Expressway: ಬೆಂಗಳೂರು-ಚೆನ್ನೈ ಪ್ರಯಾಣಕ್ಕೆ ಯಾವ ಮಾರ್ಗ ಬೆಸ್ಟ್; ಹೊಸೂರುನಾ, ಎಕ್ಸ್‌ಪ್ರೆಸ್‌ವೇನಾ?
Bengaluru-Chennai Expressway: ರಾಜ್ಯ ರಾಜಧಾನಿ ಬೆಂಗಳೂರಿನಿಂದ ಚೆನ್ನೈ ಮಹಾನಗರಕ್ಕೆ ತೆರಳಲು ಎರಡು ಸುಲಭ, ಆರಾಮದಾಯಕ ಮಾರ್ಗಗಳಿವೆ. ಪ್ರಯಾಣಿಕರಿಗೆ ಆದ ಅನುಭವದ ಪ್ರಕಾರ ಹೊಸೂರು ಮತ್ತು ಕೃಷ್ಣಗಿರಿ ಮಾರ್ಗವಾಗಿ ಸಾಗುವುದು ಸೂಕ್ತವಲ್ಲ. ಬದಲಾಗಿ ಪ್ರಯಾಣಿಕರು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (BCE) ಹಾಗೂ ಚೆನ್ನೈ-ತಿರುಪತಿ ಎಕ್ಸ್‌ಪ್ರೆಸ್‌ವೇ (CTE)ಗಳ ಮೂಲಕ ಆರಾಮಾಗಿ ಸಂಚಾರ ಮಾಡಬಹುದು. ಈ ಮಾರ್ಗಗಳ ನಡುವಿನ ವ್ಯತ್ಯಾಸವೇನು? ಎಂಬ ಮಾಹಿತಿ ಇಲ್ಲಿದೆ.
ಹಲವು ವಾಹನ ಸವಾರರು ಸಾಮಾನ್ಯವಾಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಹೊಸೂರು, ಕೃಷ್ಣಗಿರಿ ಮಾರ್ಗವಾಗಿ ಚೆನ್ನೈಗೆ ತೆರಳುತ್ತಾರೆ. ಆದರೆ ಇತ್ತೀಚೆಗೆ ಬೆಂಗಳೂರು-ಚೆನ್ನೈ ಮತ್ತು ಚೆನ್ನೈ-ತಿರುಪತಿ ಎಕ್ಸ್‌ಪ್ರೆಸ್‌ವೇ ಗಳು ಸುಲಭವಾಗಿ, ಹೆಚ್ಚು ತ್ರಾಸದಾಯಕವಲ್ಲದೇ ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಎಂದು ವಾಹನ ಸವಾರರು ಕಂಡುಕೊಂಡಿದ್ದಾರೆ. ಸಂಚಾರ ದಟ್ಟಣೆ, ರಸ್ತೆ ಸಮಸ್ಯೆಗಳ ಕೃಷ್ಣಗಿರಿ ಮಾರ್ಗಕ್ಕಿಂತಲೂ ಈ ಹೆದ್ದಾರಿಗಳು ಉತ್ತಮ ಪರ್ಯಾಯ ಮಾರ್ಗವಾಗಿವೆ.

3ರಿಂದ 2 ಪಥವಾಗಿ ಕಿರಿದಾಗುವ ಹೆದ್ದಾರಿ
ರಾಷ್ಟ್ರೀಯ ಹೆದ್ದಾರಿ-NH 48 (ಹೊಸೂರು, ಕೃಷ್ಣಗಿರಿ) ಮೂಲಕ ಸಂಚಾರವು ತುಸು ಕಿರಿ ಕಿರಿ ಅನ್ನಿಸಬಹುದು. ಇಲ್ಲಿ ಸದಾ ಲಾರಿಗಳ ನಡುವೆ ಸಂಚರಿಸಬೇಕಾದ ಅನಿವಾರ್ಯ ಇರುತ್ತದೆ. ಕಾಂಚಿಪುರಂ ಮತ್ತು ವಾಲಾಜಾ ಪ್ರದೇಶಗಳಲ್ಲಿ ರಸ್ತೆಗಳು ಇದ್ದಕ್ಕಿದ್ದಂತೆ ಕಿರಿದಾಗುತ್ತವೆ. ಇಲ್ಲಿ ಮೂರರಿಂದ ಎರಡು ಪಥದ ಹೆದ್ದಾರಿಯಾಗಿ ಬದಲಾಗುತ್ತದೆ.
