• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹೀಂದ್ರಾ ಗ್ರೂಪ್ ಕಂಪನಿ ಕಾರ್ಮಿಕರಿಗೆ ಬಾಳೆ ಎಲೆ ಊಟ

|

ನವದೆಹಲಿ, ಏಪ್ರಿಲ್.09: ಕೊರೊನಾ ವೈರಸ್ ಕಾಟದಿಂದ ತಪ್ಪಿಸಿಕೊಳ್ಳಲು ಭಾರತಕ್ಕೆ ಭಾರತವೇ ಲಾಕ್ ಡೌನ್ ಆಗಿದೆ. ಈ ಹಿನ್ನೆಲೆ ಕೈಗಾರಿಕೋದ್ಯಮಿ ಆನಂದ್ ಮಹೀಂದರ್ ತಮ್ಮ ಕಾರ್ಖಾನೆ ಕಾರ್ಮಿಕರಿಗೆ ಪ್ಲೇಟ್ ಗಳ ಬದಲು ಬಾಳೆ ಎಲೆಯಲ್ಲಿ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಮಹೀಂದರ್ ಕಾರ್ಖಾನೆಯ ಕ್ಯಾಂಟೀನ್ ಗಳಲ್ಲಿ ಕಾರ್ಮಿಕರಿಗಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಬಾಳೆಎಲೆಗಳಲ್ಲಿ ಊಟವನ್ನು ಬಡಿಸಲಾಗುತ್ತಿದೆ. ಈ ಕುರಿತು ಸ್ವತಃ ಉದ್ಯಮಿ ಆನಂದ್ ಮಹೀಂದರ್ ಟ್ವೀಟ್ ಮಾಡಿದ್ದಾರೆ.

ಕೊರೊನಾ ಚಿಂತೆ ಬಿಡಿ ವಿಟಮಿನ್ ಡಿ ವೃದ್ಧಿಸಿ; ಇದು ಹೃದಯದ ವಿಷಯ ಕೊರೊನಾ ಚಿಂತೆ ಬಿಡಿ ವಿಟಮಿನ್ ಡಿ ವೃದ್ಧಿಸಿ; ಇದು ಹೃದಯದ ವಿಷಯ

ಭಾರತ ಲಾಕ್ ಡೌನ್ ನಿಂದಾಗಿ ಬಾಳೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ಲೇಟ್ ಬದಲು ಬಾಳೆ ಎಲೆಗಳನ್ನು ಬಳಸಿದ್ದಲ್ಲಿ ರೈತರಿಗೂ ನೆರವು ಸಿಗಲಿದೆ ಎಂದು ನಿವೃತ್ತ ಪತ್ರಕರ್ತೆ ಪದ್ಮಾ ರಾಮನಾಥ್ ಸಲಹೆ ನೀಡಿದ್ದರು. ಹೀಗಾಗಿ ತಮ್ಮ ಕಾರ್ಖಾನೆಗಳ ಕ್ಯಾಂಟೀನ್ ನಲ್ಲಿ ಬಾಳೆ ಎಲೆಯನ್ನು ಬಳಸಲಾಗುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಟ್ವೀಟ್ ಮಾಡಿ 1 ಗಂಟೆಯಲ್ಲಿ 13 ಸಾವಿರ ಲೈಕ್ಸ್:

ಡಾ.ಆನಂದ್ ಮಹೀಂದರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಾಳೆ ಎಲೆಗಳಲ್ಲಿ ಕಾರ್ಮಿಕರಿಗೆ ಊಟ ನೀಡುತ್ತಿರುವ ಫೋಟೋಗಳನ್ನು ಕೂಡಾ ಶೇರ್ ಮಾಡಿದ್ದಾರೆ. ಇದಾಗಿ ಒಂದು ಗಂಟೆಯಲ್ಲಿಯೇ 13 ಸಾವಿರ ಮಂದಿ ಅವರ ನಡೆಯನ್ನು ಇಷ್ಟಪಟ್ಟು ಲೈಕ್ ಮಾಡಿದ್ದಾರೆ.

English summary
Banana Leaves Used Instead Plates For Food In Mahindra Group's Factory Canteens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X