ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ Online Liquor ಆರ್ಡರ್ ಕೊಟ್ಟವರಿಗೆ ಮಕ್ಮಲ್ ಟೋಪಿ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 18: ಟೋಪಿ ಹಾಕಿಸಿಕೊಳ್ಳೋರು ಇರೋವರೆಗೂ, ಟೋಪಿ ಹಾಕೋರು ಇದ್ದೇ ಇರುತ್ತಾರೆ. ಮದ್ಯಪ್ರಿಯರನ್ನೇ ಟಾರ್ಗೆಟ್ ಮಾಡಿಕೊಂಡ ಖದೀಮರು ಎಣ್ಣೆ ಖರೀದಿ ಮಾಡುವವರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರತಿಷ್ಠಿತ ಕಂಪನಿಯ ಹೆಸರಿನಲ್ಲಿ ಇಂಥದೊಂದು ಹಗರಣವು ರಾಜಾರೋಷವಾಗಿ ನಡೆಯುತ್ತಿದೆ. ಕಂಪನಿ ಹೆಸರನ್ನೇ ನೆಚ್ಚಿಕೊಂಡು ಮದ್ಯಕ್ಕಾಗಿ ನೀವೇನಾದರೂ ಆನ್ ಲೈನ್ ಆರ್ಡರ್ ಕೊಟ್ಟರೆ ಮುಗೀತು ಕಥೆ. ನಿಮ್ಮ ಖಾತೆಯಿಂದ ಕಾಸು ಹೋಗುತ್ತೆ, ಆದರೆ ಮನೆ ಬಾಗಿಲಿಗೆ ಮಧ್ಯ ಸಿಗೋದೇ ಇಲ್ಲ.

ಮದ್ಯಪ್ರಿಯರೇ: ಗೋವಾದಲ್ಲೂ ಇನ್ಮುಂದೆ ಬಿಯರ್ ರೇಟ್ ಮೊದಲಿನಂತಿಲ್ಲ!ಮದ್ಯಪ್ರಿಯರೇ: ಗೋವಾದಲ್ಲೂ ಇನ್ಮುಂದೆ ಬಿಯರ್ ರೇಟ್ ಮೊದಲಿನಂತಿಲ್ಲ!

ಏಷ್ಯಾದ ಪ್ರತಿಷ್ಠಿತ 'ಟಾನಿಕ್' ಕಂಪನಿಯ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಮತ್ತು ಮೊಬೈಲ್ ಸಂಖ್ಯೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೇ ಕಂಪನಿಗೆ ಸಂಬಂಧಿಸಿದೆ ಎಂದು ಹೇಳಿಕೊಳ್ಳುತ್ತಾ ಮದ್ಯಪ್ರಿಯರಿಗೆ ಮಕ್ಮಲ್ ಟೋಪಿ ಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಘಟನೆಯನ್ನು ಬೆನ್ನಟ್ಟಿದ ಸಂದರ್ಭದಲ್ಲಿ ಅಸಲಿ ಕಹಾನಿ ಹೊರ ಬಿದ್ದಿದೆ. ಮನೆ ಬಾಗಿಲಿಗೆ ಮದ್ಯವನ್ನು ಆರ್ಡರ್ ಮಾಡುವ ಮೊದಲು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು?, ಸ್ವಲ್ಪ ಎಚ್ಚರಿಕೆ ತಪ್ಪಿದರೂ ನೀವು ಕಾಸು ಕಳೆದುಕೊಳ್ಳುವುದರಲ್ಲಿ ಎರಡು ಮಾತಿಲ್ಲ. ಹೋಮ್ ಡೆಲಿವೆರಿ ನೀಡುತ್ತೇವೆ ಎನ್ನುವ ವೆಬ್ ಸೈಟ್ ಬಗ್ಗೆ ಜಾಗೃತರಾಗಿರಬೇಕು? ಇಲ್ಲದಿದ್ದರೆ ಏನಾಗುತ್ತೆ ಎಂಬುದನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.

