Holiday: ಸೆಪ್ಟೆಂಬರ್ ಕೊನೇ ವಾರದಲ್ಲಿ ಬ್ಯಾಂಕ್‌ಗಳಿಗೆ ಸಾಲು ರಜೆ
Bank Holiday: ವರ್ಷದ ಆರಂಭದಿಂದಲೂ ಬ್ಯಾಂಕ್ ಉದ್ಯೋಗಿಗಳಿಗೆ ಸಾಲು ರಜೆಗಳೇ ಸಿಕ್ಕಿವೆ. ಇನ್ನೂ ಇದೀಗ ಸೆಪ್ಟೆಂಬರ್ ಮುಗಿಯುವ ಹಂತದಲ್ಲಿದ್ದು, ಈ ತಿಂಗಳ ಕೊನೇ ವಾರದಲ್ಲೂ ಸಹ ರಜೆಗಳ ಸರಮಾಲೆಯೇ ಇವೆ. ಹಾಗಾದ್ರೆ, ಯಾವ್ಯಾವಾಗ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈ ಬಾರಿ ಕೆಲವೆಡೆ ಕಾರಣಾಂತರಗಳಿಂದ ಬ್ಯಾಂಕ್‌ಗಳಿಗೆ ಸಾಲು ರಜೆಗಳು ಸಿಕ್ಕಿವೆ. ಆಯಾ ರಾಜ್ಯಗಳ ಸ್ಥಳೀಯ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗಿದೆ. ಹಾಗೆಯೇ ಇದೀಗ ಸೆಪ್ಟೆಂಬರ್ ಕೊನೇ ವಾರದಲ್ಲಿ ಮತ್ತೆ ಸಾಲು ರಜೆಗಳೇ ಸಿಗಲಿದ್ದು, ಇದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ.

ಸೆಪ್ಟೆಂಬರ್ ಕೊನೇ ವಾರದಲ್ಲಿ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಹಲವು ಬ್ಯಾಂಕ್‌ಗಳು ಮುಚ್ಚಲ್ಪಡಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ ರಜೆ ಕ್ಯಾಲೆಂಡರ್ 2025ರ ಪ್ರಕಾರ, ವಾರಾಂತ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದ್ದರಿಂದ ಗ್ರಾಹಕರಿಗೆ ಯಾವುದೇ ಅನಾನುಕೂಲಗಳು ಆಗದಂತೆ ಕೆಲ ಮುನ್ಸೂಚನೆಗಳನ್ನು ನೀಡಲಾಗಿದೆ. ಗ್ರಾಹಕರು ನಗದು ಠೇವಣಿ, ಚೆಕ್ ಕ್ಲಿಯರೆನ್ಸ್, ಸಾಲ ಅರ್ಜಿಗಳು ಅಥವಾ ಇತರ ಶಾಖೆಗೆ ಸಂಬಂಧಿಸಿದ ಕೆಲಸಗಳನ್ನು ಮುಂಚಿತವಾಗಿ ಮುಗಿಸಿಕೊಳ್ಳಲು ಸೂಚನೆ ನೀಡಲಾಗಿದೆ.
ಈಗಾಗಲೇ ಸೆಪ್ಟೆಂಬರ್ 22ರಂದು ರಾಜಸ್ಥಾನದ ಜೈಪುರದಲ್ಲಿ ನವರಾತ್ರಿ ಸ್ಥಾಪನಾ ಮತ್ತು ತೆಲಂಗಾಣದಲ್ಲಿ ಬತುಕಮ್ಮ ಹೂವಿನ ಉತ್ಸವ ಹಿನ್ನೆಲೆ ಈ ಭಾಗದ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿತ್ತು. ಇನ್ನು ಸೆಪ್ಟೆಂಬರ್ 23ರ ಮಂಗಳವಾರ ಜಮ್ಮು ಮತ್ತು ಶ್ರೀನಗರದಲ್ಲಿ ಮಹಾರಾಜ ಹರಿ ಸಿಂಗ್ ಜಿ ಅವರ ಜನ್ಮ ದಿನಾಚರಣೆ ಮತ್ತು ಹರಿಯಾಣದಲ್ಲಿ ವೀರ್ ಶಹೀದ್ ದಿವಸ್‌ಗಾಗಿ ರಜೆ ಘೋಷಣೆ ಮಾಡಲಾಗಿದೆ.