ಟ್ರಾಫಿಕ್ ಕಡಿಮೆ, ಇಂಧನ ಉಳಿತಾಯ
ಹೀಗಾಗಿ ನೀವು ಎಕ್ಸ್‌ಪ್ರೆಸ್‌ವೇಗಳ ಮೂಲಕ ಸಾಗಿದರೆ ಇಂಧನ ದಕ್ಷತೆ ಹೆಚ್ಚಿಲಿದೆ. ಟ್ರಾಫಿಕ್ ಹಾಗೂ ಇನ್ನಿತರ ಅನಗತ್ಯ ಕಿರಿಕಿರಿ ಇರುವುದಿಲ್ಲ. ಸಮಯಕ್ಕೆ ಸರಿಯಾಗಿ ನೀವು ಗಮ್ಯಸ್ಥಾನ ತಲುಪುಬಹುದಾಗಿದೆ. ಎಕ್ಸ್‌ಪ್ರೆಸ್ ವೇಗಳಲ್ಲಿ ಘಾಟಿ ಸಮಸ್ಯೆ ಇರುವುದಿಲ್ಲ. ಕೃಷ್ಣಗಿರಿ ರಸ್ತೆಯಲ್ಲಿ ಲಾರಿ ಕೆಟ್ಟು ನಿಂತರ ಸಂಚಾರ ಸಮಸ್ಯೆ ಎದುರಾಗುತ್ತದೆ.
ಎರಡು ಎಕ್ಸ್‌ಪ್ರೆಸ್ ವೇಗಳ (ಬಿಸಿಇ-ಸಿಟಿಇ) ಮಾರ್ಗದಲ್ಲಿ ಸಂಚರಿಸುವವರಿಗೆ ಬೈರೆಡ್ಡಿಪಲ್ಲಿಯಿಂದ ಮುಂದೆ ಬಂದರೆ ಬರೀ 7 ಕಿಲೋಮೀಟರ್, ಉತ್ತುಕೋಟೆಯಿಂದ ಹೊರಬಂದ ಮೇಲೆ 20 ಕಿಲೋ ಮೀಟರ್ ಮತ್ತು ಪೂನಮಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರುವ ಮುನ್ನ 4 ಕಿಲೋ ಮೀಟರ್ ಮಾತ್ರ ಸಣ್ಣ ರಸ್ತೆಗಳಲ್ಲಿ ಸಂಚರಿಸಬೇಕಾಗುತ್ತದೆ. ಇವೆಲ್ಲ ದಾಟಿದರೆ ನೀವು ಅತಿ ಕಡಿಮೆ ಅವಧಿಯಲ್ಲಿ ಬೆಂಗಳೂರಿನಿಂದ ಚೆನ್ನೈನ 350 ಕಿಲೋ ಮೀಟರ್ ಕ್ರಮಿಸಬಹುದಾಗಿದೆ.
ಕೊಂಚ ಸಮಸ್ಯೆ, ಕಾಮಗಾರಿ ಬಾಕಿ
ಇನ್ನೂ ಉತ್ತುಕೋಟೆಯಿಂದ ತಿರುವಳ್ಳೂರು ಮಧ್ಯೆ 20 ಕಿಲೋ ಮೀಟರ್ ಪ್ರದೇಶದಲ್ಲಿ 5 ಸಣ್ಣ ಸೇತುವೆಗಳ (ಕಲ್ವರ್ಟ್) ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ಇದರ ಹೊರತು ಎಕ್ಸ್‌ಪ್ರೆಸ್‌ದಲ್ಲಿ ಸಂಚರಿಸುವ ನಿಮಗೆ ಯಾವುದೇ ತೊಂದರೆ ಇಲ್ಲ. ಹೊಸೂರು, ಕೃಷ್ಣಗಿರಿ ಮಾರ್ಗ ಬದಲು, ಬೆಂಗಳೂರು-ಚೆನ್ನೈ, ತಿರುಪತಿ-ಚೆನ್ನೈ ಎಕ್ಸ್‌ಪ್ರೆಸ್‌ವೇಗಳನ್ನು ಬಳಸಬಹುದಾಗಿದೆ.


Click it and Unblock the Notifications
