ಭಾರತ & ಬಾಂಗ್ಲಾದೇಶ ಯುದ್ಧ ಫಿಕ್ಸ್? ಎರಡೂ ದೇಶಗಳ ನಡುವೆ ಬೆಂಕಿ ಹಚ್ಚಿದ್ದು ಯಾರು?
ಭಾರತ & ಬಾಂಗ್ಲಾದೇಶ ನಡುವೆ ಮೆಲ್ಲಗೆ ಬೆಂಕಿ ಹೊತ್ತಿಸುವ ಕೆಲಸ ಆಗುತ್ತಿದೆ. ಅದರಲ್ಲೂ ಆಂತರಿಕ ಕುಲುಮೆಯ ಒಳಗೆ ಬೆಂದು ಹೋಗಿರುವ ಬಾಂಗ್ಲಾದೇಶ ಇದೀಗ ಭಾರತದ ವಿರುದ್ಧ ಕೂಡ ಮಾತನಾಡುತ್ತಿದೆ. ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ಓಡಿ ಬಂದು ಆಶ್ರಯ ಪಡೆದಿರುವ ವಿಚಾರ ಇದೀಗ ಎರಡೂ ದೇಶಗಳ ನಡುವೆ ನೆಮ್ಮದಿ & ಸಂಬಂಧ ಕೆಡಿಸುವ ಸೂಚನೆ ನೀಡುತ್ತಿದೆ. ಇದೇ ವಿಚಾರವಾಗಿ ಈಗ, ಬಾಂಗ್ಲಾದೇಶ ನೀಡಿರುವ ಹೇಳಿಕೆ ಎಂತಹದ್ದು ಗೊತ್ತಾ?
ಬಾಂಗ್ಲಾದೇಶ ಈಗಾಗಲೇ ಭಾರತದಿಂದ ಸಾಕಷ್ಟು ಸಹಾಯ ಪಡೆದಿದೆ. ಆದರೂ ಭಾರತದ ಬಗ್ಗೆಯೇ ಸಾಕಷ್ಟು ಅಸಮಾಧಾನ ಹೊಂದಿದೆ ಈ ದೇಶ. ಹೀಗಿದ್ದಾಗಲೇ ಇತ್ತೀಚೆಗೆ ಬಾಂಗ್ಲಾ ಜನರ ನೆಮ್ಮದಿ ಕೆಡಿಸಿದ್ದ ಮೀಸಲಾತಿ ವಿರುದ್ಧದ ಹೋರಾಟಕ್ಕೂ ಭಾರತದ ಕಡೆಗೆ ಬಾಂಗ್ಲಾದ ಕೆಲವರು ಬೆರಳು ಮಾಡಿ ತೋರಿಸಿದ್ದಾರೆ. ಇಷ್ಟೆಲ್ಲಾ ಕಿರಿಕ್ ನಡೆಯುತ್ತಿರುವ ಸಮಯದಲ್ಲೇ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಸೀನಾ ಅವರನ್ನು ಭಾರತ ನಮಗೆ ಹಸ್ತಾಂತರ ಮಾಡಲಿ ಎಂದು ಆಗ್ರಹ ಮಾಡಿದೆ ಬಾಂಗ್ಲಾದೇಶ.

ಹಸೀನಾ ವಿರುದ್ಧ ಮೊಳಗಿದ ಆಕ್ರೋಶ
ಈ ಬಗ್ಗೆ ಮಾತನಾಡಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಖ್ರುಲ್ ಇಸ್ಲಾಂ ಅಲಾಂಗಿರ್, ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನ ತಕ್ಷಣವೇ ಗಡೀಪಾರು ಮಾಡಲು ಆಗ್ರಹಿಸಿದ್ದಾರೆ. ಅಲ್ಲದೆ ಬಾಂಗ್ಲಾದ ಕ್ರಾಂತಿಯನ್ನ ಹಾಳು ಮಾಡಲು, ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಕೂಡ ಹಸೀನಾ ಮೇಲೆ ಹೊರಿಸಲಾಗಿದೆ. ಭಾರತವು ಕಾನೂನಾತ್ಮಕ ಮಾರ್ಗದ ಮೂಲಕ ಹಸೀನಾ ಅವರನ್ನು ಬಾಂಗ್ಲಾ ಸರ್ಕಾರಕ್ಕೆ ಹಸ್ತಾಂತರ ಮಾಡಬೇಕಿದೆ, ಈ ಮೂಲಕ ಹಸೀನಾ ವಿಚಾರಣೆಯ ಎದುರಿಸಬೇಕಿದೆ ಎಂದು ಹೇಳಿದ್ದಾರೆ ಬಾಂಗ್ಲಾ ವಿರೋಧ ಪಕ್ಷದ ನಾಯಕ.
ಭಾರತಕ್ಕೆ ಬಾಂಗ್ಲಾದೇಶ ಆಗ್ರಹ ಏನು?
ಒಟ್ನಲ್ಲಿ ಬಾಂಗ್ಲಾದೇಶ ಕ್ರಾಂತಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದು, ಇದೇ ವಿಚಾರ ಇದೀಗ ಜಾಗತಿಕ ಮಟ್ಟದಲ್ಲೂ ಚರ್ಚೆಗೆ ವೇದಿಕೆ ಒದಗಿಸಿದೆ. ವಿವಾದಾತ್ಮಕ ಮೀಸಲಾತಿಯ ವಿರುದ್ಧ ಪ್ರತಿಭಟನೆ & ಹಿಂಸಾಚಾರ ಆರಂಭವಾದ ನಂತರ ಹಸೀನಾ ಅವರು ಬಾಂಗ್ಲಾ ಬಿಟ್ಟು ಹೊರ ಬಂದಿದ್ದರು. ಇದೇ ಆಗಸ್ಟ್ 5ಕ್ಕೆ ಪ್ರಧಾನಿ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದ ಹಸೀನಾ ಅವರು, ಭಾರತಕ್ಕೆ ಓಡಿ ಬಂದಿದ್ದರು. ಈಗ ನೋಡಿದರೆ ಅವರನ್ನು ತಕ್ಷಣವೇ ನಮಗೆ ಒಪ್ಪಿಸಿ ಅಂತಾ ಹೇಳುತ್ತಿದ್ದಾರೆ ಬಾಂಗ್ಲಾ ರಾಜಕೀಯ ನಾಯಕರು.












Click it and Unblock the Notifications