Ayodhya Ram Mandir: ಆಧ್ಯಾತ್ಮಿಕ ಪ್ರವಾಸಿತಾಣದ ಮರುವ್ಯಾಖ್ಯಾನಕ್ಕೆ ಸಜ್ಜಾದ ಅಯೋಧ್ಯೆ
ಬೆಂಗಳೂರು, ಡಿಸೆಂಬರ್ 15: ಹಿಂದೂಗಳ ಪಾಲಿನ ಆರಾಧನೆಯ ಕೇಂದ್ರ ಬಿಂದು ಆಗಿರುವ ಆಯೋಧ್ಯೆ ರಾಮಮಂದಿರವು ಭಕ್ತಿ ಮತ್ತು ವಾಸ್ತುಶಿಲ್ಪದ ಪರಾಕ್ರಮದ ಸಂಕೇತವಾದ ಸ್ಮಾರಕ ಪ್ರವೇಶ ದ್ವಾರವು ಭಾರತದಾದ್ಯಂತದ ಭಕ್ತರ ಗಮನವನ್ನು ಸೆಳೆಯುತ್ತಿದೆ. ಇದರ ನಿರ್ಮಾಣವು ಭವ್ಯವಾದ ಪರಿವರ್ತನೆಗೆ ಸಾಕ್ಷಿಯಾಗುವುದಲ್ಲದೇ ಅಯೋಧ್ಯೆ ದೇಶದ ಪ್ರಮುಖ ಆಧ್ಯಾತ್ಮಿಕ ಪ್ರವಾಸಿ ತಾಣವಾಗಿ ಬದಲಾಗಲಿದೆ.
2024ರ ಜನವರಿಗೆ ಉದ್ಘಾಟನೆಗೆ ಸಿದ್ಧವಾಗುತ್ತಿರುವ ಅಯೋಧ್ಯೆ ಶ್ರೀರಾಮ ಮಂದಿರ ಮಾತ್ರವಲ್ಲದೇ ಇಲ್ಲಿನ ಬಹುತೇಕ ಸುತ್ತಮುತ್ತಲಿನ ಪ್ರದೇಶಗಳು ಅಭಿವೃದ್ಧಿ ಕಾಣುತ್ತಿವೆ. ಭಕ್ತರಿಗೆ ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಈ ಬಗ್ಗೆ "ಒನ್ ಇಂಡಿಯಾ"ಗೆ ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ (ಟಿಸಿಇ) ನಿಂದ ಮುಖ್ಯ ನಿರ್ಮಾಣ ವ್ಯವಸ್ಥಾಪಕ ರಾಜೀವ್ ಕುಮಾರ್ ಡಿಯೋ ಮಾಹಿತಿ ನೀಡಿದ್ದಾರೆ.

ಡೀಯೋ ಅವರ ನೇತೃತ್ವದ ಯೋಜನೆಯಂತೆ ಮಂದಿರದ (ಕಾರಿಡಾರ್) ನಿರ್ಮಾಣವು ಭರದಿಂದ ಸಾಗುತ್ತಿದೆ. ಭಕ್ತರಿಗೆ ಆರಾಮದಾಯಕ ಮತ್ತು ಆಧ್ಯಾತ್ಮಿಕವಾಗಿ ಶ್ರೀಮಂತ ಅನುಭವವು ಇಲ್ಲಿಂದ ಸಿಗುವಂತೆ. ಇದು ಭವಿಷ್ಯದಲ್ಲಿ ಭಕ್ತರ ಆಧ್ಮಾತ್ಮ ಕೇಂದ್ರ, ಆಧ್ಯಾತ್ಮಿಕ ಪ್ರವಾಸಿ ತಾಣವಾಗಲಿದೆ.
