ಪತಿ ಸಾಲ ತೀರಿಸದಿದ್ದಕ್ಕೆ ಪತ್ನಿಯನ್ನೇ ಅಡ ಇಟ್ಟುಕೊಂಡ ಬ್ಯಾಂಕ್-ಮುಂದೇನಾಯ್ತು?-ಮಾಹಿತಿ
ಸೇಲಂ, ಮೇ, 04: ಸಾಮಾನ್ಯವಾಗಿ ಬ್ಯಾಂಕ್‌ನಿಂದ ಸಾಲ ತೆಗೆದುಕೊಂಡು ತೀರಿಸದಿದ್ದರೆ ನೋಟಿಸ್ ನೀಡುತ್ತಾರೆ. ಇಲ್ಲದಿದ್ದರೆ, ಅಡ ಇಟ್ಟಿರುವ ವಸ್ತಗಳನ್ನು ಹಾರಾಜು ಮಾಡಲು ಮುಂದಾಗುತ್ತಾರೆ. ಇದ್ಯಾವುದೂ ಆಗಲಿಲ್ಲ ಅಂದರೆ, ಹಣವನ್ನು ಪಾವತಿ ಮಾಡುವವರೆಗೂ ಹಿಂಸೆ ಕೊಡುತ್ತಿರುತ್ತಾರೆ. ಆದರೆ ಪತಿ ಸಾಲ ತೀರಿಸದಿದ್ದಕ್ಕೆ ಇಲ್ಲೊಂದು ಬ್ಯಾಂಕ್‌ನವರು ಪತ್ನಿಯನ್ನೇ ಅಡ ಇಟ್ಟುಕೊಂಡ ವಿಚಿತ್ರ ಘಟನೆ ನಡೆದಿದೆ.
ಪತಿ ಸಾಲ ತೀರಿಸದಿದ್ದಕ್ಕೆ ಪತ್ನಿಯನ್ನು ಅಡ ಇಟ್ಟುಕೊಂಡ ವಿಚಿತ್ರ ಘಟನೆ ತಮಿಳುನಾಡಿನ ಖಾಸಗಿ ಬ್ಯಾಂಕ್‌ವೊಂದರಲ್ಲಿ ನಡೆದಿದೆ. ಗ್ರಾಹಕನೊಬ್ಬ ತೆಗೆದುಕೊಂಡ ಸಾಲವನ್ನು ತೀರಿಸದಿದ್ದಕ್ಕೆ ಬ್ಯಾಂಕ್ ಉದ್ಯೋಗಿ ಆತನ ಪತ್ನಿಯನ್ನೇ ಅಡ ಇಟ್ಟುಕೊಂಡ ಘಟನೆ ಬೆಳಕಿಗೆ ಬಂದಿದೆ. ಸೇಲಂನ ವಳಪ್ಪಾಡಿ ಎಂಬಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಖಾಸಗಿ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಂಡಿದ್ದ ಕೂಲಿ ಕಾರ್ಮಿಕ ಸಾಲದ ಕಂತು ಕಟ್ಟಿರಲಿಲ್ಲ. ಆದ್ದರಿಂದ ಬ್ಯಾಂಕ್ ಸಿಬ್ಬಂದಿಯೊಬ್ಬರು ಕೂಲಿ ಕಾರ್ಮಿಕನ ಮನೆಗೆ ಹೋಗಿ ಆತನ ಪತ್ನಿಯನ್ನು ಬ್ಯಾಂಕ್‌ಗೆ ಕೆರೆದುಕೊಂಡು ಹೋಗಿದ್ದಾನೆ. ಸಾಲದ ಕಂತು ಕಟ್ಟಿದ ನಂತರ ಹೆಂಡತಿಯನ್ನು ಬ್ಯಾಂಕ್‌ನಿಂದ ಕಳುಹಿಸಲಾಗಿದೆ. ವಳಪ್ಪಾಡಿಯಲ್ಲಿರುವ ಖಾಸಗಿ ಬ್ಯಾಂಕ್‌ವೊಂದರಲ್ಲಿ ನಡೆದಿರುವ ಘಟನರ ಇದಾಗಿದೆ ಎಂದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ ಸಂಜೆ 7:30ರವರೆಗೂ ಆ ಮಹಿಳೆಯನ್ನು ಬ್ಯಾಂಕ್‌ನಲ್ಲಿ ಇರಿಸಿದ್ದರು. ಸಾಲ ಪಡೆದ ವ್ಯಕ್ತಿ ಪ್ರಶಾಂತ್ (27) ಎನ್ನಲಾಗಿದ್ದು, ಈತ ವಳಪ್ಪಾಡಿ ಬಳಿಯ ತುಕ್ಕಿಯಂಪಾಳಯಂ ನಿವಾಸಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈತ ನಾಲ್ಕು ತಿಂಗಳ ಹಿಂದೆ ಬ್ಯಾಂಕ್‌ನಿಂದ 35,000 ರೂಪಾಯಿ ಸಾಲ ಪಡೆದುಕೊಂಡಿರುತ್ತಾನೆ. ವಾರಕ್ಕೆ 770 ರೂನಂತೆ 52 ಕಂತುಗಳಲ್ಲಿ ಸಾಲ ಮರುಪಾವತಿಗೆ ಒಪ್ಪಂದ ಆಗಿದ್ದು, ಇನ್ನು 10 ವಾರದ ಕಂತು ಮಾತ್ರವೇ ಬಾಕಿಯಿತ್ತು ಎಂದು ತಿಳಿದುಬಂದುದೆ.