ಇನ್ನು ಸೆಪ್ಟೆಂಬರ್ 27ರಂದು ನಾಲ್ಕನೇ ಶನಿವಾರ, ಸೆಪ್ಟೆಂಬರ್ 28ರಂದು ಭಾನುವಾರ ಆಗಿರುವ ಕಾರಣ ಈ ಎರಡು ದಿನ ಬ್ಯಾಂಕ್‌ಗಳಿಗೆ ಸಾರ್ವಜನಿಕ ರಜೆ ಇರಲಿದೆ. ಈ ಎರಡು ದಿನ ದೇಶಾದ್ಯಂತದ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಈ ಹಿನ್ನೆಲೆ ಗ್ರಾಹಕರು ಬ್ಯಾಂಕ್‌ಗೆ ಭೇಟಿ ನೀಡುವ ಮೊದಲು ರಜಾದಿನಗಳ ದಿನಾಂಕಗಳನ್ನು ಪರಿಶೀಲನೆ ಮಾಡುವುದು ಉತ್ತಮ.
ಚೆಕ್ ಠೇವಣಿ, ದೊಡ್ಡ ನಗದು ಹಿಂಪಡೆಯುವಿಕೆ ಅಥವಾ ಸಾಲದ ಅರ್ಜಿಗಳಂತಹ ವಹಿವಾಟುಗಳಿಗೆ ಯಾವುದೇ ಅಡೆತಡೆಗಳಾಗದಂತೆ ತಪ್ಪಿಸಲು ಮುಂಚಿತವಾಗಿ ಇವುಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಆದರೆ, ರಜಾದಿನಗಳಲ್ಲಿಯೂ ಯುಪಿಐ ಪಾವತಿಗಳು, ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಎಟಿಎಂ ಸೇವೆಗಳು ಎಂದಿನಂತೆ ಲಭ್ಯ ಇರಲಿವೆ. ಇದರಲ್ಲಿ ಹಣ ವರ್ಗಾವಣೆ, ಬಿಲ್ ಪಾವತಿಗಳು ಅಥವಾ ಇತರ ಅಗತ್ಯ ವಹಿವಾಟುಗಳನ್ನು ಕೂಡ ನಡೆಸಬಹುದಾಗಿದೆ.
ಹೆಚ್ಚಿನ ಬ್ಯಾಂಕುಗಳು ಆರ್‌ಬಿಐ ರಜಾ ಪಟ್ಟಿಯನ್ನು ಅನುಸರಿಸಿದರೆ, ಕೆಲ ರಾಜ್ಯಗಳಲ್ಲಿ ಸ್ಥಳೀಯ ಹಬ್ಬಗಳು ಹಾಗೂ ವಿಶೇಷ ಕಾರ್ಯಕ್ರಮಗಳಿಗೆ ಬ್ಯಾಂಕ್‌ಗಳಿಗೆ ಹೆಚ್ಚುವರಿ ರಜೆ ನೀಡಬಹುದು. ಇನ್ನು ಗ್ರಾಹಕರು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ತಮ್ಮ ಸ್ಥಳೀಯ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸುವುದು ಸೂಕ್ತ ಎಂದು ತಿಳಿಸಲಾಗಿದೆ. ಸಾಮಾನ್ಯವಾಗಿ ಸರ್ಕಾರಿ ರಜೆ ದಿನಗಳು, ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಂದು ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ಆದರೆ, ಕೆಲ ರಾಜ್ಯಗಳಲ್ಲಿ ಮಾತ್ರ ಸ್ಥಳೀಯ ಹಬ್ಬಗಳ ವೇಳೆಯೂ ರಜೆ ಘೋಷಣೆ ಮಾಡಲಾಗುತ್ತದೆ. ಇನ್ನೂ ಗ್ರಾಹಕರು ಈ ವೇಳೆ ಹಣ ವಹಿವಾಟನ್ನು ನೆಟ್ ಬ್ಯಾಂಕಿಂಗ್ ಮೂಲಕವೇ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ.












Click it and Unblock the Notifications