ನಿಷೇಧಿತ ಸಂಘಟನೆಗಳ ಫೇಸುಬುಕ್, ವಾಟ್ಸಾಪ್ ಬಳಕೆ ನಿರ್ಬಂಧ

ಇಸ್ಲಾಮಾಬಾದ್, ಮೇ 30: ಪಾಕಿಸ್ತಾನದಲ್ಲಿ ನಿಷೇಧಕ್ಕೊಳಗಾಗಿರುವ ಸುಮಾರು 64 ಸಂಘಟನೆಗಳ ಸದಸ್ಯರಿಗೆ ಫೇಸ್ ಬುಕ್, ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಲು ನಿರ್ಬಂಧ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಈವರೆಗೆ ಪಾಕಿಸ್ತಾನದಲ್ಲಿ ಸುಮಾರು 64 ಸಂಘಟನೆಗಳು ನಿಷೇಧಕ್ಕೊಳಗಾಗಿದ್ದು, ಅವುಗಳಲ್ಲಿ ಸುಮಾರು 41 ಸಂಘಟನೆಗಳ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು ಪರಸ್ಪರ ವಿಚಾರ ವಿನಿಮಯ ನಡೆಸುತ್ತಿದ್ದರು.

Banned outfits in Pakistan operating openly on Facebook: Report

ಇದನ್ನು ಗಮನಿಸಿರುವ ಪಾಕಿಸ್ತಾನ ಸರ್ಕಾರದ ಗುಪ್ತಚರ ಇಲಾಖೆಯು ಈ ಚಟುವಟಿಕೆಗಳ ಮೇಲೆ ನಿಷೇಧ ಹೇರಿದೆ.

ಇದಲ್ಲದೆ, ನಿಷೇಧಕ್ಕೊಳಗಾದ ಸಂಘಟನೆಗಳ ಸದಸ್ಯರು ಆ ಸಂಘಟನೆಗಳ ಹೆಸರುಗಳಲ್ಲಿನ ಅಕ್ಷರಗಳನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಂಡು ಸರ್ಚ್ ಟೂಲ್ ಮೂಲಕ ಹುಡುಕಾಡಿದರೂ, ಆ ನಿಷೇಧಿತ ಸಂಘಟನೆಗಳ ಸದಸ್ಯರನ್ನು ತಲುಪಲು ಸಾಧ್ಯವಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಈ ಸಂಘಟನೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+