ಭಾರತದ ವಿರುದ್ಧ ಬಾಂಗ್ಲಾದೇಶಕ್ಕೆ ಉರಿಉರಿ, ಕಿರಿಕ್ ಯಾಕೆ ಮಾರಾಯ ಅಂತಿದ್ದಾರೆ ಜನ!
ಭಾರತ & ಬಾಂಗ್ಲಾದೇಶ ನಡುವೆ ಇದೀಗ ಭಾರಿ ಕಿರಿಕ್ ಶುರುವಾದಂತೆ ಕಾಣುತ್ತಿದೆ. ಯಾಕೆ ಅಂದ್ರೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಶುರುವಾಗಿ, ಸಣ್ಣ ವಿಚಾರಕ್ಕೆ ಹೊತ್ತಿ ಉರಿದ ನಂತರ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಓಡಿ ಬಂದಿದ್ದಾರೆ. ಹೀಗಿದ್ದಾಗ ಭಾರತ ಕೂಡ ತನ್ನ ಧರ್ಮ ಪಾಲನೆ ಮಾಡಿ, ಶೇಖ್ ಹಸೀನಾ ಅವರಿಗೆ ಆಶ್ರಯ ನೀಡಿದೆ. ಆದರೆ ಈ ಸುದ್ದಿ ಮಾತ್ರ ಬಾಂಗ್ಲಾದೇಶದ ರಾಜಕೀಯ ನಾಯಕರಿಗೆ ಉರಿ ತರಿಸಿದೆ. ಇದೇ ವಿಚಾರದಲ್ಲಿ ಇದೀಗ ಏನಾಗುತ್ತಿದೆ ಗೊತ್ತಾ?
ಅಂದಹಾಗೆ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಇದೀಗ ಭಾರತವು ಆಶ್ರಯ ನೀಡಿರುವ ವಿಚಾರದಲ್ಲಿ ಬಾಂಗ್ಲಾದೇಶದಲ್ಲಿ ಜನರು ಕೋಪಗೊಂಡಿಲ್ಲ, ಆದರೆ ಈ ಬಗ್ಗೆ ಬೇಸರ ಅವರಲ್ಲಿ ಇದೆ ಅಂತಾ ಈಗ 'ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ' ನಾಯಕ ಹೇಳಿಕೆ ನೀಡಿರುವುದು ಭಾರಿ ಸಂಚಲನ ಸೃಷ್ಟಿ ಮಾಡಿದೆ. ಹಿಂಸಾಚಾರದ ಬೆಂಕಿಯಲ್ಲಿ ಬೆಂದು ನಲುಗಿ ಹೋಗಿದ್ದ ಬಾಂಗ್ಲಾಗೆ ಭಾರತವೇ ಸಹಾಯ ಮಾಡಿತ್ತು, ಅದರಲ್ಲೂ ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಅವರಿಗೆ ಈ ಸಮಯದಲ್ಲಿ ಜೀವ ಭಯ ಕಾಡುತ್ತಿದೆ. ಹೀಗಿದ್ದಾಗ ಭಾರತವೇ ಅವರಿಗೆ ರಕ್ಷಣೆ ನೀಡಿದೆ. ಈ ರೀತಿ ಸಹಾಯ ಮಾಡಿದ್ರೂ ಬಾಂಗ್ಲಾದೇಶದ ರಾಜಕಾರಣಿಗಳ ಕಿರಿಕ್ ಮಾತ್ರ ಮುಂದುವರಿದಿದೆ.

ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ
ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಓಡಿ ಬಂದಿರುವ ಕುರಿತು ಇದೀಗ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾದೇಶದ ಮಾಜಿ ಸಚಿವ ಅಬ್ದುಲ್ ಮೊಯಿನ್ ಖಾನ್, ಭಾರತದ ಈ ನಿರ್ಧಾರವನ್ನ ವಿರೋಧಿಸಿದ್ದಾರೆ. ಅಲ್ಲದೆ ಇಂತಹ ನಡೆಯಿಂದ ಬಾಂಗ್ಲಾದೇಶದ ಜನರಿಗೆ ಬೇಸರವಾಗಿದೆ ಎಂದಿದ್ದಾರೆ. ಭಾರತದಿಂದ ಈ ನಡೆ ನಿರೀಕ್ಷಿಸಿರಲಿಲ್ಲ ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ ಎಂಬ ಆಕ್ರೋಶವು ಈಗ ಮೂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆರಂಭವಾಗಿದೆ.
ಭಾರತವೇ ಬೆಸ್ಟ್ & ಭಾರತವೇ ಸೇಫ್!
ಪ್ರಪಂಚದ ಯಾವುದೇ ದೇಶಕ್ಕೆ ಹೋದರೂ ಹಿಂಸೆ.. ಹಿಂಸೆ.. ಹಿಂಸೆ.. ಹೀಗೆ ರಕ್ತಪಾತದಲ್ಲಿ ಮುಳುಗಿ ಹೋದ ಜಗತ್ತಿನಲ್ಲಿ ಭಾರತ ಶಾಂತಿ ಸಂದೇಶ ಸಾರುತ್ತಿದೆ. ಅದರಲ್ಲೂ ಈಗ ಮೀಸಲಾತಿ ವಿರುದ್ಧ ಕಿಚ್ಚು ಹೊತ್ತಿಕೊಂಡ ನಂತರ ಬಾಂಗ್ಲಾದೇಶ ಬಿಟ್ಟು ಓಡಿ ಬಂದ ಮಾಜಿ ಪ್ರಧಾನಿ ಶೇಖ್ ಹಸೀನಾ, ಭಾರತದಲ್ಲಿ ಸುರಕ್ಷಿತವಾಗಿ ಇದ್ದಾರೆ. ಆದರೆ ಬಾಂಗ್ಲಾ ರಾಜಕಾರಣಿಗಳು ಮಾತ್ರ ಈ ವಿಚಾರದಲ್ಲಿ ಕಿರಿಕ್ ಶುರು ಮಾಡಿದ್ದು ಇದೆಲ್ಲ ಎಲ್ಲಿಗೆ ಬಂದು ನಿಲ್ಲುತ್ತೋ ಕಾದು ನೋಡಬೇಕು.












Click it and Unblock the Notifications