ಮೂಲಗಳ ಪ್ರಜಾರ ಬ್ಯಾಂಕ್ ಮಹಿಳೆ ಉದ್ಯೋಗಿ ಏಪ್ರಿಲ್ 30ರಂದು ಸಾಲ ಕಟ್ಟುವ ಬಗ್ಗೆ ಪ್ರಶಾಂತ್‌ಗೆ ಕರೆ ಮಾಡಿದ್ದಾರೆ. ಆದರೆ ಪ್ರಶಾಂತ್ ಸ್ವೀಕರಿಸಲು ನಿರಾಕರಿಸಿದ್ದರಿಂದ, ಆತನ ಮನೆಗೆ ಹೋಗಿದ್ದಾಳೆ. ಈ ವೇಳೆ ಪ್ರಶಾಂತ್ ಮನೆಯಲ್ಲಿರಲಿಲ್ಲ. ಬದಲಿಗೆ ಆತನ ಹೆಂಡತಿ ಗೌರಿ ಶಂಕರಿಯನ್ನು ಬ್ಯಾಂಕ್‌ಗೆ ಕರೆದುಕೊಂಡು ಬರುತ್ತಾಳೆ. ಪ್ರಶಾಂತ್ ಸಾಲದ ಕಂತು ಕಟ್ಟುವವರೆಗೂ ಆಕೆಯನ್ನು ಕಚೇರಿಯಲ್ಲೇ ಇರಿಸಿಕೊಂಡಿದ್ದರು ಎನ್ನಲಾಗಿದೆ.
ಬಳಿಕ ಪತ್ನಿಯನ್ನು ಬ್ಯಾಂಕ್‌ಗೆ ಬಲವಂತವಾಗಿ ಕೂಡಿರುವ ವಿಚಾರ ತಿಳಿದ ಬಳಿಕ ಪ್ರಶಾಂತ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಆರ್‌ಬಿಐ ನಿಯಮದ ಪ್ರಕಾರ ಸಂಜೆ 6 ಗಂಟೆಯ ಬಳಿಕ ಗ್ರಾಹಕರಿಗೆ ಸಾಲ ವಸೂಲಾತಿ ಹೆಸರಿನಲ್ಲಿ ಕಿರುಕುಳ ಕೊಡಬಾರದು. ಆದ್ದರಿಂದ ಆ ಖಾಸಗಿ ಬ್ಯಾಂಕ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ ಹೇಳಬೇಕೆಂದರೆ, ಕೋಟಿಗಟ್ಟಲೇ ಕೊಳ್ಳೆ ಹೊಡೆದು ಬಂಗಲೆ ಕಟ್ಟಿರುವವರ ಮೇಲೆ ಯಾವುದೇ ದಾಳಿ ಆಗುವುದಿಲ್ಲ. ಆದರೆ ಸಾಮಾನ್ಯ ಜನರು ಮನೆ ಖರ್ಚುವೆಚ್ಚ, ಜೀವನ ಸಾಗಿಸಲು ತುಂಬಾ ಕಷ್ಟ ಅಂತಾ ಬ್ಯಾಂಕ್ ಸಾಲ ಪಡೆಯಲು ಮುಂದಾಗುತ್ತಾರೆ. ಅದರು ಕೋಟಿ ಲೆಕ್ಕದಲ್ಲಿ ಅಲ್ಲ ಬರೀ 20-30 ಸಾವಿರ ರೂಪಾಯಿ ಲೆಕ್ಕಾದಲ್ಲಿ. ಇದೇ ಬಡವರಿಗೆ ದೊಡ್ಡ ಮೊತ್ತವಾಗಿರುತ್ತದೆ. ಕೂಲಿ-ನಾಲಿ ಮಾಡಿ ಈ ಹಣವನ್ನು ತೀರಿಸುವುದರಲ್ಲೇ ಅವರ ಜೀವನವನ್ನು ಒತ್ತೆಯಾಗಿಡುತ್ತಾರೆ.
ಆದರೆ, ಶ್ರೀಮಂತರು ಕೋಟಿ ಲೆಕ್ಕದಲ್ಲಿ ಸಾಲ ತೆಗೆದುಕೊಂಡು ಹಣವನ್ನು ಕೊಳ್ಳೆ ಹೊಡೆಯುವ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಇಂತಹವರ ಮೇಲೆ ಮಾತ್ರ ಯಾವುದೇ ಕೇಸ್, ಕ್ರಮ ತೆಗೆದುಕೊಳ್ಳುವುದು ಇರಲಿ, ಅವರನ್ನು ಟಚ್ ಮಾಡಲಿಕ್ಕೂ ಹೋಗುವುದಿಲ್ಲ. ಬಡವರು ಇಂತಹ ಸಣ್ಣಪುಟ್ಟ ತಪ್ಪುಗಳು ಮಾಡಿದ್ದರೂ ಕೂಡ ಅವರನ್ನು ದೊಡ್ಡ ಆರೋಪಿ ಸ್ಥಾನದಲ್ಲಿ ಕಾಣುತ್ತಾರೆ. ಇದಕ್ಕೆಲ್ಲ ಕೊನೆಯೇ ಇಲ್ವಾ ಅಂತಿದ್ದಾರೆ ಸಾಮನ್ಯಾ ಜನರು.












Click it and Unblock the Notifications