ಪಾಕ್ ಗೆ ಡಿಜಿಎಂಒ ರಣ್ಬೀರ್ ಸಿಂಗ್ ಖಡಕ್ ಎಚ್ಚರಿಕೆ!

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ನವೆಂಬರ್ 24: ಭಾರತೀಯ ಸೇನೆ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಣ್ಬೀರ್ ಸಿಂಗ್ ಪಾಕಿಸ್ತಾನದ ಡಿಜಿಎಂಒಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂಥ ಅನೈತಿಕ ಕೃತ್ಯಗಳನ್ನು ನಿಲ್ಲಿಸಿ. ಭಾರತದೊಳಕ್ಕೆ ನುಸುಳುಕೋರರು ಬರದಂತೆ ತಡೆಯಿರಿ ಎಂದು ಅವರು ಹೇಳಿದ್ದಾರೆ.

ಭಾರತೀಯ ಸೈನಿಕರನ್ನು ಪಾಕಿಸ್ತಾನ ತುಂಬ ಕ್ರೂರವಾಗಿ ಕೊಂದಿತ್ತು. ಅದಕ್ಕೆ ಸರಿಯಾದ ಪ್ರತ್ಯುತ್ತರವನ್ನೇ ನೀಡಲಾಯಿತು. ಆ ನಂತರ ಪಾಕ್ ಮಾತುಕತೆಗೆ ಮುಂದಾಗಿದೆ. ರಣ್ಬೀರ್ ಸಿಂಗ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ ಮಾಡುವುದಕ್ಕೆ ಪ್ರಯತ್ನಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸ್ತೀವಿ ಎಂದಿದ್ದಾರೆ.[ಪಾಕ್ ಕ್ರೌರ್ಯಕ್ಕೆ ಸಾಕ್ಷಿಯಾದ ಮಚಿಲ್ ನಲ್ಲಿ ಪಹರೆ ಸುಲಭವಲ್ಲ!]

DGMO

ಯಾವುದೇ ಅನೈತಿಕ ಕೃತ್ಯ ಹಾಗೂ ಉಗ್ರರ ಒಳ ನುಸುಳುವುದಕ್ಕೆ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಪ್ರಬಲವಾಗಿ ಉತ್ತರ ನೀಡುವಂತೆ ನೀವೇ ಆಹ್ವಾನ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ ಪಾಕಿಸ್ತಾನ ನಾಗರಿಕರು ಮೃತಪಟ್ಟಿರುವುದಕ್ಕೆ ಸಂತಾಪ ವ್ಯಕ್ತಪಡಿಸಿರುವ ಸಿಂಗ್, ನಾವು ಪ್ರತಿ ದಾಳಿ ನಡೆಸಿರುವುದು ದೇಶದೊಳಗೆ ನುಸುಳುವ ಹಾಗೂ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪ್ರದೇಶಗಳಲ್ಲಿ ಮಾತ್ರ ಎಂದು ಹೇಳಿದ್ದಾರೆ.[ಭಾರತೀಯ ಯೋಧನ ರುಂಡ ಕತ್ತರಿಸಿ ಬಿಸಾಕಿದ ಪಾಕ್ ಉಗ್ರರು]

ಗಡಿ ನಿಯಂತ್ರಣ ರೇಖೆ ಬಳಿ ಭಾರತದ ದಾಳಿಯಲ್ಲಿ ಪಾಕಿಸ್ತಾನ ನಾಗರಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ. ಭಾರತದ ದಾಳಿಯಿಂದ ಮೂವರು ಸೈನಿಕರು ಸೇರಿ ಏಳು ಪಾಕಿಸ್ತಾನಿಯರು ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There was some tough talking done by India's Director General of Military Operations who was on the hotline with his Pakistani counterpart. Stop the unethical acts and control infiltration is what India's DGMO Lt Gen. Ranveer Singh told Pakistan on the hotline.
Please Wait while comments are loading...