ಇಬ್ಬರು ಮಹಿಳಾ ಗ್ರಾಹಕರಿಗೆ 15000 ಮಕ್ಮಲ್ ಟೋಪಿ

ಇಬ್ಬರು ಮಹಿಳಾ ಗ್ರಾಹಕರಿಗೆ 15000 ಮಕ್ಮಲ್ ಟೋಪಿ

ಏಷ್ಯಾದ ಅತಿದೊಡ್ಡ ಮದ್ಯಪಾನದ ಅಂಗಡಿ( ಟಾನಿಕ್ ಲಿಕ್ಕರ್ ಶಾಪ್) ಹೆಸರಿನಲ್ಲಿ ಬೆಂಗಳೂರಿನ ಇಬ್ಬರು ಮಹಿಳೆಯರಿಗೆ ವಂಚಿಸಲಾಗಿದೆ. ಗೂಗಲ್ ಅಂಗಳದಲ್ಲಿ ಲಿಕ್ಕರ್ ಬುಕ್ ಮಾಡುವುದಕ್ಕೆ ಸಂಖ್ಯೆಯನ್ನು ಹುಡುಕುತ್ತಿದ್ದ ಮಹಿಳೆಗೆ ಅದೊಂದು ಮೊಬೈಲ್ ನಂಬರ್ ಸಿಕ್ಕಿದೆ. ಆ ಸಂಖ್ಯೆಗೆ ಕರೆ ಮಾಡಿದ ಮಹಿಳೆ ಬಳಿ ತಾವು ಮನೆ ಬಾಗಿಲಿಗೆ ಮದ್ಯವನ್ನು ತಲುಪಿಸುವುದಾಗಿ ವ್ಯಕ್ತಿ ಹೇಳಿದ್ದಾನೆ. ನಂತರ ಕ್ಯೂಆರ್ ಕೋಡ್ ಅನ್ನು ಕಳುಹಿಸಿದ್ದು, ಅದನ್ನು ಸ್ಕ್ಯಾನ್ ಮಾಡುತ್ತಿದ್ದಂತೆ ಮಹಿಳೆಯ ಖಾತೆಯಿಂದ 15,000 ರೂಪಾಯಿ ಕಟ್ ಆಗಿದೆ.

ಇದಾಗಿ ಸ್ವಲ್ಪ ಹೊತ್ತಿಗೆ ಆ ಸಂಖ್ಯೆಯು ಟಾನಿಕ್ ಅಂಗಡಿಗೆ ಸೇರಿದ್ದಲ್ಲ ಎಂಬುದು ಮಹಿಳೆಯ ಅರಿವಿಗೆ ಬಂದಿದೆ. ಇದೊಂದು ಘಟನೆಯನ್ನು ಬೆನ್ನತ್ತಿ ಹೊರಟ ಸಂದರ್ಭದಲ್ಲಿ ಇಂಥದ್ದೇ ಅನೇಕ ನಕಲಿ ವೆಬ್ ಸೈಟ್ ಮತ್ತು ಮೊಬೈಲ್ ಸಂಖ್ಯೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಬೆಳಕಿಗೆ ಬಂದಿದೆ.

ಟಾನಿಕ್ ಶಾಪ್ ಹೆಸರಿನಲ್ಲಿ 50 ಮಂದಿಗೆ ವಂಚನೆ

ಟಾನಿಕ್ ಶಾಪ್ ಹೆಸರಿನಲ್ಲಿ 50 ಮಂದಿಗೆ ವಂಚನೆ

ಕಳೆದ 2020ರಿಂದ ಈವರೆಗೂ ಬೆಂಗಳೂರು ಮತ್ತು ಹೈದ್ರಾಬಾದ್ ಮೂಲದ 50 ಮಂದಿಗೆ ಟಾನಿಕ್ ಕಂಪನಿ ಹೆಸರಿನಲ್ಲಿ ವಂಚನೆ ಮಾಡಿರುವುದು ಗೊತ್ತಾಗಿದೆ. ಕೋವಿಡ್ ಪ್ರಾರಂಭವಾದ ದಿನದಿಂದ ಇದುವರೆಗೂ ಗ್ರಾಹಕರು ಸಾವಿರಾರು ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ ಗ್ರಾಹಕರು ಬರೋಬ್ಬರ 4.5 ಲಕ್ಷ ರೂಪಾಯಿ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಹೈದ್ರಾಬಾದ್ ನಲ್ಲಿ ಎಂಟು ಜನರಿಗೆ ವಂಚನೆ

