ಮೇ 30ರಿಂದ 2 ದಿನ ಬ್ಯಾಂಕ್ ಮುಷ್ಕರ: ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ನವದೆಹಲಿ, ಮೇ 24: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಎಸ್‌ಬಿಐ ಸೇರಿದಂತೆ ಅನೇಕ ಬ್ಯಾಂಕ್‌ಗಳ ಕಾರ್ಮಿಕ ಸಂಘಟನೆಗಳು ಮೇ 30 ಮತ್ತು 31ರಂದು ಮುಷ್ಕರಕ್ಕೆ ಮುಂದಾಗಿದೆ. ಇದರಿಂದ ಬ್ಯಾಂಕ್‌ಗಳ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

10 ಲಕ್ಷಕ್ಕೂ ಅಧಿಕರ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ ನೌಕರರು ಮುಷ್ಕರ ನಡೆಸಲಿದ್ದಾರೆ. ಮುಷ್ಕರ ನಡೆದರೆ ಈ ಎರಡು ಸಿನಗಳ ಅವಧಿಯಲ್ಲಿ ಬ್ಯಾಂಕಿಂಗ್ ಸೇವೆಗೆ ತೊಡಕಾಗುವ ಸಾಧ್ಯತೆ ಇದೆ ಎಂದು ಎಸ್‌ಬಿಐ ಹೇಳಿದೆ. ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಮಂಜಾಬ್ ಮತ್ತು ಸಿಂಧ್ ಬ್ಯಾಂಕ್, ಮತ್ತಿತರೆ ಬ್ಯಾಂಕ್ ಗಳೂ ಬ್ಯಾಂಕಿಂಗ್ ಸೇವೆಗಳ ವ್ಯತ್ಯಯ ಸಾಧ್ಯತೆ ಕುರಿತಾಗಿ ಹೇಳಿದೆ.

Bank employees strike on May 30 and 31

ಮೇ 30ರಂದು ಬೆಳಗ್ಗೆ 6 ಗಂಟೆಯಿಂದಲೇ ಮುಷ್ಕ ಆರಂಭಿಸಲು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್‌ ಎಐಬಿಬಿಎ ಎಐಬಿಐಎ, ಎಐಬಿಒಸಿ, ಎನ್‌ಸಿಬಿಇ, ಎಐಬಿಒಎ, ಬಿಇಎಫ್‌ಐ, ಐಎನ್‌ಬಿಒಸಿ ಮುಂದಾಗಿದೆ. ಹಾಗಾಗಿ ಎರಡು ದಿನ ದೇಶಾದ್ಯಂತ ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+