ವಿಮಾನದಲ್ಲಿ ಜನಿಸಿದ ಶಿಶುವಿಗೆ ಜೀವನ ಪರ್ಯಂತ ಫ್ರೀ ಟಿಕೆಟ್!

Posted By:
Subscribe to Oneindia Kannada

ನವದೆಹಲಿ, ಜೂನ್ 18 : ಸೌದಿ ಅರೇಬಿಯಾದಿಂದ ಭಾರತಕ್ಕೆ ಪ್ರಯಾಣಿಸುತ್ತಿದ್ದ ಜೆಟ್ ಏರ್‌ ವೇಸ್ ವಿಮಾನದಲ್ಲಿ ಮಾರ್ಗ ಮಧ್ಯದಲ್ಲಿಯೇ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಇದೇ ಖುಷಿಯಲ್ಲಿ ಜೆಟ್ ಏರ್‌ ವೇಸ್, ಜನಿಸಿದ ಮಗುವಿಗೆ ಜೀವನ ಪರ್ಯಂತ ಉಚಿತ ವಿಮಾನ ಪ್ರಯಾಣ ಆಫರ್ ಮಾಡಿದೆ.

ಭಾನುವಾರ ಬೆಳಿಗ್ಗೆ ಜೆಟ್‌ ಏರ್‌ ವೇಸ್ 9 ಡಬ್ಲ್ಯು 569 ವಿಮಾನ ದಮ್ಮಾಮ್ ನಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿತ್ತು. ಮಾರ್ಗ ಮಧ್ಯೆ ವಿಮಾನದಲ್ಲಿದ್ದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವಿಮಾನದಲ್ಲಿಯೇ ತಾಯಿ ಮಗುವಿಗೆ ಜನ್ಮ ನೀಡಿದ್ದಾರೆ.

Baby born on Jet's Saudi-Kerala flight, plane diverted to Mumbai

ವಿಮಾನದ ಸಿಬ್ಬಂದಿ ಮತ್ತು ಕೇರಳಕ್ಕೆ ಪ್ರಯಾಣಿಸುತ್ತಿದ್ದ ಶುಶ್ರೂಷಕಿಯರು ಮಹಿಳೆಗೆ ಹೆರಿಗೆ ಮಾಡಿಸಲು ನೆರವಾಗಿದ್ದಾರೆ.

ವಿಮಾನವು ಮುಂಬೈನಲ್ಲಿ ಇಳಿದಿದ್ದು, ತಕ್ಷಣ ತಾಯಿ ಮತ್ತು ನವಜಾತ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ, ವಿಮಾನ ಕೊಚ್ಚಿಗೆ ಪ್ರಯಾಣ ಬೆಳೆಸಿದ್ದು, 12.45ಕ್ಕೆ ತಲುಪಬೇಕಿದ್ದ ವಿಮಾನ 90 ನಿಮಿಷ ತಡವಾಗಿ ತಲುಪಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A baby was born on a Jet Airways' aircraft winging its way from Dammam to Kochi on Sunday. When the woman went in labour, the crew of flight 9W 569 declared a medical emergency and diverted to the nearest airport, which happened to be Mumbai.
Please Wait while comments are loading...