ಮತ್ತೆ ಮುಷ್ಕರದ ಭೀತಿ ಬಿತ್ತಿದ ಬ್ಯಾಂಕ್ ಒಕ್ಕೂಟಗಳು

Bank strike on Dec19 by United Forum of Bank Unions
ನವದೆಹಲಿ, ನ.22: ದೇಶಾದ್ಯಂತ ಬ್ಯಾಂಕ್ ಒಕ್ಕೂಟಗಳು ಮತ್ತೆ ಮುಷ್ಕರ ಹೂಡುವ ಭೀತಿ ಬಿತ್ತಿದೆ. ಮುಂದಿನ ತಿಂಗಳು 19ರಂದು ಗುರುವಾರ ಒಂದು ದಿನದ ಮಟ್ಟಿಗೆ ದೇಶವ್ಯಾಪಿ ಮುಷ್ಕರಕ್ಕೆ ಇಳಿಯಲು ನಿರ್ಧರಿಸಿವೆ.

ಆದರೆ ಈ ಬಾರಿಯೂ ಮುಷ್ಕರಕ್ಕೆ ಅದೇ ಕಾರಣಗಳನ್ನು ಮುಂದೊಡ್ಡಿವೆ. ಬ್ಯಾಂಕುಗಳ ಸುಧಾರೀಕರಣ ಮುಂದೊಡ್ಡಿ ಬ್ಯಾಂಕ್ ಸಿಬ್ಬಂದಿಗೆ ತೊಂದರೆಯುಂಟುಮಾಡುವ ಹುನ್ನಾರ ನಡೆದಿದೆ. ಅದರಿಂದ ಗ್ರಾಹಕರಿಗೂ ತೊಂದರೆ. ಅಷ್ಟೇ ಅಲ್ಲ, ದೇಶದ ಸಂಪನ್ಮೂಲಕ್ಕೂ ಧಕ್ಕೆಯೊದಗಲಿದೆ ಎಂದು ಬ್ಯಾಂಕ್ ಒಕ್ಕೂಟಗಳು ಅಲವತ್ತುಕೊಂಡಿವೆ. ಖಾಸಗಿ ಮತ್ತು ಸರಕಾರಿ ಬ್ಯಾಂಕುಗಳೆರಡೂ ಇದೇ ಅಭಿಪ್ರಾಯ ವ್ಯಕಕ್ತಪಡಿಸಿವೆ.

ಸಿಬ್ಬಂದಿಗೆ ಮಾರಕವಾಗುವ ನೀತಿಗಳ ಬಗ್ಗೆ ಗಮನಸೆಳೆದಿರುವ United Forum of Bank Unions ಬ್ಯಾಂಕ್ ವ್ಯವಸ್ಥೆ ಸುಧಾರಣಾ ನೀತಿಗಳನ್ನು ಕೈಬಿಡಿ ಎಂದು ಕೇಂದ್ರ ಸರಕಾರವನ್ನು ಕೋರಿದೆ. ಇತ್ತೀಚೆಗೆ ಸಭೆ ಸೇರಿದ್ದ ನಾನಾ ಒಕ್ಕೂಟಗಳು ಒಟ್ಟು ನಿರ್ಣಯಕ್ಕೆ ಬಂದಿದ್ದು ಮುಷ್ಕರ ಹೂಡುವ ವಿಷಯವನ್ನು UFBU ಮೂಲಕ ಇಂದು ಶುಕ್ರವಾರ ಪ್ರಕಟಣೆ ನೀಡಿವೆ.

ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಬ್ಯಾಂಕುಗಳ ಸ್ಥಾಪನೆಗೆ ಭಾರತ ಸರಕಾರ ಅವಕಾಶ ಕಲ್ಪಿಸುತ್ತಿದೆ. ಅಷ್ಟೇ ಅಲ್ಲ, ವಿದೇಶಿ ಬ್ಯಾಂಕುಗಳಿಂದ ಖಾಸಗಿ ಬ್ಯಾಂಕುಗಳ ಸ್ವಾಧೀನವೂ ನಡೆಯುತ್ತಿದೆ. ಇದು ಅಪಾಯಕಾರಿ ಎಂದು UFBU ಬಣ್ಣಿಸಿದೆ. ಹಾಗಾಗಿ ಡಿ. 19ರಂದು ಮುಷ್ಕರ ನಡೆಸಿ, ಡಿಸೆಂಬರ್ 23ರಂದು ಮತ್ತೊಂದು ಸುತ್ತಿನ ಸಭೆ ಸೇರಿ ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ UFBU ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+