ಪತ್ನಿ, ಮಕ್ಕಳಿಗೆ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಪಂಜಾಬಿನ ವ್ಯಾಪಾರಿ
ಲುಧಿಯಾನ(ಪಂಜಾಬ್), ಜೂನ್ 8: ತನ್ನ ಪತ್ನಿ ಮತ್ತು ಮಕ್ಕಳಿಗೆ ಗುಂಡಿಕ್ಕಿ, ನಂತರ ತಾನೂ ಗುಂಡು ಹೊಡೆದುಕೊಂದು ವ್ಯಾಪಾರಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬಿನ ಲುಧಿಯಾನದ ಮಾಡೆಲ್ ಟೌನ್ ಪ್ರದೇಶದಲ್ಲಿ ಇಂದು (ಜೂನ್ 8) ನಡೆದಿದೆ.
ಗುಂಡೇಟಿನಿಂದ ಪತ್ನಿ ಮತ್ತು ಮಗ ಸಾವನ್ನಪ್ಪಿದ್ದು, ಮಗಳು ಬದುಕುಳಿದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಪರಿಸ್ಥಿತಿ ಗಂಭೀರವಾಗಿದೆ.[ಪತ್ತೆದಾರಿ ಕಾದಂಬರಿಯನ್ನೂ ಮೀರಿಸುವ ಆ ಮೂರು ಕೊಲೆಗಳು!]

ಈ ಘಟನೆಗೆ ಕಾರಣ ತಿಳಿದುಬಂದಿಲ್ಲ. ಕೊಲೆ ಮತ್ತು ಆತ್ಮಹತ್ಯೆಗೆ ಬಳಸಿದ ಗನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications