ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು ಮತ್ತು ಕಾಶ್ಮೀರದಲ್ಲಿ ದನದ ಮಾಂಸ ಮಾರಾಟ ಬ್ಯಾನ್!

By Mahesh
|
Google Oneindia Kannada News

ಶ್ರೀನಗರ, ಸೆ. 10: ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ದನದ ಮಾಂಸ ಮಾರಾಟಕ್ಕೆ ಅಲ್ಲಿನ ಹೈಕೋರ್ಟ್ ನಿಷೇಧ ಹೇರಿದೆ. ಜಸ್ಟೀಸ್ ಧೀರಜ್ ಸಿಂಗ್ ಠಾಕೂರ್ ಹಾಗೂ ಜಸ್ಟೀಸ್ ಜನಕ್ ರಾಕ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಗೋಹತ್ಯೆ ಹಾಗೂ ಮಾಂಸ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಗೋವುಗಳ ಹತ್ಯೆ ಮಾಡುವುದ್ದು ಅಪರಾಧ ಎಂದು ಪರಿಮೋಕ್ಷ್ ಸೇಠ್ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.

Beef banned in JK by High Court

ಪರಿಮೋಕ್ಷ್ ಅವರ ಅರ್ಜಿಯಲ್ಲಿರುವ ಅಂಶಗಳನ್ನು ಪರಿಗಣಿಸಿದ ನ್ಯಾಯಪೀಠ, ಜಮ್ಮು ಮತ್ತು ಕಾಶ್ಮೀರ ಜಿಲ್ಲೆಯಲ್ಲಿ ಗೋಮಾಂಸ ನಿಷೇಧ ಹೇರುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಆದೇಶಿಸಿದೆ. ಹೈಕೋರ್ಟ್ ನೀಡಿದ ಆದೇಶವನ್ನು ಅನುಷ್ಠಾನಗೊಳಿಸುವುದು ಈಗ ಜಮ್ಮು ಸರ್ಕಾರದ ಹೊಣೆಯಾಗಿದೆ. [ಹರ್ಯಾಣದಲ್ಲಿ ಗೋಹತ್ಯೆ ಮಾಡಿದರೆ 10 ವರ್ಷ ಶಿಕ್ಷೆ]

ಕಾನೂನು ಪಾಲಿಸದೆ ಉಲ್ಲಂಘಿಸಿದರೆ, ಆದೇಶ ಅನುಷ್ಠಾನ ವಿಳಂಬವಾದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಈ ಸುದ್ದಿಯನ್ನು ಕೇಳಿಸಿಕೊಳ್ಳಿ


(ಒನ್ ಇಂಡಿಯಾ ಸುದ್ದಿ)

English summary
The Jammu and Kashmir High Court imposed a ban on sale of beef in the state. A Division Bench comprising Justice Dhiraj Singh Thakur and Justice Janak Rak ordered the ban while hearing a public interest litigation petition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X