ಐಪಿಎಲ್ ಪ್ರಸಾರ ಹಕ್ಕು ಹರಾಜು ಪ್ರಕ್ರಿಯೆ ಮುಂದೂಡಿಕೆ

Posted By:
Subscribe to Oneindia Kannada

ಮುಂಬೈ, ಆಗಸ್ಟ್ 24: ಮುಂದಿನ ತಿಂಗಳ 4ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಾರ ಹಕ್ಕುಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

ಈಗಾಗಲೇ ಆಗಸ್ಟ್ 28ರಿಂದಲೇ ಬಿಡ್ ಗಳನ್ನು ಆಹ್ವಾನಿಸಲಾಗಿದ್ದು, ಸೆಪ್ಟಂಬರ್ 4ರಂದು ಬಹಿರಂಗ ಹರಾಜಿನ ಮೂಲಕ ಪ್ರಸಾರ ಹಕ್ಕುಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿತ್ತು.

BCCI postpones IPL media rights auction to September 4

ಇ-ಹರಾಜಿನ ಮೂಲಕ ಈ ಪ್ರಸಾರ ಹಕ್ಕುಗಳನ್ನು ಮಾಡುವ ಕುರಿತಂತೆ ಸುಪ್ರೀಂ ಕೋರ್ಟ್, ಭಾರತೀಯ ಕ್ರಿಕೆಟ್ ಮಂಡಳಿಗೆ (ಬಿಸಿಸಿಐ) ವಿವರಣೆ ಕೋರಿದ್ದರಿಂದಾಗಿ ಸದ್ಯದ ಮಟ್ಟಿಗೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.

ಸದ್ಯಕ್ಕೆ ಬಂದಿರುವ ಮಾಹಿತಿಯ ಪ್ರಕಾರ, ಗುರುವಾರ (ಆಗಸ್ಟ್ 24) ಸಂಜೆಗೆ ಬಿಡ್ ಮುಕ್ತಾಯವಾಗಿದ್ದಾಗ, ಡಿಸ್ಕವರಿ, ಏರ್ ಟೆಲ್, ಬಿಎಎಂ ಟೆಕ್, ಯುಪ್ ಟಿವಿ, ಡಿಎಝಡ್ ಎನ್ /ಪರ್ಫಾರ್ಮ್ ಗ್ರೂಪ್ ಹಾಗೂ ಯಾಹೂ ಸಂಸ್ಥೆಗಳಿಗೂ ಹರಾಜು ರೇಸ್ ಗೆ ಇಳಿದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Board of Control for Cricket in India (BCCI) has pushed the media rights auction date for the Indian Premier League (IPL) to September 4. Earlier, the date for opening of bids was August 28.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