ವಿಡಿಯೋ: ಕಟ್ಟಡದ ಬಾಲ್ಕನಿ ಕುಸಿದು 3 ಸಾವು
ಕಟ್ಟಡದ ಬಾಲ್ಕನಿ ಕುಸಿದ ಪರಿಣಾಮ 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಬರೇಲಿ, ನವೆಂಬರ್, 25: ಕಟ್ಟಡದ ಬಾಲ್ಕನಿ ಕುಸಿದು 3 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಬೈರಾಮ್ ನಗರ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದಲ್ಲಿ ನಡೆಯುತ್ತಿದ್ದ ವಿಶೇಷ ಜಾತ್ರೆಯಲ್ಲಿ ಹಲವು ಅಪಾರ ಜನಸ್ತೋಮ ಸೇರಿದ್ದರು. ರಥ ಸಂಚಾರವನ್ನು ಕಣ್ತುಂಬಿಕೊಳ್ಳಲು ಹಲವು ಮಂದಿ ಕಟ್ಟಡಗಳನ್ನು ಏರಿ ನಿಂತಿದ್ದರು. ಮೊಹಮ್ಮದ್ ಮೊಬಿನ್ ಎಂಬುವವರಿಗೆ ಸೇರಿದ ಕಟ್ಟಡದ ಮೇಲೆ ಹಲವು ಮಂದಿ ಕುಳಿತಿದ್ದರು.
ಕಟ್ಟಡದ ಮೇಲೆ ಭಾರ ಹೆಚ್ಚಾಗಿ ಬಾಲ್ಕನಿ ಕುಸಿದು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಾಗಿದೆ.












Click it and Unblock the Notifications