ಅಪ್ಪಾ ಸದ್ಯ, 500 ರು ಹೊಸ ನೋಟುಗಳು ಬ್ಯಾಂಕಲ್ಲಿ ಸಿಗುತ್ತಿವೆ!

Posted By:
Subscribe to Oneindia Kannada

ಭೋಪಾಲ್, ನವೆಂಬರ್ 13 : ಬ್ಯಾಂಕಿನಲ್ಲಿರುವ ತಮ್ಮದೇ ಹಣವನ್ನು ಪಡೆಯಲು ಗಂಟೆಗಟ್ಟಲೆ ಸರದಿಸಾಲಿನಲ್ಲಿ ನಿಲ್ಲುತ್ತ, ಬ್ಯಾಂಕುಬ್ಯಾಂಕಿಗೆ ಅಲೆದಾಡುತ್ತಿರುವ ಜನರಿಗೆ ಸ್ವಲ್ಪ ನಿರಾಳವಾಗುವಂಥ ಸುದ್ದಿ ಭಾನುವಾರ ಬಂದಿದೆ.

ಅದೇನೆಂದರೆ, 500 ರು.ಗಳ ಹೊಸ ನೋಟುಗಳು ದೊರೆಯುತ್ತಿರುವುದು. ಹಳೆಯ 500 ರು ನೋಟುಗಳನ್ನು ದೇಶದ ಕೆಲ ಭಾಗಗಳಲ್ಲಿ ಜನರಿಗೆ ನೀಡಲಾಗುತ್ತಿದೆ. ದೆಹಲಿ, ಮುಂಬೈ ಮತ್ತು ಭೋಪಾಲ್ ನಲ್ಲಿ ಹೊಸ 500 ರು. ನೋಟುಗಳು ಸಿಗುತ್ತಿವೆ.

Banks start issuing new rs 500 notes from Sunday

ಹಳೆಯ 500 ರು ಮತ್ತು 1000 ರು ಮೌಲ್ಯದ ನೋಟುಗಳನ್ನು ನಿಷೇಧಿಸಿದ ನಂತರ ಬ್ಯಾಂಕುಗಳಲ್ಲಿ ಸಿಗುತ್ತಿದ್ದುದು ಕೇವಲ 100 ರುಪಾಯಿ ಮತ್ತು 2000 ರುಪಾಯಿ ಮೌಲ್ಯದ ನೋಟುಗಳು ಮಾತ್ರ.

ಸುಮಾರು 50 ಲಕ್ಷ ರುಪಾಯಿನಷ್ಟು ಹೊಸ 500 ರುಪಾಯಿ ಮೌಲ್ಯದ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾನುವಾರ ಬಿಡುಗಡೆ ಮಾಡಿದೆ. ಹೊಸ 500 ರುಪಾಯಿ ನೋಟುಗಳು ಕೈಗೆ ಸಿಗುತ್ತಿದ್ದಂತೆ ನಿಧಿ ಸಿಕ್ಕಂತೆ ಜನರು ನಲಿದಾಡುತ್ತಿದ್ದಾರೆ.


ಬೆಂಗಳೂರಿಗೆ ಈ 500 ರುಪಾಯಿ ಮೌಲ್ಯದ ನೋಟುಗಳು ಬರುವುದು ಎಂದೋ? ಅಂದ ಹಾಗೆ, ಈ 500 ರುಪಾಯಿ ಹೊಸ ನೋಟುಗಳನ್ನು ಮುದ್ರಿಸಲಾಗುತ್ತಿರುವುದು ಮೈಸೂರಿನಲ್ಲಿ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Banks start issuing new rs 500 notes from Sunday. First new Rs 500 notes were distributed in Bhopal, Delhi and Mumbai. It has come as a big relief to the common people who are struggling to get their money in hand from banks.
Please Wait while comments are loading...