ಹೈದ್ರಾಬಾದ್ ನಲ್ಲಿ ಎಂಟು ಜನರಿಗೆ ವಂಚನೆ

ಹೈದ್ರಾಬಾದ್ ಟಾನಿಕ್ ಸ್ಟೋರ್ ಮ್ಯಾನೇಜ್ ಮೆಂಟ್ ಪ್ರಕಾರ, ಸರಿಸುಮಾರು ಎಂಟು ಮಂದಿ ವಂಚನೆಗೆ ಒಳಗಾಗಿರುವ ಬಗ್ಗೆ ಕಂಪನಿಯ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಪೊಲೀಸರು ಮತ್ತು ಸೈಬರ್ ಕ್ರೈಂ ಡಿಪಾರ್ಟ್ ಮೆಂಟ್( ಸೈಬರ್ ಅಪರಾಧ ಇಲಾಖೆ)ಗೆ ದೂರು ಸಲ್ಲಿಸಲಾಗಿದೆ ಎಂದು ಟಾನಿಕ್ ಕಂಪನಿಯು ಹೇಳಿದೆ. ತಮ್ಮ ದೂರಿನಲ್ಲಿ, ಟಾನಿಕ್ "ಈ ವಂಚಕರು ಆರ್ಡರ್ ನೀಡುವ ಮೊದಲು ನಮ್ಮ ಗ್ರಾಹಕರಿಂದ ಹಣವನ್ನು ಸಂಗ್ರಹಿಸುತ್ತಾರೆ, ಆದರೆ ಎಂದಿಗೂ ಮದ್ಯವನ್ನು ತಲುಪಿಸುವುದಿಲ್ಲ" ಎಂದು ಹೇಳಿದರು.

ಟಾನಿಕ್‌ನ ಜನರಲ್ ಮ್ಯಾನೇಜರ್ (ಕಾರ್ಯಾಚರಣೆ) ಜಿಎಲ್‌ಎನ್ ದಾಸ್, ಅವರು ಒಂದು ಸಂಖ್ಯೆಗೆ ಕರೆ ಮಾಡಲು ಪ್ರಯತ್ನಿಸಿದಾಗ, ಸಾಲಿನ ಇನ್ನೊಂದು ತುದಿಯಲ್ಲಿರುವ ವಂಚಕನು ತನ್ನನ್ನು ಟಾನಿಕ್‌ನ ಭಾಗವೆಂದು ಪರಿಚಯಿಸಿಕೊಂಡನು. ಹಣ ಪಡೆದ ನಂತರ ದಾಸ್‌ಗೆ ಮದ್ಯವನ್ನು ತಲುಪಿಸಲು ಮುಂದಾದನು.

