ಮಲ್ಯ ವಿರುದ್ಧ ಮತ್ತೆ ಸುಪ್ರೀಂ ಮೊರೆಹೋದ ಬ್ಯಾಂಕ್‌ಗಳು

Subscribe to Oneindia Kannada

ನವದೆಹಲಿ, ಜುಲೈ, 14: ಘೋಷಿತ ಅಪರಾಧಿಯಾಗಿ ಬದಲಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಇಂಗ್ಲೆಂಡಿನಲ್ಲಿ ಆರಾಮವಾಗಿ ಕುಳಿತುಕೊಂಡಿದ್ದಾರೆ. ಇತ್ತ ಸಾಲ ಕೊಟ್ಟ ಭಾರತದ ಬ್ಯಾಂಕ್ ಗಳು ಮತ್ತೆ ಸುಪ್ರೀಂ ಕೋರ್ಟ್ ಬಾಗಿಲು ಬಡಿದಿವೆ.

ವಿಜಯ್ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಹೇಳಿಯೂ ಆಗಿದೆ. ವಿಜಯ್ ಮಲ್ಯ ಇನ್ನು ತಮ್ಮ ಆಸ್ತಿ ಘೋಷಣೆ ಮಾಡಿಲ್ಲ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿರುವ ಬ್ಯಾಂಕ್ ಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿವೆ.[ಸಾಲ ವಸೂಲಿಗಾಗಿ ವಿಜಯ್ ಮಲ್ಯನ ಸಾವಿರ ಕೋಟಿ ಆಸ್ತಿ ಜಪ್ತಿ]

Banks go back to Supreme Court against Vijay Mallya

ಮುಂದಿನ ವಾರ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಇನ್ನೊಂದೆಡೆ ಘೋಷಿತ ಅಪರಾಧಿ ವಿಜಯ್ ಮಲ್ಯ ಅವರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ತನ್ನ ಕಾನೂನು ಕುಣಿಕೆಯನ್ನು ಮತ್ತಷ್ಟು ಬಿಗಿ ಮಾಡಿದೆ.

9 ಸಾವಿರ ಕೋಟಿ ರುಪಾಯಿ ಸಾಲ ಮಾಡಿ ಇಂಗ್ಲೆಂಡಿಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರಿಂದ ಸಾಲ ಮರುಪಡೆಯುವ ನಿಟ್ಟಿನಲ್ಲಿ 1,141 ಕೋಟಿ ರು. ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿತ್ತು. ವಿಜಯ್ ಮಲ್ಯ ಮತ್ತು ಯುಬಿ ಸಿಟಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು.[ಆರ್ಟ್ ಆಫ್ ಲೀವಿಂಗ್: ಮಲ್ಯರಿಗೂ ಮುಂಚೆ ದೇಶ ತೊರೆದವರು]

ಒಂದೊಂದೆ ಸ್ಥಾನಗಳಿಗೆ ರಾಜೀನಾಮೆ ನೀಡುತ್ತ ಬಂದಿದ್ದ ಮಲ್ಯ ಇಂಗ್ಲೆಂಡಿಗೆ ತೆರಳಿ ತಿಂಗಳುಗಳೆ ಕಳೆದಿವೆ. ಇತ್ತ ಭಾರತದಲ್ಲಿ ಮಲ್ಯ ವಿರುದ್ಧ ಕಾನೂನು ಹೋರಾಟ ಮುಂದುವರಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New Delhi: Banks go back to Supreme Court stating liquor baron Vijay Mallya has still not disclosed his assets. SC agrees to take up the matter next week.
Please Wait while comments are loading...