ಸಂಬಂಧಿಸಿದ ಪಾಠ
ಈ ತರಹದ ಅನುಭವದಿಂದ ಅವರು ಪ್ರತಿಯೊಂದು ನಗರಕ್ಕೂ ತನ್ನದೇ ಆದ ವಿಶೇಷತೆಗಳಿರುತ್ತವೆ ಎಂದು ಹೇಳಿದ್ದು, ಬೆಂಗಳೂರು ಉತ್ತಮ ಹವಾಮಾನಕ್ಕೆ ಪ್ರಸಿದ್ಧವಾದರೆ, ಮುಂಬೈನಲ್ಲಿ ಜನರ ಸಹಾಯದ ಮನೋಭಾವ ಹೆಚ್ಚು ಕಾಣುತ್ತದೆ ಮತ್ತು ತಮ್ಮ ವೃತ್ತಿ ಜೀವನಕ್ಕೆ ಇದು ಒಂದು ಪಾಠವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Viral Video: "ನಿಮ್ಮ ಜೀವನ ನಮ್ಮಿಂದಲೇ": ಕನ್ನಡಿಗ ಆಟೋ ಚಾಲಕನೊಂದಿಗೆ ನಾರ್ಥಿ ಮಹಿಳೆ ಕಿರಿಕ್
ಉದ್ಯೋಗಾಕಾಂಕ್ಷಿಗಳ ಮೇಲೆ ಪ್ರಭಾವ
"ಯಾವುದೇ ಒಂದು ಕಂಪನಿಯ ರಿಕ್ರೂಟರ್, ಹೈರಿಂಗ್ ಮ್ಯಾನೇಜರ್ ಮತ್ತು ಕೋಆರ್ಡಿನೇಟರ್ಗಳ ನಡುವಳಿಕೆ ಹಾಗೂ ಮಾತುಗಳು ಅಭ್ಯರ್ಥಿಗಳ ಮೇಲೆ ತುಂಬಾ ಪ್ರಭಾವ ಬೀರುತ್ತವೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ:
ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ಬೆಂಗಳೂರಿನ ಆಟೋ ಪ್ರಯಾಣದ ಕಹಿ ಅನುಭವಗಳು ಮತ್ತು ಮುಂಬೈ ಜನರ ಸದಾ ನೆರವಾಗುವ ಗುಣಗಳ ನಡುವಿನ ವ್ಯತ್ಯಾಸವನ್ನು ನೆಟ್ಟಿಗರು ತಮ್ಮದೇ ಆದ ವೈಯಕ್ತಿಕ ಉದಾಹರಣೆಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ.












Click it and Unblock the Notifications