ಈಗಾಗಲೇ ದೂರದ ಪ್ರದೇಶಗಳಿಂದ ದೇವಾಲಯದ ನಿರ್ಮಾಣ ಪ್ರಗತಿಯನ್ನು ವೀಕ್ಷಿಸಲು ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ಒಂದು ಪ್ರಚಲಿತ ಭಾವನೆ ಹೊರಹೊಮ್ಮುತ್ತಿದೆ. ಸರ್ಕಾರವು ಈ ಯೋಜನೆಯನ್ನು ಶ್ಲಾಘನೀಯವಾಗಿ ಕಾರ್ಯಗತಗೊಳಿಸಿದೆ ಎಂದರು. ದೇಶದ ಹೃದಯಭಾಗದಲ್ಲಿ ಹಿಂದುತ್ವದ ಮಹತ್ವದ ಕೇಂದ್ರವಾಗಿಯು, ಪ್ರವಾಸಿ ತಾಣವಾಗಿಯೂ ಅಯೋಧ್ಯೆ ಬದಲಾಗುತ್ತಿದೆ.

ಭಕ್ತರಿಗೆ ಅನುಕೂಲಕ್ಕೆ ಒತ್ತು: ವ್ಯಾಪಾರ ದೃಷ್ಟಿ
ಆಗಮಿಸುವ ಭಕ್ತರಿಗೆ ಮಳೆ ಮತ್ತು ಬಿಸಿಲಿನಿಂದ ರಕ್ಷಿಸಲು ವಾಕಿಂಗ್ ಪ್ಯಾಸೇಜ್ ವಿನ್ಯಾಸಗೊಳಿಸಲಾಗಿದೆ. ಮಂದಿರಕ್ಕೆ ಬರಿಗಾಲಲ್ಲಿ ಬರುವವರೆ ಹೆಚ್ಚು. ಬರಿಗಾಲಿನಲ್ಲಿ ಪ್ರಾರ್ಥಿಸಲು ಆಯ್ಕೆ ಬರುವವರಿಗೆ ನೆರವಾಗುವ ರಸ್ತೆಗಳನ್ನು ನಿರ್ಮಿಸಲಾಗಿದೆ. ಈ ಮೂಲಕ ಮಂದಿರದ ಕೆಲ, ವಾಸುಶಿಲ್ಪ, ವಿನ್ಯಾಸದ ಕಡೆಗೆ ಭಕ್ತರು, ಇಲ್ಲಿನ ವ್ಯಾಪಾರ ಅಭಿವೃದ್ಧಿ ಕಡೆಗೂ ಕೇಂದ್ರ ಗಮನ ಹರಿಸಿರುವುದು ಗೊತ್ತಾಗುತ್ತದೆ.
ಇಲ್ಲಿನ ದೇವಾಲಯವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹೆಗ್ಗುರುತಾಗಲಿದೆ. ಸರ್ಕಾರದ ಸಮರ್ಪಿತ ಪ್ರಯತ್ನವನ್ನು ಶ್ಲಾಘಿಸಿದ ಭಕ್ತರು ನಿರ್ಮಾಣದ ಬಗ್ಗೆ ತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಚಿಕಣಿ ದೇವಾಲಯದ ಮಾದರಿಗಳನ್ನು ಮಾರಾಟ ಮಾಡುವ ಮಾರಾಟಗಾರ ಅರ್ಜುನ್, ನಿರ್ಮಾಣವು ಅಂತ್ಯಗೊಂಡು ಉದ್ಘಾಟನೆ ಆದ ಬಳಿಕ ನಮ್ಮ ವ್ಯಾಪಾರದಲ್ಲಿ ಏರಿಕೆ ಆಗಬಹುದು ಎಂದು ನೀರಿಕ್ಷೆ ಇಟ್ಟುಕೊಂಡಿದ್ದಾರೆ.
ಭಾರತದ ಜಾಗತಿಕ ಚಿತ್ರಣ ಬದಲಾಗಲಿದೆ
ದೇವಾಲಯದ ಸಂಕೀರ್ಣವು ಭಕ್ತರಿಗೆ ಬೇಕಾದ ಎಲ್ಲ ಅಗತ್ಯತೆ ಪೂರೈಸಲಿದೆ. ಲಾಕರ್ ಕೊಠಡಿಗಳು, ಕುಡಿಯುವ ನೀರಿನ ಕೂಲರ್‌ಗಳು, ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಸಂದರ್ಶಕ ರಾಜ್ ಕಿಶೋರ್ ಅವರು ದೇವಾಲಯದ ಪೂರ್ಣಗೊಂಡ ಬಳಿಕ ಭಾರತದ ಜಾಗತಿಕ ಚಿತ್ರಣ ಮತ್ತು ಇಲ್ಲಿನ ಪ್ರವಾಸೋದ್ಯಮದ ಅಭಿವೃದ್ಧಿ ಹೊಂದುತ್ತದೆ ಎಂದು ಅವರು ಮಾತನಾಡಿದ್ದಾರೆ.
