ಬಾಂಗ್ಲಾದಲ್ಲಿ ರೊಹಿಂಗ್ಯಾ ಶಿಬಿರಕ್ಕೆ ಬೆಂಕಿ: ನಾಲ್ವರು ಸಾವು

Posted By:
Subscribe to Oneindia Kannada

ಕಾಕ್ಸ್ ಬಜಾರ್(ಬಾಂಗ್ಲಾದೇಶ), ಜನವರಿ 13: ಬಾಂಗ್ಲಾದೇಶದ ಕಾಕ್ಸ್ ಬಜಾರ್ ನಲ್ಲಿರುವ ರೊಹಿಂಗ್ಯಾ ಶಿಬಿರದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಜ.12 ರಂದು ರಾತ್ರಿ ಇದ್ದಕ್ಕಿದ್ದಂತೆ ಶಿಬಿರದಲ್ಲಿ ಕಾಣಿಸಿಕಂಡ ಬೆಂಕಿಯಿಂದಾಗಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಏಳು ಜನರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿತ್ತು, ಆಸ್ಪತ್ರೆಯಲ್ಲಿರುವ ಅವರ ಸ್ಥಿತಿ ಚಿಂತಾಜನಕವಾಗಿದೆ.

ಘಟನೆ ನಡೆದ ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ, ನಾಲ್ವರು ಅಸುನೀಗಿದ್ದರು.

Bangladesh: Fire at Rohingya camp kills 4

ಘಟನೆಗೆ ಕಾರಣ ತಿಳಿದುಬಂದಿಲ್ಲ. ಬಾಂಗ್ಲಾ ಮತ್ತು ಮುಯನ್ಮಾರ್ ಗಡಿಗಳಲ್ಲಿ ವಾಸವಿರುವ ರೊಹಿಂಗ್ಯಾ ಮುಸ್ಲಿಮರು ತಮ್ಮ ಮೂಲ ನೆಲೆ ಯಾವುದು ಎಂದೇ ಗೊತ್ತಿಲ್ಲದೆ, ಆಶ್ರಯಕ್ಕಾಗಿ ದೇಶ ದೇಶ ಸುತ್ತುತ್ತಿರುವವರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
4 Rohingyas, including three children and a woman, were killed in a fire at an UN-run transit camp in southeastern Bangladesh's Ukhiya upazila near Cox's Bazar on Friday night. Cox's Bazar's Additional Superintendent of Police Afruzul Haque Tutul said, "The fire, which broke out at around 3:30 am late on Friday, from a candle in their tent at the camp, also left three others injured.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