ಹಾವಿಗೆ ಸ್ನಾನ ಮಾಡಿಸುವ ಕೆಲಸ ಖಾಲಿ ಇದೆ: ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ..! ಮಿಸ್ ಮಾಡದೇ ಕಮೆಂಟ್ ಓದಿ
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಲಸದ ಆಫರ್ ನೀಡುವವರು ಹೆಚ್ಚಾಗಿದ್ದು, ಕೆಲಸ ಹುಡುಕುವವರೂ ಸಹ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರವಾದ ಜಾಬ್ ಆಫರ್ ನೀಡುವವರನ್ನು ನೀಡು ನೋಡಿರುತ್ತೀರಾ.. ಸದ್ಯ ಇಲ್ಲೊಂದು ವ್ಯಕ್ತಿ ನೀಡಿರುವ ಕೆಲಸದ ಆಫರ್ ಸಖತ್ ವೈರಲ್ ಆಗುತ್ತಿದ್ದು, ಈ ಕೆಲಸಕ್ಕೆ ಅರ್ಜಿ ಹಾಕುವವರೇ ಇಲ್ಲವಂತೆ. ಬದಲಿಗೆ ಜಾಬ್ ಆಫರ್ ಕೊಟ್ಟವರನ್ನೇ ಕಮೆಂಟ್‌ಗಳ ಮೂಲಕ ಲೇವಡಿ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಾಮಾನ್ಯವಾಗಿ ಪ್ರಾಣಿಗಳ ವಿಡಿಯೋಗಳಿಗೆ ಫ್ಯಾನ್ ಹಾಗೂ ಫಾಲೋವರ್ಸ್ ಜಾಸ್ತಿನೇ ಇರುತ್ತಾರೆ. ಹೀಗಾಗಿ ಎಲ್ಲರೂ ತಮ್ಮ ಮನೆಯ ಪೆಟ್‌ಗಳ ಅಥವಾ ಪ್ರಾಣಿಗಳ ಮುದ್ದಾದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೀಗಾಗಿ ವ್ಯಕ್ತಿಯೊಬ್ಬರು ಹಾವಿಗೆ ಸ್ನಾನ ಮಾಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಬಹಳ ದಿನಗಳ ಹಿಂದೆಯೇ ವೈರಲ್ ಆಗಿದ್ದು, ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಈ ವಿಡಿಯೋಗೆ ನೀಡಿರುವ ಕ್ಯಾಪ್ಷನ್ ನೋಡುಗರ ಮುಖದಲ್ಲಿ ನಗು ತರಿಸಿದೆ.

ರವಿ ಕೇಂಪೇಗೌಡ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಿಂದ ಕಾಳಿಂಗ ಸರ್ಪ ಹಾವಿಗೆ ಸ್ನಾನ ಮಾಡಿಸುವ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಾವಿಗೆ ಸ್ನಾನ ಮಾಡಿಸುತ್ತಿದ್ದು, ಹಾವು ಕೂಡ ಅದನ್ನು ಎಂಜಾಯ್ ಮಾಡುತ್ತಿದೆ. ಜೊತೆಗೆ ಆ ವ್ಯಕ್ತಿ ಹಾವಿಗೆ ಮಸಾಜ್ ಕೂಡ ಮಾಡಿದ್ದು, ಹಾವು ಆತನಿಗೆ ಯಾವುದೇ ಹಾನಿ ಮಾಡದೇ ತಾನೂ ಖುಷಿಯಲ್ಲಿ ವಾಟರ್ ಶವರ್ ಹಾಗೂ ಮಸಾಜ್‌ಅನ್ನು ಎಂಜಾಯ್ ಮಾಡುವುದನ್ನು ಕಾಣಬಹುದಾಗಿದೆ.
ಇನ್ನು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ರವಿ ಕೇಂಪೇಗೌಡ, ಹಾವಿಗೆ ಸ್ನಾನ ಮಾಡುವ ಕೆಲಸ ಖಾಲಿ ಇದೆ. ತಿಂಗಳಿಗೆ 30,000 ರೂಪಾಯಿ ಸಾವಿರ ಸಂಬಳ, ಕೆಲಸ ಬೇಕಾದವರು ಸಂಪರ್ಕಿಸಿ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ಬಂದಿರುವ ಕಮೆಂಟ್‌ಗಳನ್ನು ಓದಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.

ನಕ್ಕು ನಗಿಸುವ ಕಮೆಂಟ್‌ಗಳು
ರವಿ ಕೇಂಪೇಗೌಡ ಅವರ ವಿಡಿಯೋಗೆ ನೆಟ್ಟಿಗರು ಹಾಸ್ಯವಾಗಿ ಕಮೆಂಟ್ ಮಾಡಿದ್ದಾರೆ. ನಾನು ಸ್ನಾನ ಮಾಡುವುದೇ ಅಪರೂಪಕ್ಕೆ ಇನ್ನು ಅದಕ್ಕೆ ಬೇರೆ ಮಾಡಿಸಬೇಕಾ..? ನನ್ನ ಕಡೆಯಿಂದ ಆಗಲ್ಲ ಬಿಡು ಗುರು, ಹಲ್ಲಿಲ್ಲದ ಹಾವು ಇದ್ದರೆ ಹೇಳಿ ಸ್ನಾನ ಮಾಡಿಸಿ ಹಿಂಡಿ ಬಿಸಿಲಿಗೆ ಒಣ ಹಾಕಿ ಬರುತ್ತೇವೆ. 30 ಸಾವಿರ ಅಲ್ಲಾ ಗುರು ಆಸ್ತಿ ಪೂರ್ತಿ ಬರೆದು ಕೊಡುತ್ತೇವೆ ಎಂದರೂ ನಾನು ಬರಲ್ಲ, ಬದುಕುವ ದಾರಿ ಹೇಳು ಅಂದ್ರೆ ಸೀದಾ ಮೇಲೆ ಹೋಗುವ ದಾರಿ ಹೇಳುತ್ತಿದ್ದೀಯಾ, ಸ್ವಲ್ಪ ಮಿಸ್ ಆದರೂ ಮನೆಯವರು ನಮಗೆ ಸ್ನಾನ ಮಾಡಿ ಶಿವನ ಪಾದ ಕಳುಹಿಸುತ್ತಾರೆ ಹೀಗೆ ವಿವಿಧ ಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಈ ಕೆಲಸದ ಆಫರ್‌ಗೆ ಒಕೆ ಹೇಳಿದ್ದು, ಎಲ್ಲಿ..? ಯಾವಾಗ ಬರಬೇಕು ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಈ ಕೆಲಸಕ್ಕೆ ಬರುವವರಿಗೆ ಕೆಲವು ಕಂಡಿಷನ್‌ಗಳನ್ನು ಸಹ ಕಮೆಂಟ್‌ನಲ್ಲಿ ತಿಳಿಸಿದ್ದಾರೆ. ಈ ಹಾವಿಗೆ ಸ್ನಾನ ಮಾಡಿಸಲು ಬರುವವರಿಗೆ ಎಲ್‌ಐಸಿ ಕಡ್ಡಾಯವಾಗಿ ಇರಬೇಕು, ಯಮ ಧರ್ಮರಾಯನ ಒಪಿಗ್ಗೆ ತೆಗೆದುಕೊಂಡು ಬರಬೇಕು, ನಿಮ್ಮ ಎಲ್ಲಾ ಕೊನೆಯ ಆಸೆಗಳನ್ನು ತೀರಿಸಿಕೊಂಡು ಬಿಡಬೇಕು ಎಂದು ಬರೆದಿದ್ದಾರೆ.












Click it and Unblock the Notifications