ಸೆಪ್ಟೆಂಬರ್ ಮೊದಲ ವಾರ 6 ದಿನ ಬ್ಯಾಂಕ್ ರಜಾ ಎಂಬ ಸುಳ್ಳು ಸುದ್ದಿ
Recommended Video

ಸುಳ್ಳು ಸುದ್ದಿ ಹರಿದಾಡುತ್ತಿದೆ, ಅವುಗಳಿಗೆ ಕಿವಿ ಕೊಡಬೇಡಿ ಅಂತಲೂ ಈಗೀಗ ಸುದ್ದಿ ಮಾಡಬೇಕಿದೆ. ಸೆಪ್ಟೆಂಬರ್ ಎರಡನೇ ತಾರೀಕಿನಿಂದ ಐದನೇ ತಾರೀಕಿನವರೆಗೆ ಆಮೇಲೆ ಎಂಟು-ಒಂಬತ್ತನೇ ತಾರೀಕು ಕೂಡ ರಜಾ ಇದೆ ಎಂಬ ಸುದ್ದಿ ಫೇಸ್ ಬುಕ್, ಟ್ವಿಟ್ಟರ್ ಹಾಗೂ ವಾಟ್ಸ್ ಆಪ್ ಗಳಲ್ಲಿ ಹರಿದಾಡುತ್ತಿದೆ.
ಸೆಪ್ಟೆಂಬರ್ 2 ಭಾನುವಾರ
ಸೆಪ್ಟೆಂಬರ್ 3 ಕೃಷ್ಣಾಷ್ಟಮಿ
ಸೆಪ್ಟೆಂಬರ್ 4-5 ಪಿಂಚಣಿಗಾಗಿ ಆಗ್ರಹಿಸಿ ಪ್ರತಿಭಟನೆ
ಸೆಪ್ಟೆಂಬರ್ 8-9 ಶನಿವಾರ ಹಾಗೂ ಭಾನುವಾರ ಆದ್ದರಿಂದ ಬಂದ್

ಆದ್ದರಿಂದ ಎಲ್ಲ ಎಟಿಎಂಗಳಲ್ಲಿ ನಗದು ಇರುವುದಿಲ್ಲ. ಆದ್ದರಿಂದ ಮುಂಚಿತವಾಗಿಯೇ ನಿಮ್ಮ ಅಗತ್ಯ ನೋಡಿಕೊಂಡು ಯೋಜನೆ ಮಾಡಿಕೊಳ್ಳಿ. ಮೂಲ-ವಾಟ್ಸ್ ಆಪ್.
#Rumours on social media abt closure of banks in 1st week of Sep. Banks to function as usual in Sept. Ist week! NO PAN INDIA BANK CLOSURE ON 3rd Sept. All ATMs & online transactions also to be available unimpeded. Do not trust rumours. @FinMinIndia @PIB_India @ANI @timesofindia pic.twitter.com/JqMvUVNYrg
— DFS (@DFS_India) 31 August 2018
ಹೀಗೆ ಸಂದೇಶ ಹರಿದಾಡುತ್ತಿದೆ. ಸೆಪ್ಟೆಂಬರ್ 2 ಭಾನುವಾರ ನಿಜ. ಆದರೆ ಕೃಷ್ಣಾಷ್ಟಮಿಗೆ ಕೆಲವು ರಾಜ್ಯಗಳಲ್ಲಿ ರಜಾ. ಹಲವು ಕಡೆ ನಿರ್ಬಂಧಿತ ರಜಾ ಹಾಗೂ ಅನೇಕ ಕಡೆ ರಜಾ ಇಲ್ಲ. ಸೆಪ್ಟೆಂಬರ್ 4-5ನೇ ತಾರೀಕು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಿದ್ದಾರೆ. ಆ ನಂತರ ಎರಡನೇ ಶನಿವಾರ- ಭಾನುವಾರ ರಜಾ ಇದೆ.












Click it and Unblock the Notifications