ಮಾರ್ಚ್ 2021 ರಲ್ಲಿ ಎಷ್ಟು ದಿನ ಬ್ಯಾಂಕ್‌ಗಳಿಗೆ ರಜಾದಿನ?

ನವದೆಹಲಿ, ಫೆಬ್ರವರಿ 26: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಮಾರ್ಚ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ ತಿಂಗಳಲ್ಲಿ ಸುಮಾರು 11 ದಿನಗಳ ಬ್ಯಾಂಕ್ ಬಾಗಿಲು ಬಂದ್ ಆಗಿರಲಿವೆ.

ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ. ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟವು ಮಾರ್ಚ್ 15ರಿಂದ ಎರಡು ದಿನ ಮುಷ್ಕರಕ್ಕೆ ಕರೆ ನೀಡಿವೆ. ಈ ಎರಡು ದಿನ ರಜೆ ಇರುವ ಸಾಧ್ಯತೆಯೂ ಇದೆ.

Bank Holidays in March 2021: Bank will remain closed for 11 days

ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

ಮಾರ್ಚ್ 2021ರಲ್ಲಿ ಬ್ಯಾಂಕ್ ರಜಾ ದಿನ
ದಿನಾಂಕ ದಿನ ರಜಾದಿನಗಳು
ಮಾರ್ಚ್ 05, 2021 ಶುಕ್ರವಾರ ಛಾಪ್ಚಾರ್ ಕುತ್, ಮಿಜೋರಾಂ
ಮಾರ್ಚ್ 11 ಗುರುವಾರ ಮಹಾ ಶಿವರಾತ್ರಿ
ಮಾರ್ಚ್ 13 ಶನಿವಾರ ಎರಡನೇ ಶನಿವಾರ
ಮಾರ್ಚ್ 22 ಶುಕ್ರವಾರ ಬಿಹಾರ ದಿನಾಚರಣೆ, ಬಿಹಾರ
ಮಾರ್ಚ್ 27 ಶನಿವಾರ ನಾಲ್ಕನೇ ಶನಿವಾರ
ಮಾರ್ಚ್ 29, 30 ಸೋಮವಾರ, ಮಂಗಳವಾರ ಹೋಳಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+