ಅಯೋಧ್ಯೆ ವಿವಾದ: ಡಿ.5ರಿಂದ ಸುಪ್ರೀಂನಲ್ಲಿ ಅಂತಿಮ ವಿಚಾರಣೆ ಶುರು

Posted By:
Subscribe to Oneindia Kannada
   ಬಾಬ್ರಿ ಮಸೀದಿ ವಿವಾದದ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ | Oneindia Kannada

   ನವದೆಹಲಿ, ಡಿಸೆಂಬರ್ 5 : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಬಾಬ್ರಿ ಮಸೀದಿ ವಿವಾದದ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಇಂದಿನಿಂದ (ಮಂಗಳವಾರ) ನಡೆಯಲಿದೆ.

   ಅಯೋಧ್ಯೆ ವಿವಾದದಲ್ಲಿ ಸಂಧಾನ ಅಗತ್ಯವಿಲ್ಲ: ವಿಹಿಂಪ

   ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಪ್ರಕರಣ ಬುಧವಾರಕ್ಕೆ (ಡಿ. 6) 25 ವರ್ಷವಾಗಲಿದೆ. ಇನ್ನೇನು 25 ವರ್ಷಕ್ಕೆ ಒಂದು ದಿನ ಬಾಕಿ ಇರುವಾಗಲೇ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಲ್ಲಿ ನಡೆಯಲಿದೆ.

   Babri Masjid-Ram temple dispute: SC to begin final hearing in Ayodhya case today

   2010ರಲ್ಲಿ ಅಲಹಾಬಾದ್ ಹೈಕೋರ್ಟ್ ವಿವಾದಿತ ಬಾಬ್ರಿ ಮಸೀದಿ ಜಾಗವನ್ನು ಹಿಂದೂ ಮಹಾಸಭಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ಸಮಿತಿಗೆ ಹಂಚಿಕೆ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ 13 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ.

   ಈ ಎಲ್ಲಾ ಅರ್ಜಿಗಳ ಅಂತಿಮ ವಿಚಾರಣೆ ಇಂದಿನಿಂದ ನಡೆಯಲಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Just a day ahead of the 25th anniversary of the Babri Masjid demolition in Ayodhya on December 1992, the Supreme Court of India is set to begin final hearing in the politically controversial Babri Masjid-Ram temple dispute case.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