ಮಕ್ಕಳಲ್ಲಿ ಮಂದಿರದ ಅನ್ವೇಷಣೆಯ ಉತ್ಸಾಹ
ಈಗಾಗಲೇ ಅಯೋಧ್ಯೆಗೆ ರಾಜಸ್ಥಾನ, ಹೈದರಾಬಾದ್ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳ ಪ್ರವಾಸಿಗರು ದೇವಾಲಯದ ಆಕಾರ, ವಿನ್ಯಾಸ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಸಂಭಾಜಿ ನಗರದ ಕುಟುಂಬವೊಂದು ತಾವು ಆಗಾಗ ಇಲ್ಲಿಗೆ ಭೇಟಿ ಕೊಡುತ್ತಿದ್ದು, ಸಂಭ್ರಮ ಹಂಚಿಕೊಂಡಿದ್ದಾರೆ. ಮಕ್ಕಳೂ ಸಹ ನಿರ್ಮಾಣ ಹಂತದಲ್ಲಿರುವ ದೇವಾಲಯವನ್ನು ಅನ್ವೇಷಿಸಲು ಉತ್ಸುಕರಾಗಿದ್ದಾರೆ ಎಂದರು.
ಈ ಮಂದಿರ ನಿರ್ಮಾಣದ ಕಾರಿಡಾರ್ ಯೋಜನೆಗೆ ಗೋಡೆಗಳಿಗೆ ಬಳಕೆಯಾದ ರಾಜಸ್ಥಾನ ಕೆಂಪು ಕಲ್ಲುಗಳು, ಪುಣೆಯ ದೇವಾಲಯದ ಸೌಲಭ್ಯಗಳಿಗಾಗಿ ಸ್ಟೀಲ್ ಗರ್ಡರ್‌ಗಳನ್ನು ಒಳಗೊಂಡಂತೆ ರಾಷ್ಟ್ರವ್ಯಾಪಿ ವಿವಿಧೆಡೆಯಿಂದ ಬಂದ ವಸ್ತುಗಳು ಸಹ ನೋಡುಗರನ್ನು ಬೆರೆಗುಗೊಳಿಸುತ್ತವೆ.
ಪ್ರವಾಸೋದ್ಯಮಕ್ಕೆ ಪೂರಕವಾಗಲಿದೆ ಇಲ್ಲಿನ ಏರ್‌ಪೋರ್ಟ್
ಮುಂದಿನ ವರ್ಷ ಜನವರಿ 22 ರಂದು ಪ್ರಧಾನಿ ಮೋದಿ ಅವರು ಈ ರಾಮಮಂದಿರವನ್ನು ಉದ್ಘಾಟನೆ ಮಾಡಲಿದ್ದಾರೆ. ಮರ್ಯಾದಾ ಪುರುಷೋತ್ತಮ ರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೂರದ ಭಕ್ತರಿಗೆ ಅನುಕೂಲವಾಗುವಂತೆ ನಿರ್ಮಾಣವಾಗುತ್ತಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ಆಧ್ಯಾತ್ಮಿಕ ಪ್ರವಾಸೋದ್ಯಮ ತಾಣಕ್ಕಾಗಿ ಸರ್ಕಾರದ ದೂರದೃಷ್ಟಿಗೆ ಪೂರಕವಾಗಿರಲಿದೆ. ಒಟ್ಟಾರೆ ಅಯೋಧ್ಯೆಯ ರಾಮಮಂದಿರವು ಭಕ್ತಿ ಕೇಂದ್ರವಾಗಿರದೇ ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಜಾಗತಿಕ ಮಟ್ಟದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ಸ್ಥಳವಾಗಿಯು ಹೆಗ್ಗುರುತು ಮೂಡಿಸಲಿದೆ.












Click it and Unblock the Notifications