ಕಂಪನಿ ಹೆಸರಿನಲ್ಲಿ ವಂಚಕರ ಮೊಬೈಲ್ ಸಂಖ್ಯೆ

ಕಂಪನಿ ಹೆಸರಿನಲ್ಲಿ ವಂಚಕರ ಮೊಬೈಲ್ ಸಂಖ್ಯೆ

ಸಾಮಾನ್ಯವಾಗಿ, ಸ್ಕ್ಯಾಮ್‌ಸ್ಟರ್‌ಗಳು ಗೂಗಲ್‌ನಲ್ಲಿ ಕಂಪನಿಯ ನಿರ್ದೇಶಾಂಕಗಳನ್ನು ಮಾರ್ಪಡಿಸುತ್ತಾರೆ. ನಂತರ ಈ ಮೋಸದ ಸಂಖ್ಯೆಗಳು ಮತ್ತು ವೆಬ್‌ಸೈಟ್‌ಗಳನ್ನು ಹುಡುಕಾಟ ಫಲಿತಾಂಶಗಳ ಮೇಲ್ಭಾಗದಲ್ಲಿ ಪಟ್ಟಿ ಮಾಡಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಹುಡುಕಾಟದ ಎಂಜಿನ್ ಆಪ್ಟಿಮೈಸೇಶನ್ (SEO) ವಿಧಾನಗಳನ್ನು ಬಳಸುತ್ತಾರೆ. ಟಾನಿಕ್‌ಗಾಗಿ ಮೋಸದಿಂದ ಪಟ್ಟಿ ಮಾಡಲಾದ ಸಂಖ್ಯೆಗಳು ಮತ್ತು ವೆಬ್‌ಸೈಟ್‌ಗಳು ಪ್ರತಿ ವಾರ ಅಥವಾ ಅದಕ್ಕಿಂತ ವೇಗವಾಗಿ ಬದಲಾಗುತ್ತವೆ.

"ಪ್ರತಿ ಎರಡು ವಾರಗಳಿಗೊಮ್ಮೆ ಸಂಖ್ಯೆಗಳು ಬದಲಾಗುತ್ತವೆ. ನಾವು ಗೂಗಲ್‌ಗೆ ಪತ್ರ ಬರೆದು ಪೊಲೀಸರನ್ನು ಸಂಪರ್ಕಿಸಿದ್ದೇವೆ. ಒಂದು ಸಂಖ್ಯೆಯನ್ನು ತೆಗೆದಂತೆ ಇನ್ನೊಂದು ಪಾಪ್ ಅಪ್ ಆಗುತ್ತದೆ," ಎಂದು ದಾಸ್ ಹೇಳಿದರು.

ಎಣ್ಣೆ ಅಂಗಡಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌

ಎಣ್ಣೆ ಅಂಗಡಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌

ಟಾನಿಕ್ ಎಂಬ ಮದ್ಯದ ಅಂಗಡಿ ಹೆಸರಿನಲ್ಲಿ 18 ನಕಲಿ ವೆಬ್‌ಸೈಟ್‌ಗಳನ್ನು ತೆರೆಯಲಾಗಿದೆ. ಈ ವೆಬ್‌ಸೈಟ್‌ಗಳ ಬಗ್ಗೆ ಗ್ರಾಹಕರು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂಥ ಪ್ರಮುಖ ವೆಬ್ ಸೈಟ್ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.

* ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಡಾಟ್ ಪಿಕರ್ ಆನ್ ಲೈನ್ ಹಾಟ್ ಕಾಮ್

* ಟಾನಿಕ್ ವೈನ್ಸ್ ಜುಬಿಲಿ ಹಿಲ್ಸ್ ಡಾಟ್ ಇನ್

* ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಡಾಟ್ ಫೇಸ್ ಬುಕ್ ಡಾಟ್ ಕಾಮ್ / ಟಾನಿಕ್ ವೈನ್ಸ್ ಹೈದ್ರಾಬಾದ್

* ಕ್ಯೂಬಿವೈ ಟಾನಿಕ್ ಡಾಟ್ ಕಾಮ್

* ಟಾನಿಕ್ ಲಿಕ್ಕರ್ ಸ್ಟೋರ್ ಬಿಸಿನೆಸ್ ಸೈಟ್

* ಫೇಸ್ ಬುಕ್ ಅಂಗಳದಲ್ಲಿ ಬಹುತೇಕ ಸೈಟ್ ಅನ್ನು ಟಾನಿಕ್ ಕಂಪನಿಯ ಹೆಸರಿನಲ್ಲಿ ತೆರೆಯಲಾಗಿದೆ

English summary
Bengaluru, Hyderabad Customers Scammed By Fake Numbers Listed On The Internet For Popular Liquor Brand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X